ಜಿಲ್ಲಾ ಲಿಯೊ ಅಧ್ಯಕ್ಷೆಯಾಗಿ ಶಾರೋನ್ ಮಾಬೆನ್ ಆಯ್ಕೆ

ಉಡುಪಿ, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಈ 4 ಕಂದಾಯ ಜಿಲ್ಲೆಗಳನ್ನು ಒಳಗೊಂಡ ಲಯನ್ ಜಿಲ್ಲೆ 317C ಯ 2024 -25ನೇ ಸಾಲಿನ ಜಿಲ್ಲಾ ಲಿಯೊ ಅಧ್ಯಕ್ಷೆಯಾಗಿ ಶಾರೋನ್ 13-4-2024 ರಂದು ಉಡುಪಿಯ ಅಮೃತ್ ಗಾರ್ಡನ್ ನಲ್ಲಿ ನಡೆದ ಲಯನ್ಸ್ ಜಿಲ್ಲಾ ಗವರ್ನರ್ ಡಾ. ನೇರಿ ಕರ್ನಲಿಯೋ ರವರ ಜಿಲ್ಲಾ ಸಮ್ಮೇಳನದಲ್ಲಿ ಆಯ್ಕೆ ಆಗಿದ್ದಾರೆ. ಕಾರ್ಯದರ್ಶಿಯಾಗಿ ವಿಖ್ಯಾತ್ ಶೆಟ್ಟಿ, ಖಜಾಂಚಿಯಾಗಿ ಅನಿಕಾ ರೈ ಆಯ್ಕೆಯಾಗಿದ್ದಾರೆ. 

ಶರೋನ್ ಪಿಪಿಸಿಯಲ್ಲಿ ಅಂತಿಮ ವರ್ಷದ ಬಿಎ ವಿದ್ಯಾರ್ಥಿನಿ ಮತ್ತು ಅಲೋಶಿಯಸ್ ಇನ್‌ಸ್ಟಿಟ್ಯೂಟ್ ಆಫ್ ಸಿವಿಲ್ ಸರ್ವಿಸ್‌ನಲ್ಲಿ ಓದುತ್ತಿದ್ದಾರೆ.

All college students association ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ. 

ಲಿಂಗ ಸಮಾನತೆ ಕ್ಲಬ್ ಕಾರ್ಯದರ್ಶಿ.

ಭಾರತದ ರಾಷ್ಟ್ರೀಯ ಮಟ್ಟದ ಕಲಾವಿದೆ- 2022 ರಲ್ಲಿ ಗಣರಾಜ್ಯೋತ್ಸವ ಪರೇಡ್, ನವದೆಹಲಿ.

ಅವರು NCC ಸೇನೆಯ ಮಾಜಿ JUO, ರೈಫಲ್ ಡ್ರಿಲ್ ಪ್ರಿ-ಆರ್‌ಡಿಸಿ ಕೆಡೆಟ್, ಬೆಂಗಳೂರು.

ಭಾರತೀಯ ಅಂತರಾಷ್ಟ್ರೀಯ ಮಾದರಿ ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ.

ಉತ್ತಮ ಸಮಾಜ ಸೇವಾ ಮನೋಭಾವನೆಯುಳ್ಳ ಇವರು ತಮ್ಮ ಸೇವಾ ಅವಧಿಯಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ ಸಮಾಜಸೇವಾ ಮನೋಭಾವನೆ ಬೆಳೆಸುವುದರ ಜೊತೆಗೆ ಅವರಲ್ಲಿ ಮಾದಕ ದ್ರವ್ಯಗಳಂತಹ ದುಶ್ಚಟ ಮತ್ತು ರಕ್ತದಾನ ದ ಬಗ್ಗೆ ಜಾಗೃತಿ ಮೂಡಿಸುವುದು , ಉಡುಪಿಯಲ್ಲಿರುವ ಹೊರ ಜಿಲ್ಲೆಗಳ ಕೂಲಿ ಕಾರ್ಮಿಕರು ವಾಸಿಸುವ ಕೇರಿಗಳಿಗೆ ಹೋಗಿ ಅವರ ಮಕ್ಕಳಲ್ಲಿ ಶಿಕ್ಷಣ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದ್ದಾರೆ. ಲಯನ್ ಜಿಲ್ಲಾ ಮಾಜಿ ಗವರ್ನರ್ ಜಯಕರ ಶೆಟ್ಟಿ ಇಂದ್ರಾಳಿಯವರು ಇವರ ಮಾರ್ಗದರ್ಶಕರಾಗಿರುತ್ತಾರೆ ಎಂದು 2024-25 ನೇ ಸಾಲಿನ ಲಯನ್ಸ್ ಜಿಲ್ಲಾ ಗವರ್ನರ್ ಲ. ಮೊಹಮ್ಮದ್ ಹನೀಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply