ಅಮರ ಯೋಧನ ನಾಡಿನಲ್ಲಿ…

ಅಮರಗಿರಿ ಒಂದು ಅಪರೂಪದ ಪರಿಕಲ್ಪನೆ. ಭಾರತಮಾತೆ, ಯೋಧರು ಹಾಗೂ ಅನ್ನದಾತರನ್ನು ನೆನಪಿಸುವ, ಗೌರವಿಸುವ ತಾಣ. ಅಮೃತಶಿಲೆಯಲ್ಲಿ ಕೆತ್ತಿದ ವಿಗ್ರಹಗಳು. ಇವುಗಳ ವೀಕ್ಷಣೆಯಿಂದ ಬದುಕಿನ ಭಾವತೇವಗಳು ಮರುಜೀವ ಪಡೆಯುತ್ತವೆ.

ದೇವತಾರಾಧನೆ, ರಾಷ್ಟ್ರಾರಾಧನೆ, ಕಲಾರಾಧನೆ, ನಿಸರ್ಗಾರಾಧನೆಗಳ ಮೂಲಕ ಭವ್ಯ ಭಾರತವನ್ನು ಕಟ್ಟುವ ಪ್ರಕ್ರಿಯೆಗಳಿಗೆ ಅಮರಗಿರಿ ಆರಂಭದ ತಾಣವಾಗಿದೆ.

ಬದುಕು ಸಮಾಜಕ್ಕಾಗಿ ಪ್ರಾಣ ದೇಶಕ್ಕಾಗಿ ಎನ್ನುವ ದಿವ್ಯ ಸಂದೇಶವಿದೆ. ಪುತ್ತೂರು ಹನುಮಗಿರಿ ಪಂಚಮುಖಿ ಆಂಜನೇಯ ಹಾಗೂ ಏಕಶಿಲಾ ಕೋದಂಡರಾಮ ದೇವಸ್ಥಾನದ ಪಕ್ಕದಲ್ಲಿ ಈ ಭವ್ಯ ಅಮರಗಿರಿಯನ್ನು ಕಾಣಬಹುದು. ಹನುಮಂತ ಅಮರ. ಇವರ ಸ್ಫೂರ್ತಿಯ ಅನಾವರಣ ಇಲ್ಲಾಗಿದೆ. 

ಕ್ಲಿಕ್ ~ಸುಶಾಂತ್ ಭಟ್ ಕೆರೆಮಠ

 
 
 
 
 
 
 
 
 
 
 

Leave a Reply