ವಿದ್ಯುತ್ ನಡೆದು ಬಂದ ದಾರಿ ಮತ್ತು ವಿದ್ಯುತ್ ಜೀವನ ಪುಸ್ತಕ ಲೋಕಾರ್ಪಣೆ 

ಮಣಿಪಾಲದ ಕೆ ಹೆಚ್ ಬಿ ಕಾಲೋನಿಯಲ್ಲಿರುವ ಮಣಿಪಾಲ್ ಹಿಲ್ಸ್ ರೋಟರಿ ಮಕ್ಕಳ ಗ್ರಂಥಾಲಯದಲ್ಲಿ ವಿದ್ಯುತ್ ನಡೆದು ಬಂದ ದಾರಿ ಮತ್ತು ವಿದ್ಯುತ್ ಜೀವನ ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮವು ನಡೆಯಿತು.
ಮಣಿಪಾಲದ ವಸಂತ ಗೀತ ಪ್ರಕಾಶನದಿಂದ ಪ್ರಕಟಣೆಯಾದ ಈ ಪುಸ್ತಕದ ಲೇಖಕರು ಶ್ರೀ ಗೋಪಿನಾಥ್ ರಾವ್ ಸರ್ವದೇ. ಇವರು ಕರ್ನಾಟಕ ಎಲೆಕ್ಟ್ರಿಸಿಟಿ ಬೋರ್ಡ್ ನ ನಿವೃತ್ತ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್.
ಪುಸ್ತಕ ಬಿಡುಗಡೆಗೊಳಿಸಿದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಪುಸ್ತಕದ ಬಗ್ಗೆ ಮಾತನಾಡಿ, ಲೇಖಕರು ಕೆ ಇ ಬೀ ನೌಕರರ ಕೆಲಸ ಕಾರ್ಯದ ಬಗ್ಗೆ ಹಾಗೂ ಅಂದಿನ ಕೆಲಸ ಮತ್ತು ಇಂದಿನ ನೌಕರರ ಕೆಲಸದ ಬಗ್ಗೆ ಒಳ್ಳೆಯ ಮಾಹಿತಿ ನೀಡಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
ರೊ। ಶ್ರೀ ಸಿ ಎ ದೇವಾನಂದ್ ಜಿಲ್ಲಾ ಗವರ್ನರ್ ರೋಟರಿ ಜಿಲ್ಲೆ 3182,  ಎನ್ ರಘುಪ್ರಕಾಶ್ ವಿಶ್ರಾಂತ ತಾಂತ್ರಿಕ ನಿರ್ದೇಶಕರು, ಕೆ ಪಿ ಟಿ ಸಿ ಎಲ್ ಬೆಂಗಳೂರು, ಜಯಶ್ರೀ, ಚೀಫ್  ಲೈಬ್ರೇರಿಯನ್ , ಜಿಲ್ಲಾ ಕೇಂದ್ರ ಗ್ರಂಥಾಲಯ, ಉಡುಪಿ, ಶ್ರೀ ರವಿರಾಜ್ ಎಚ್ ಪಿ.,  ಅಧ್ಯಕ್ಷರು , ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ , ಶ್ರೀ ಎಸ್ ಗಣರಾಜ ಭಟ್, ಎ ಇ ಇ, ಕೆ ಪೀ ಟಿ ಸಿ ಎಲ್, ಉಡುಪಿ, ಶ್ರೀ ಮಾಧವ ಮಯ್ಯ, ಕಾರ್ಯದರ್ಶಿ ರೋಟರಿ ಮಣಿಪಾಲ ಹಿಲ್ಸ್, ಮಣಿಪಾಲ್ ಮುಂತಾದವರು ಕಾರ್ಯ್ರಮದಲ್ಲಿ ಭಾಗವಹಿಸಿ, ಪುಸ್ತಕದ ಬಗ್ಗೆ ಹಾಗೂ ಲೇಖಕರ ಬಗ್ಗೆ ಮಾತ ನಾಡಿದರು.
ವಸಂತ ಗೀತ ಪ್ರಕಾಶನದ ಪ್ರಕಾಶಕರಾದ ಶ್ರೀಮತಿ ವಸಂತ ಗೋಪಿನಾಥ್ ರಾವ್ ಹಾಗೂ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು . ಮಲ್ಲಿಕಾ, ಪುರುಷೋತ್ತಮ್ ಮಕ್ಕಿತ್ತಾಯ , ಮಂಜುನಾಥ ಭಟ್ ಹಾಗೂ ಶಶಿಕಾಂತ್ ಇವರನ್ನು ಶ್ರೀ ಪುರುಷೋತ್ತಮ್  ಸರ್ವದೇ ಸನ್ಮಾನಿಸಿದರು. ಜ್ಯೋತಿ ಪುರುಷೋತ್ತಮ್ ನಿರೂಪಿಸಿದರು. ವಿಜಯ್ ಸ್ವಾಗತಿಸಿದರು. ಉದಯ್ ಕುಮಾರ್ ವಂದಿಸಿದರು
 
 
 
 
 
 
 
 
 
 
 

Leave a Reply