ಮಹೋಷದ ಕಲ್ಪ – ಅಮೇರಿಕಾದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸಾ ಕ್ರಮ

ಒಂದು ಜೀವಕಣ ವಿಭಜನೆಗೊಂಡು ಎರಡಾಗುವುದು, ಎರಡು ನಾಲ್ಕಾಗುವುದು, ಪ್ರಕೃತಿಯ ನಿಯಮದಂತೆ ನಡೆಯುವ ಈ ಪ್ರಕ್ರಿಯೆಯು ಜೀವಿಯನ್ನು ಜೀವಂತವಾಗಿಡುತ್ತದೆ. ಆದರೆ ಕಾರಣಾಂತರದಿoದ ಒಂದು ಜೀವಕಣ ಅಸ್ವಾಭಾವಿಕವಾಗಿ
ವಿಭಜನೆಗೊಂಡು ಹತ್ತಾಗುವುದು ಮತ್ತು ಹತ್ತು ನೂರಾಗುವ ಜೀವಕಣದ ಬುದ್ಧಿಭ್ರಮಣೆಯ ಈ ಪ್ರಕ್ರಿಯೆಗೆ ಕ್ಯಾನ್ಸರ್ ಎನ್ನಲಾಗುತ್ತದೆ. ಕ್ಯಾನ್ಸರ್ ದೇಹದ ಯಾವ
ಅಂಗವನ್ನು ಆವರಿಸಿದೆಯೋ ಆ ಹೆಸರನ್ನು ಪಡೆದುಕೊಳ್ಳುತ್ತದೆ.
ಕಾರಣಗಳು:- ಭಗವಾನ್ ಬುದ್ಧನ ಉಪದೇಶದಿಂದ ಪ್ರೇರಣೆಗೊoಡು ಅಭಿವೃದ್ಧಿ ಪಡಿಸಲಾದ ಮಹೋಷದ ಕಲ್ಪವೆಂಬ ಈ ಚಿಕಿತ್ಸಾ ಕ್ರಮದಲ್ಲಿ ಕ್ಯಾನ್ಸರ್ ಕಾಯಿಲೆ
ಉತ್ಪತ್ತಿಯಾಗಲು ಈ ಕೆಳಗಿನ ನಾಲ್ಕು ಮುಖ್ಯ ಕಾರಣಗಳನ್ನು ವಿವರಿಸಲಾಗಿದೆ. ಮಿಥ್ಯಾಹಾರ, ದೋಷಯುಕ್ತ ದಿನಚರ್ಯ ಮತ್ತು ಋತುಚರ್ಯ, ಚಿತ್ತದ ಅಶುದ್ಧತೆ ಹಾಗೂ ಅಶುದ್ಧ ಚಿತ್ತದ ಪ್ರಭಾವದಿಂದ ಪೂರ್ವದಲ್ಲಿ ಮಾಡಿರಬಹುದಾದ ಕರ್ಮ.
ಪರಿಹಾರ:- ಮೇಲಿನ ಕಾರಣಗಳನ್ನು ಸರಿಪಡಿಸಲು ಸರಿಯಾದ ಆಹಾರ ಕ್ರಮ ಮತ್ತು ಪಥ್ಯ, ಸರಿಯಾದ ದಿನಚರ್ಯ ಮತ್ತು ಋತುಚರ್ಯ, ಚಿತ್ತಶುದ್ಧಿಗೆ ಭಗವಾನ್ ಬುದ್ಧನು ವಿವರಿಸಿದ ಸಮತ, ಮೈತ್ರಿ ಮತ್ತು ವಿಪಸ್ಸನ ಧ್ಯಾನ ಕ್ರಮಗಳು ಹಾಗೂ ಪಿರಮಿಡ್ ಥೆರಪಿ. “ಕಾಯಿಲೆಯೆಂದರೆ ವೈರಿಯಲ್ಲ ಪ್ರಕೃತಿ ನಿಯಮವನ್ನು ಅರುಹಲು ಬಂದ ಅತಿಥಿ” ಎಂಬ ಬುದ್ಧನ ಧ್ಯೇಯ ವಾಕ್ಯವನ್ನು ಚಿಕಿತ್ಸೆಯಲ್ಲಿ ಅಳವಡಿಸಿಕೊಂಡು ಈ ಅತಿಥಿಯನ್ನು
ಗೌರವದಿಂದ ಉಪಚರಿಸಲಾಗುವುದು. ಕ್ಯಾನ್ಸರ್ ರೋಗಿಯೂ ತನ್ನ ದೇಹಕ್ಕೆ ಬಂದ ಈ ಕಾಯಿಲೆಯು ಅತಿಥಿಯೆಂಬ ಸತ್ಯವನ್ನು ಅರಿತಾಗ ರೋಗಿಯ ಹತಾಶತೆ ಗಣನೀಯವಾಗಿ ಕಡಿಮೆಯಾಗಿ ರೋಗಿಯನ್ನು ಕಾಡುವ ಮೂರು ಬಗೆಯ ಭಯಗಳಾದ
ನೋವಿನ ಭಯ, ಕಾಯಿಲೆಯ ಭಯ ಹಾಗೂ ಸಾಯುವ ಭಯಗಳಿಂದ ಪಾರಾಗಿ ನಿರ್ಲಿಪ್ತತೆಯಿಂದ ಪ್ರಕೃತಿ ನಿಯಮದ ವಿವಿಧ ಆಯಾಮಗಳನ್ನು ಅರಿಯುವಲ್ಲಿ ಯಶಸ್ಸನ್ನು ಕಾಣುವನು.
ವೈಜ್ಞಾನಿಕ ಸಂಶೋಧನೆಗಳು:- ಕಳೆದ ಹದಿನೇಳು ವರ್ಷಗಳಿಂದ ಸಾವಿರದ ನೂರಕ್ಕೂ ಮಿಕ್ಕಿ ವಿವಿಧ ತರಹದ ಕ್ಯಾನ್ಸರ್ ಪೀಡಿತ ರೋಗಿಗಳು ಈ ಮಹೋಷದ ಕಲ್ಪದ
ಉಪಯೋಗವನ್ನು ಪಡೆದಿದ್ದು ವಿಶೇಷವಾಗಿ ಶ್ವಾಸಕೋಶದ
ಕ್ಯಾನ್ಸರ್ ರೋಗಿಗಳ ಐದು ವರ್ಷಗಳ ಸರ್ವೈವಲ್ ರೇಟ್ ಶೇಕಡಾ ೩೧ರಷ್ಟು ಇರುವುದು (ಈ ವರ್ಗದ ರೋಗಿಗಳ  ಜಾಗತಿಕ ಸರ್ವೈವಲ್  ರೇಟ್ ೫%) ಈಚಿಕಿತ್ಸಾ ಕ್ರಮದ ವೈಶಿಷ್ಠ್ಯ. ಜೀವಕಣದ ಬುದ್ಧಿವಂತಿಕೆಯನ್ನು ಎಚ್ಚರಿಸಿ ಅದರ ಅನಿಯಮಿತ ವಿಭಜನೆ ಮತ್ತು ಹರಡುವಿಕೆಯನ್ನು ತಡೆಯಲು ಸಹಾಯ ಮಾಡುವ ಹಾಗೂ ಯಾವ ದುಷ್ಪರಿಣಾಮಗಳೂ ಇಲ್ಲವೆಂದು ವೈಜ್ಞಾನಿಕವಾಗಿ ದೃಢಪಟ್ಟಿರುವ ಮುನೆಕ್ಸ್ ಮಾತ್ರೆಗಳು,
ರೋಗ ನಿರೋಧಕ ಶಕ್ತಿಯನ್ನು ವೃದ್ಧಿಗೊಳಿಸುವ ಹಿರಣ್ಯಪ್ರಾಶದ ಬಿಂದುಗಳು ಹಾಗೂ ಪೀಡಿತ ದೇಹದ ವಿವಿಧ ಅಂಗಗಳ ಚಿಕಿತ್ಸೆಗೆ ಸಹಾಯ ಮಾಡುವ ಸಂಸ್ಥೆಯ ವಿವಿಧ
ಔಷಧಿಗಳು ಈ ಚಿಕಿತ್ಸೆಯಲ್ಲಿ ಒಳಗೊಂಡಿದೆ. ಈ ಎಲ್ಲಾ ಸಂಶೋಧಿತ ಔಷಧಿಗಳಿಗೆ ಮತ್ತು ಚಿಕಿತ್ಸಾ ಕ್ರಮಕ್ಕೆ ಅಮೇರಿಕಾದ ೧೭ ಪೇಟೆಂಟ್ ದೊರೆತಿರುವುದು ಇಲ್ಲಿ ಸ್ತುತ್ಯರ್ಹ.
ಮಹೋಷದ ಕಲ್ಪ ಚಿಕಿತ್ಸೆಯ ಶಿಬಿರವು ಮಣಿಪಾಲದ ಮುನಿಯಾಲು ಆಯುರ್ವೇದ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು ಆಸಕ್ತರು ಇದರ ಉಪಯೋಗವನ್ನು ಪಡೆಯಬಹುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
 
 
 
 
 
 
 
 
 
 
 

Leave a Reply