ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ

ಉಡುಪಿ: ಹಿರಿಯ ಸಂಸ್ಕೃತ ವಿದ್ವಾಂಸ, ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯ (84) ಇಂದು ತಮ್ಮ ಸ್ವಗೃಹ ಅಂಬಲಪಾಡಿಯಲ್ಲಿ ಬೆಳಗ್ಗೆ ನಿಧನರಾಗಿದ್ದಾರೆ. ಹಲವು ತಿಂಗಳುಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಹೆಚ್ಚು ಪ್ರವಚನಗಳಿಗೆ ಹಾಜರಾಗದೆ ಮನೆಯಲ್ಲೇ ಇದ್ದು ಭಗವದ್ಗೀತೆಯ ರಚನಾ ಕಾರ್ಯದಲ್ಲಿ ಮಗ್ನರಾಗಿದ್ದರು.ಬನ್ನಂಜೆಯವರ ಕಿರಿಯ ಮಗ ಕೆಲವು ದಿನಗಳ ಹಿಂದೆ ಮೃತರಾಗಿದ್ದು, ಭಾನುವಾರ ಮನೆಯಲ್ಲೇ 12ನೇ ದಿನದ ವಿಧಿ ವಿಧಾನ ನಡೆಸಲು ತಯಾರಿ ನಡೆಸಲಾಗುತ್ತಿತ್ತು. ಈ ಮಧ್ಯೆ ಕುಟುಂಬಕ್ಕೆ ಮತ್ತೊಂದು ಆಘಾತ ಉಂಟಾಗಿದೆ. 

ಸಾಧನೆಯ ಕ್ಷೇತ್ರ: ಪತ್ರಕರ್ತ –ಸಾಹಿತ್ಯ -ಸಂಶೋಧಕ –ಕವಿ –ಅನುವಾದಕ –ಉಪನ್ಯಾಸಕ –ಪ್ರವಚನ ವಿದ್ವಾಂಸ ಉದ್ಯೋಗ : ಉದಯವಾಣಿ ದಿನಪತ್ರಿಕೆಯಲ್ಲಿ ಪತ್ರಕರ್ತ, ಸಾಪ್ತಾಹಿಕ ವಿಭಾಗ ಸಂಪಾದಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ .
ಸಾಹಿತ್ಯಿಕ ಸಾಧನೆಗಳು :ಈ ತನಕ ಸಂಸ್ಕೃತ ದಲ್ಲಿ ಸುಮಾರು ಕೃತಿಗಳು ಕನ್ನಡದಲ್ಲಿ ಸುಮಾರು 120/ಕೃತಿಗಳ ಸಂಸ್ಕೃತ ದಿಂದ ಕನ್ನಡಕ್ಕೆ ಅನುವಾದ ಸುಮಾರು 50 ಕೃತಿ ಸೇರಿ ) ರಚನೆ ಮತ್ತು ಪ್ರಕಾಶನ ಭಾರತದ ಪ್ರಾಚೀನ ಜ್ಞಾನ ಶಾಖೆಗಳಾದ ವೇದ – ಉಪನಿಷತ್ತು – ಪುರಾಣ- ರಾಮಾಯಣ – ಮಹಾಭಾರತ ಇತ್ಯಾದಿಗಳ ಕುರಿತು ದೇಶ ವಿದೇಶಗಳಲ್ಲಿ ಈ ತನಕ ಸುಮಾರು 30000 ಸಾವಿರ ಘಂಟೆಗಳಷ್ಟು ಉಪನ್ತಾಸ ಪ್ರವಚನಗೈದ ದಾಖಲೆ .

ಸಾಧನೆಗೆ ಸಂದ ಪ್ರಶಸ್ತಿ ಪುರಸ್ಕಾರಗಳು : ರಾಜ್ಯ ಮಟ್ಟದ ಪ್ರಶಸ್ತಿಗಳು :ಉಡುಪಿ ಶ್ರೀ ಕೃಷ್ಣ ಮಠ ಅಷ್ಟಮಠಗಳು ಸೇರಿದಂತೆ ಅನೇಕ ಪ್ರಸಿದ್ಧ ಮಠ ಸಂಸ್ಥಾನಗಳಿಂದ ವಿದ್ಯಾ ವಾಚಸ್ಪತಿ, ವಿದ್ಯಾರತ್ನಾಕರ, ಪಂಡಿತರತ್ನ, ಸಂಶೋಧನಾ ವಿಚಕ್ಷಣ ಪಂಡಿತಾಚಾರ್ಯ ಇತ್ಯಾದಿ ಬಿರುದು ಪ್ರದಾನ ಉಡುಪಿ ಶ್ರೀ ಕೃಷ್ಣ ಮಠದ ಆಸ್ಥಾನ‌ ವಿದ್ವಾನ್ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 1974 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಆಳ್ವಾಸ್ ನುಡಿಸಿರಿ ಪ್ರಶಸ್ತಿ,ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್,.

ರಾಷ್ಟ್ರೀಯ ಪ್ರಶಸ್ತಿಗಳು : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾರತ ಸರಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ 2009 ಅಂತಾರಾಷ್ಟ್ರೀಯ ಮಾನ್ಯತೆ : 2008 ರಲ್ಲಿ ಅಮೇರಿಕಾದಲ್ಲಿ ( ಪ್ರಿನ್ಸ್ಟನ್) ನಡೆದ ವಿಶ್ವಶಾಂತಿ ಸಮ್ಮೇಳನಕ್ಕೆ ವಿಶೇಷ ಆಹ್ವಾನಿತರಾಗಿ ಭಾಗಿ.

ಸಾಮಾಜಿಕ ಸೇವೆ : ನೆರೆ ಪ್ರವಾಹಗಳ ಸಂದರ್ಭಗಳಲ್ಲಿ ಸಂತ್ರಸ್ತರ ನೆರವಿಗಾಗಿ ಮಾನವೀಯತೆಯ ನೆಲೆಯಲ್ಲಿ ರಾಜ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಲಕ್ಷಕ್ಕೂ ಮಿಕ್ಕಿದ ಆರ್ಥಿಕ ದೇಣಿಗೆ  ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಂತ್ರಸ್ತರಾದ ಬಡವರಿಗೆ ಆಹಾರ ಸಾಮಗ್ರಿ ‌ವಿತರಣೆ ಬನ್ನಂಜಗೋವಿಂದಾಚಾರ್ಯರು ವೈದಿಕ ವಿದ್ಯಾರ್ಥಿವೇತನಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ.

ಅವರು ಈ ವಿಷಯದ ಬಗ್ಗೆ ಹಲವಾರು ವ್ಯಾಖ್ಯಾನಗಳು, ಅನುವಾದಗಳು ಮತ್ತು ಮೂಲ ಕೃತಿಗಳನ್ನು ರಚಿಸಿದ್ದಾರೆ. ನಿಯತಕಾಲಿಕಗಳಲ್ಲಿ ಅವರು ನೂರಾರು ಲೇಖನಗಳನ್ನು ನೀಡಿದ್ದಾರೆ. ಅವರು ಭಾರತೀಯ ತತ್ವಶಾಸ್ತ್ರ ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ ಪ್ರವಚನಗಳನ್ನು ನೀಡುವ ಮೂಲಕ ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತ ಪ್ರವಾಸ ಮಾಡಿದ್ದರು.

ದ್ಮಶ್ರೀ ಪುರಸ್ಕೃತ ಪ್ರವಚನಕಾರ ಗೋವಿಂದಾಚಾರ್ಯರು ಪ್ರವಚನ ನೀಡುವುದರೊಂದಿಗೆ ಮಧ್ವ ಸಿದ್ಧಾಂತದ ಪ್ರತಿಪಾದಕರು ಆಗಿದ್ದರು. ಪತ್ರಕರ್ತರಾಗಿ ಅನೇಕ ಅಂಕಣಗಳನ್ನು ಬರೆದಿದ್ದರು.ನಟ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ರವರ ಆಧ್ಯಾತ್ಮಿಕ ಗುರುವಾಗಿದ್ದ ಇವರು ಮಧ್ವಾಚಾರ್ಯ, ಶಂಕರಾಚಾರ್ಯ, ರಾಮಾನುಜಾಚಾರ್ಯ ಈ ಮೂರು ಚಿತ್ರಗಳ ಸಂಭಾಷಣೆಯನ್ನು ರಚಿಸಿದ್ದಾರೆ.

ಮಧ್ವ ಸಿದ್ಧಾಂತದ ಮೇರು ವ್ಯಕ್ತಿತ್ವವಾಗಿದ್ದ ಇವರು ಹಲವಾರು ಕೃತಿಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಹಾಗೆ ಹಲವಾರು ಉಪನಿಷತ್ತಿನ ಅಧ್ಯಾಯಗಳಿಗೆ ಟಿಪ್ಪಣಿ ಬರೆದಿದ್ದರು. ಇದೀಗ ತಮ್ಮ ಅಪಾರ ಅನುಯಾಯಿಗಳನ್ನು ತೊರಿದು ಇಹ ಲೋಕ ತ್ಯಜಿಸಿದ್ದಾರೆ.

 
 
 
 
 
 
 
 
 
 
 

Leave a Reply