ತೆಂಕನಿಡಿಯೂರು ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿ ದಿನಾಂಕ : ೨೭/೦೬/೨೦೨೪ ರಂದು ವಾಣಿಜ್ಯಶಾಸ್ತ್ರ
ಸ್ನಾತಕೋತ್ತರ ವಿಭಾಗ ಎಂ.ಕಾo. ಅಡಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನೆರವೇರಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಹೈದರಾಲಿ, ವಿಭಾಗ ಮುಖ್ಯಸ್ಥರು, ಸ.ಪ್ರ.ದ. ಕಾಲೇಜು
ಮುಡಿಪು ಇವರು ರೀಸೆಂಟ್ ಟ್ರೆಂಡ್ಸ್ ಇನ್ ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಭಾಗ ಮುಖ್ಯಸ್ಥರಾದ ಶ್ರೀ ಟಿ.ಜಿ. ಭಟ್, ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಭಾಗದ ಸಂಚಾಲಕರಾದ ಡಾ. ಉದಯ
ಶೆಟ್ಟಿ ಕೆ., ಉಪನ್ಯಾಸಕಿಯರಾದ ಶ್ರೀಮತಿ ಸ್ಮಿತಾ ಮತ್ತು ಶ್ರೀಮತಿ ಸೋನಿಯಾ ನೊರೋನ್ಹ ಉಪಸ್ಥಿತರಿದ್ದರು. ಎಂ.ಕಾo. ವಿದ್ಯಾರ್ಥಿನಿ ಸುಷ್ಮಾ ಎಲ್ಲರನ್ನೂ ಸ್ವಾಗತಿಸಿದರು. ಸ್ವೀಕೃತಿ
ವಂದಿಸಿದರು. ತ್ರಿವೇಣಿ ನಿಂಜೂರು ಕಾರ್ಯಕ್ರಮ ನಿರೂಪಿಸಿದರು.
 
 
 
 
 
 
 
 

Leave a Reply