ಸಾಕ್ಷ್ಯಚಿತ್ರಗಳು ವಾಸ್ತವವನ್ನು ಅದು ಇದ್ದ ಹಾಗೆ ಹಿಡಿಯಲು ಯತ್ನಿಸುತ್ತವೆ.~ ಪಿ.ಎನ್.ರಾಮಚಂದ್ರ

ಸಾಕ್ಷ್ಯಚಿತ್ರಗಳು (Documetary) ವಾಸ್ತವವನ್ನು ಅದು ಇದ್ದ ಹಾಗೆ ಹಿಡಿಯಲು ಯತ್ನಿಸುತ್ತವೆ. ವಾಸ್ತವವಾದ ಎನ್ನುವುದು ವಾಸ್ತವತೆಗೆ ಕಲಾತ್ಮಕತೆಯ ಸ್ಪರ್ಶ ನೀಡುವ ಪ್ರಯತ್ನ ಮಾಡುತ್ತವೆ, ಎಂದು ಪ್ರಶಸ್ತಿ ವಿಜೇತ, ಚಲನಚಿತ್ರ ನಿರ್ದೇಶಕ ಪಿ.ಎನ್.ರಾಮಚಂದ್ರ ಹೇಳಿದರು.

ತಮ್ಮ’Unbearable being of lightness’ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ ಬಳಿಕ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಸಾಕ್ಷ್ಯಚಿತ್ರಗಳು ಹಸಿ ವಾಸ್ತವವನ್ನು ಸೆರೆಹಿಡಿಯುತ್ತಲೇ, ಒಂದು ವಾಸ್ತವವಾದಿ ಕಲಾತ್ಮಕತೆಯನ್ನು ಅನುಸರಿಸುತ್ತವೆ. ಕೆಲವು ಸಂದರ್ಭಗಳಲ್ಲಿ ಈ ಕಲಾತ್ಮಕತೆಗಿಂತಲೂ ಅವುಗಳ ವಿಷಯ ಹೆಚ್ಚಿನ ಪ್ರಾಧಾನ್ಯ ಪಡೆಯುತ್ತವೆ ಎಂದರು.

ಈ ಸಾಕ್ಷ್ಯಚಿತ್ರವನ್ನು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್(ಜಿಸಿಪಿಎಎಸ್)ನ ಆಶ್ರಯದಲ್ಲಿ ಪ್ರದರ್ಶಿಸಲಾಯಿತು. ಮೂಲತಃ ಉಡುಪಿಯವರಾದ ರಾಮಚಂದ್ರ ಇವರು ಪ್ರಸಿದ್ಧ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಚಿತ್ರ ನಿರ್ದೇಶನವನ್ನು ಅಭ್ಯಾಸಮಾಡಿ ನಂತರ ಮುಂಬೈಯಲ್ಲಿ ನೆಲೆಸಿದರು.

‘ಹಾರ್ಟ್ ಟ್ರಬಲ್ಸ್ ಆಫ್ ರಾಮಚಂದ್ ಯಾವತ್ಮಲ್ ತಿರಿಚುಯಿನಪಳ್ಳಿ ಅಜಮಘರ್’, ‘ಸುದ್ಧ’, ‘ಪುಟಾಣಿ ಪಾರ್ಟಿ’, ‘ರೈಸ್ ಆಂಡ್ ಸಾಂಬಾರ್’ ಇವು ಇವರ ರಾಷ್ಟ್ರೀಯ-ತಾರಾಷ್ಟ್ರೀಯ ಮನ್ನಣೆ ಪಡೆದ ಮುಖ್ಯ ಚಲನಚಿತ್ರಗಳಾಗಿವೆ. ಅವರು ಈಗ ಗುಜರಾತಿನ ಕರ್ಣಾವತಿ ವಿಶ್ವವಿದ್ಯಾಲಯದ ಫಿಲ್ಮ್ ಸ್ಕೂಲಿನ ಮುಖ್ಯಸ್ಥರಾಗಿದ್ದಾರೆ.

ಅವರ ಬಹುಚರ್ಚಿತ ಸಾಕ್ಷ್ಯಚಿತ್ರವಾದ ‘Unbearable being of lightness’ ಹೈದರಾಬಾದ್ ವಿಶ್ವ ವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಆತ್ಮಹತ್ಯೆಯ ಸುತ್ತಮುತ್ತಲಿನ ಘಟನೆಗಳನ್ನು ಒಳಗೊಂಡಿದೆ. ರಾಮಚಂದ್ರ ಆ ಘಟನೆ ನಡೆಯುವ ಹೊತ್ತಿಗೆ ಅಲ್ಲಿಯಾ ಮೀಡಿಯಾ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಿಕೊಡಲು ಹೈದರಾಬಾದ್ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿದ್ದರು. ಹೀಗಾಗಿ ಈ ಸಾಕ್ಷ್ಯಾಚಿತ್ರ ತುಂಬಾ ಮಹತ್ವ ಪಡೆದಿದೆ.

ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಚಿತ್ರ ನಿರ್ದೇಶಕರಾದ ರಾಮಚಂದ್ರ-  ಆ ಸಂದರ್ಭದ ಅಪಾರ ವಿಷಾದವನ್ನು ಚಿತ್ರ, ಅಲ್ಲಿ ನಡೆದ ಘಟನೆಗಳು, ಪತ್ರಿಕಾ ವರದಿ ಹಾಗೂ ವಿದ್ಯಾರ್ಥಿಯ ಕೊನೆಯ ಪತ್ರ ಇವುಗಳನ್ನು ಆಧರಿಸಿ ಸೆರೆಹಿಡಿಯಲು ಯತ್ನಿಸಿದೆ ಎಂದರು. ವಿದ್ಯಾರ್ಥಿಗಳು ಸಾಕ್ಷ್ಯಚಿತ್ರದ ಮೂಲಕ ತೋರಿಸಲ್ಪಡುವ ಸಾಮಾಜಿಕ ತಾರತಮ್ಯ, ದೃಶ್ಯ ರೂಪಕಗಳು, ಸಂಗೀತ, ಕಥನದ ಆಕೃತಿ, ಫೈಜ್ ಅಹಮದ್ ಫೈಜ್ ಕವಿತೆ ಇವೆಲ್ಲವನ್ನೂ ಚರ್ಚಿಸಿದರು.

ಜಿಸಿಪಿಎಎಸ್ ನ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ, ಪ್ರೊ.ನೇಮಿರಾಜ್ ಶೆಟ್ಟಿ, ಡಾ. ಜನಾರ್ದನ್ ಹಾವಂಜೆ, ಡಾ. ಭ್ರಮರಿ ಶಿವಪ್ರಕಾಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಈ ಸಾಕ್ಷ್ಯಚಿತ್ರದ ಶೀರ್ಷಿಕೆ ಪ್ರಸಿದ್ಧ ಫ್ರೆಂಚ್ ಲೇಖಕ ಮಿಲನ್ ಕುಂದೇರಾ ಅವರ ಕಾದಂಬರಿಯನ್ನು ನೆನಪಿಸುತ್ತದೆ.

 
 
 
 
 
 
 
 
 
 
 

Leave a Reply