ಪಿಪಿಸಿ ಸಮೂಹ ಸಂಸ್ಥೆಗಳ ನಿರ್ದೇಶಕರಾಗಿ ಡಾ. ಶ್ರೀರಮಣ ಐತಾಳ್

ಉಡುಪಿ : ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ಸ್ಥಾಪಕ ಕುಲಪತಿಗಳಾಗಿ ನಿವೃತ್ತರಾಗಿರುವ ಡಾ. ಪಿ. ಶ್ರೀರಮಣ ಐತಾಳ್ ಇವರನ್ನು, ಪೂರ್ಣಪ್ರಜ್ಞ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಪರಮಪೂಜ್ಯ ಶ್ರೀ ಶ್ರೀ ಈಶಪ್ರಿಯತೀರ್ಥ
ಶ್ರೀಪಾದರು, ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳ ಅಭಿವೃದ್ಧಿ ಹಾಗೂ ವಿಸ್ತರಣೆ ವಿಭಾಗಗಳ ನಿರ್ದೇಶಕರಾಗಿ ನಿಯುಕ್ತಿಗೊಳಿಸಿದರು.
ಡಾ. ಶ್ರೀರಮಣ ಐತಾಳರು ೨೨ವರ್ಷಗಳ ಆಡಳಿತಾತ್ಮಕ, ೩೩ವರ್ಷಗಳ ಶೈಕ್ಷಣಿಕ ಹಾಗೂ ಸಂಶೋಧನಾತ್ಮಕ ವೃತ್ತಿಜೀವನದ ಅನುಭವ ಹೊಂದಿದವರು. ಇವರ ಕಾರ್ಯಧ್ಯಕ್ಷತೆಯ ಫಲವಾಗಿ ಪ್ರಸ್ತುತ ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಒಂದು ಸಾವಿರ ಸಂಶೋಧನ
ವಿದ್ಯಾರ್ಥಿಗಳನ್ನೂ ಒಳಗೊಂಡoತೆ ಸುಮಾರು ಹನ್ನೊಂದು ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅಲ್ಲದೆ ಅತೀ ಹೆಚ್ಚಿನ ನ್ಯಾಕ್ ಶ್ರೇಣಿಯನ್ನು ಹೊಂದುವಲ್ಲಿ ಇವರ ಪರಿಶ್ರಮ ವಿಶೇಷ. ತಂತ್ರಜ್ಞಾನ ನಿರ್ವಹಣೆ ಹಾಗೂ ಉನ್ನತ ಶಿಕ್ಷಣದಲ್ಲಿ ಆವಿಷ್ಕಾರ
ವಿಷಯದಲ್ಲಿ ವಿಶೇಷ ಪರಿಣತಿ ಹೊಂದಿರುವ ಇವರ ಸಂಶೋಧನಾತ್ಮಕ ಕೆಲಸವು ಸುಮಾರು ೧೭.೮ ಲಕ್ಷದಷ್ಟು ಜನರನ್ನು ತಲುಪಿದೆ. ಅಮೆರಿಕಾದ ಎಸ್‌ಎಸ್‌ಆರ್‌ಎನ್ ರೀಸರ್ಚ್ ನೆಟ್ವರ್ಕಿನ ಮೂವತ್ತು ಸಾವಿರ ಲೇಖಕರಲ್ಲಿ ಇವರು ಎರಡನೆಯ ಶ್ರೇಣಿಯನ್ನು ಪಡೆದಿದ್ದು, ಇವರು ಪ್ರಸ್ತುತ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಆಡಳಿತ ಮಂಡಳಿಯ ಸದಸ್ಯರೂ ಆಗಿರುತ್ತಾರೆ.
ಹಾಗೂ ನವದೆಹಲಿಯ ಎಐಯು ಹಾಗೂ ಹಲವು ನ್ಯಾಕ್ ಇನ್ಸ್ಪೆಕ್ಷನ್ ಪೀರ್ ವಿಸಿಟಿಂಗ್ ತಂಡಗಳ ಅಧ್ಯಕ್ಷರೂ ಆಗಿರುತ್ತಾರೆ. ಇವರು ರೂಪಿಸಿದ ಹನ್ನೆರಡು ಸೂಪರ್ ಇನ್ನೋವೇಷನ್ಸ್, ರಚಿಸಿರುವ ಒಂದು ಸಾವಿರದಷ್ಟು ಸಂಶೋಧನಾತ್ಮಕ ಲೇಖನಗಳು, ೫೦ಕ್ಕೂ ಅಧಿಕ ಮೌಲಿಕ ಕೃತಿಗಳು, ಸಂಪಾದಿಸಿದ ಪುಸ್ತಕಗಳು ಅಸಂಖ್ಯ ಸoಶೋಧಕರಿಗೆ ಉಪಯುಕ್ತವಾಗಿವೆ.  ಇವುಗಳಲ್ಲಿ ಹೆಚ್ಚಿನವು ಗೂಗಲ್ ಸ್ಕಾಲರ್ ಹಾಗೂ ರೀಸರ್ಚ್ ಗೇಟ್‌ಗಳಲ್ಲಿ ಲಭ್ಯವಿವೆ.
ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳ ಅಭಿವೃದ್ಧಿ ಹಾಗೂ ವಿಸ್ತರಣೆ ವಿಭಾಗಗಳ ನಿರ್ದೇಶಕರಾಗಿ ಡಾ.ಪಿ. ಶ್ರೀರಮಣ ಐತಾಳ್ ನಿಯುಕ್ತಿಗೊಂಡ ನಂತರ ಇವರ ನೇತೃತ್ವದಲ್ಲಿ ಸಂಸ್ಥೆಯು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ
ಸರ್ವತೋಮುಖ ಅಭಿವೃದ್ಧಿ ಹೊಂದಲಿದೆ ಎಂದು ಪ್ರಕಟಣೆಯಲ್ಲಿ
ತಿಳಿಸಲಾಗಿದೆ.
 
 
 
 
 
 
 
 
 
 
 

Leave a Reply