ಡಿಪಿಎಲ್ ಸೀಸನ್ 1: ಓಶನ್ ರಿಯಲ್ ಫೈಟರ್ಸ್ ತಂಡ ಚಾಂಪಿಯನ್

ಉಡುಪಿ: ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ವತಿಯಿಂದ ಭಾನುವಾರ ಮಣಿಪಾಲದ ಲೇಕ್ ವೀವ್ ಗ್ರೌಂಡ್ ನಲ್ಲಿ ಡಿಪಿಎಲ್ ಸೀಸನ್ 1 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಒಟ್ಟು ನಾಲ್ಕು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. 
ಓಶನ್ ರಿಯಲ್ ಫೈಟರ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಟ್ರೋಫಿ ಜೊತೆಗೆ 25000 ರೂಗಳ ಬಹುಮಾನ ಪಡೆದುಕೊಂಡಿತು.ಈ ಸಂದರ್ಭ ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ಅಧ್ಯಕ್ಷ ಮೊಹಮ್ಮದ್ ಅಶ್ರಫ್, ಗೌರವಾಧ್ಯಕ್ಷ ಸದಾಶಿವ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಆಲ್ವಿನ್ ಪಿಂಟೋ ಮತ್ತು ಶಶಿಕುಮಾರ್ ಶೆಟ್ಟಿ, ಸಂಘದ ಕಾರ್ಯದರ್ಶಿ ಉದಯ್ ಕಿರಣ್, ಸಂಘದ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply