ವಿದ್ಯಾರ್ಥಿ ಸರಕಾರದ ಪದಪ್ರದಾನ

ಮಹಾತ್ಮ ಗಾಂಧಿ ಪ್ರೌಢಶಾಲೆ ಸಾಹೇಬರಕಟ್ಟೆ ಇದರ 2024 -25 ನೇ ಸಾಲಿನ ವಿದ್ಯಾರ್ಥಿ ಸರಕಾರದ ಪದಪ್ರದಾನ ಸಮಾರಂಭ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವನ್ನು ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಹಾಗೂ ಜೈ ಗಣೇಶ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಾಹೇಬರಕಟ್ಟೆ ಇದರ ಅಧ್ಯಕ್ಷರಾದ ಶ್ರೀ ಅಶೋಕ್ ಪ್ರಭು ಸಾಹೇಬರಕಟ್ಟೆ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.

“ಸಂಸದೀಯ ಮಾದರಿಯ ಚುನಾವಣೆಗಳನ್ನು ವಿದ್ಯುನ್ಮಾನ ಮಾಧ್ಯಮ ಬಳಸಿ ಚುನಾವಣೆಗಳನ್ನು ನಡೆಸಿ ಚುನಾವಣಾ ಪ್ರಕ್ರಿಯೆಯ ಕಲ್ಪನೆಗಳನ್ನು ಮಕ್ಕಳ ಮನಸ್ಸಿನಲ್ಲಿ ಮೂಡಿಸಿದ ಈ ಶಾಲೆಯು ಈಗಾಗಲೇ ಶೈಕ್ಷಣಿಕ ವಲಯದಲ್ಲಿ ಚಿರಪರಿಚಿತ ವಾಗಿದೆ.

ಚುನಾಯಿತ ಪ್ರತಿನಿಧಿಗಳು ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದಲೇ ಪಾಲಿಸುವುದನ್ನು ಎಳವೆಯಲ್ಲಿ ಕಲಿತಾಗ ಈ ಪರಿಕಲ್ಪನೆ ಅರ್ಥಪೂರ್ಣವಾಗುವುದು” ಎಂದರು. ಸಂಸ್ಥೆಯ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಡೈಸಿ ಡಿಸಿಲ್ವಾ ಇವರು ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ವಿದ್ಯಾರ್ಥಿಗಳಾದ ಕುಮಾರಿ ಶ್ರೀನಿಧಿ ಹೆಗಡೆ ಸ್ವಾಗತಿಸಿ ಕುಮಾರಿ ನಿಕಿತಾ ವಂದಿಸಿದರು ನೂತನ ನಾಯಕ ಖಾಜಾ ಬಂದೇ ನವಾಜ್ ತನ್ನ ಅನಿಸಿಕೆಗಳನ್ನು ಹಂಚಿಕೊಂಡರು. ಕುಮಾರಿ ಪವಿತ್ರ ನೂತನ ಮಂತ್ರಿಮಂಡಲದ ಸದಸ್ಯರನ್ನು ಪರಿಚಯಿಸಿದಳು. ಶಿವಗಂಗಾ ಕಾರ್ಯಕ್ರಮ ನಿರೂಪಿಸಿದರು

 
 
 
 
 
 
 
 

Leave a Reply