ರೇಡಿಯೊ ಮಣಿಪಾಲದಲ್ಲಿ ಆರೋಗ್ಯ ದರ್ಶನ

ಮಣಿಪಾಲದ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರ ಮತ್ತು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದಲ್ಲಿ ಆರೋಗ್ಯ ದರ್ಶನ ಸರಣಿ ಆರೋಗ್ಯ ಮಾಹಿತಿ ಸಂಚಿಕೆ ಪ್ರತಿ ಬುಧವಾರ ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ. ಗುರುವಾರ ಮಧ್ಯಾಹ್ನ 1 ಗಂಟೆಗೆ ಮರುಪ್ರಸಾರವಾಗಲಿದೆ.

  ಈ ವಾರದ ಆರೋಗ್ಯ ದರ್ಶನ ಸಂಚಿಕೆಯಲ್ಲಿ ಮಣಿಪಾಲ‌ ಕಸ್ತೂರ್ಬಾ ಆಸ್ಪತ್ರೆಯ *ಕ್ಲಿನಿಕಲ್ ನ್ಯೂಟ್ರಿಷಿಯನ್ ಮತ್ತು ಡಯಾಟಾಟಿಕ್ಸ್ ವಿಭಾಗದಲ್ಲಿ ಡಯಟಿಷಿಯನ್ ಆಗಿರುವ ಫಾತಿಮಾ ಶೆರಿಹಾನ್ ಎಮ್ ಕೆ ಅವರು ಮಕ್ಕಳಲ್ಲಿ ಕಂಡು ಬರುವ ಬೊಜ್ಜುತನದ ಬಗ್ಗೆ ವಿಶೇಷ ಮಾಹಿತಿ ನೀಡಲಿದ್ದಾರೆ. 

ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal

ಮತ್ತು ಐಫೋನ್ ನ

https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ಮಣಿಪಾಲ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.

 
 
 
 
 
 
 
 

Leave a Reply