ಬನ್ನಂಜೆ ಶ್ರೀ ಶನಿಕ್ಷೇತ್ರದಲ್ಲಿ ವಾರ್ಷಿಕ ಶನೈಶ್ವರ ಉತ್ಸವ ಸಂಪನ್ನ

ಉಡುಪಿ ​: ​ ಬನ್ನಂಜೆ ಗರಡಿ ರಸ್ತೆ  ಶ್ರೀ ಶನಿಕ್ಷೇತ್ರ ಬನ್ನಂಜೆ ಮಠದ ಕರ್ನಾಟಕದ ಅತೀ ದೊಡ್ಡ ಶ್ರೀ ಶನಿ ದೇವರ 23 ಅಡಿ ಎತ್ತರದ ಏಕಶಿಲಾ ಮೂರ್ತಿ ಸನ್ನಿಧಾನದಲ್ಲಿ  ವಾರ್ಷಿಕ ಶನೈಶ್ವರ ಉತ್ಸವವು ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀಪಾದರ ದಿವ್ಯ​ ​ಮಾರ್ಗದರ್ಶನದಲ್ಲಿ ಶನಿವಾರ  ಶ್ರೀ ರಾಮ ವಿಠ್ಠಲ್ , ಹಾಗು ಶನೈಶ್ಚರ ಸ್ವಾಮಿಯ ಸನ್ನಿದಿಯಲ್ಲಿ​  ನಡೆಯಿತು. ಶನಿಶಾಂತಿ   ಯಾಗದ ಧಾರ್ಮಿಕ ಪೂಜಾ ​ವಿಧಿ ವಿಧಾನಗಳು ಕೊರಂಗ್ರಪಾಡಿ ಕುಮಾರ ಗುರು ತಂತ್ರಿ ನೇತ್ರ್ಟ್ವದಲ್ಲಿ ​ಜರಗಿತು. ಶ್ರೀ ದೇವರ ಸನ್ನಿದಿಯಲ್ಲಿ  ಸಾಮೂಹಿಕ ಪ್ರಾಥನೆ,​ ​ಪಂಚಾಮೃತ ಅಭಿಷೇಕ, ಯಾಗದ ​ಪೂರ್ಣಾಹುತಿ,​ ​ಪಲ್ಲಪೂಜೆ,​ ​ಮಂಡಲಪೂಜೆ,  ಉತ್ಸವ ಬಲಿ ಪೂಜೆ , ಬಳಿಕ  ಮದ್ಯಾಹ್ನ  ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸುಮಾರು 2 ಸಾವಿರ  ಹೆಚ್ಚಿನ ಭಕ್ತ​ರು ಭೋಜನ ಪ್ರಸಾದ ಸ್ವೀಕರಿಸಿದರು,  ​​ಶನಿದೇವರಿಗೆ ತೈಲಾಭಿಷೇಕ,ಎಳ್ಳು ದೀಪ ಬೆಳಗಿಸಿ ಶನಿಯಾಗದಲ್ಲಿ ​ಭಕ್ತಾಧಿಗಳು ​ಭಾಗವಹಿದರು​. 

                                                                                                                                                          
​ಈ ಸಂದರ್ಭದಲ್ಲಿ ​ಸತ್ಯನಾರಾಯಣ ಆಚಾರ್ಯ, ಜಯಲಕ್ಷ್ಮೀ  ಆಚಾರ್ಯ, ಪ್ರಹ್ಲಾದ ಆಚಾರ್ಯ, ಯತೀಶ್ ಆಚಾರ್ಯ ನೂರಾರು ಭಕ್ತ​ರು ​ ಉಪಸ್ಥರಿದ್ದರು ​​​​
 
 
 
 
 
 
 
 
 
 
 

Leave a Reply