Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಆಶ್ರಮದ 45 ಮಕ್ಕಳಿಗೆ ವಸ್ತ್ರಗಳನ್ನು ನೀಡಿ ಮಾನವೀಯತೆ ಮೆರೆದ ವಿಎಸ್ ಸಿ 

​ಉಡುಪಿ: ಹೊಸತನದೊಂದಿಗೆ ಸಮಾಜ ಸೇವೆಯಲ್ಲಿ ನಿರತವಾಗಿರುವ ಉದ್ಯಾವರ ಪಿತ್ರೋಡಿಯ ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸಂಸ್ಥೆ ಈ ಬಾರಿಯ ದೀಪಾವಳಿ ಹಬ್ಬವನ್ನು ಆಶ್ರಮದ ಮಕ್ಕಳಿಗೆ ಹೊಸ ಬಟ್ಟೆಯನ್ನು ನೀಡುವುದರ ಮೂಲಕ ಆಚರಿಸಿತು.

ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸಂಸ್ಥೆ, ಪ್ರಸ್ತುತ ವರ್ಷದ ದೀಪವಾಳಿ ಹಬ್ಬಕ್ಕೆ ಸುಡುಮದ್ದುಗೆ ಖರ್ಚು ಮಾಡುವ ಹಣವನ್ನು ತನ್ನ ತಂಡದ ಎಲ್ಲ ಸದಸ್ಯರು ಉಳಿಸಿಕೊಂಡು, ಉಡುಪಿ ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನದ ಇಲ್ಲಿಯ 45 ಮಕ್ಕಳಿಗೆ ಹೊಸ ಬಟ್ಟೆಯನ್ನು ನೀಡಿ ದೀಪಾವಳಿಯನ್ನು ಆಚರಿಸಿತು. 

ಕಳೆದ 6 ವರ್ಷಗಳಿಂದ ಸತತವಾಗಿ ತನ್ನ ತಂಡದ ಎಲ್ಲಾ ಸದಸ್ಯರು ದೀಪವಾಳಿ ಹಬ್ಬಕ್ಕೆ ಸುಡುಮದ್ದಿಗೆ ಉಪಯೋಗಿಸುವ ಹಣವನ್ನು ಉಳಿಸಿಕೊಂಡು ಇಲ್ಲಿಯ ಮಕ್ಕಳಿಗೆ ಹೊಸ ಬಟ್ಟೆ ನೀಡಿ ದೀಪಾವಳಿ ಸಂಭ್ರಮವನ್ನು ಆಚರಿಸುತ್ತಿದೆ. 40 ಸಾವಿರಕ್ಕೂ ಅಧಿಕ ಹಣವನ್ನು ಉಳಿಸಿಕೊಂಡು ಶ್ರೀಕೃಷ್ಣ ಬಾಲನಿಕೇತನದ ಮಕ್ಕಳಿಗೆ ಹೊಸ ಬಟ್ಟೆ ನೀಡಿ ಮಕ್ಕಳೊಂದಿಗೆ ಸಂಭ್ರಮ ಆಚರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ನವೀನ್ ಸಾಲ್ಯಾನ್,  ಎಂಕೆ ಬಾಲರಾಜ್, ವಕೀಲರಾದ ಆನಂದ ಎಂ ಪೂಜಾರಿ, ಸಂದೀಪ್ ಆನಂದ್, ​ಸುಧೀರ್ ಶೆಟ್ಟಿ , ವಿಜಯಕುಮಾರ್, ಸಿ ಎಂ ಮಲ್ಲೇಶ್ ಬಂಗೇರ, ಜಿತೇಂದ್ರ ಶೆಟ್ಟಿ, ಉಮೇಶ್ ಕರ್ಕೇರ,  ನಾಗೇಶ್ ಮೈಂದನ್, ಹರಿಶ್ಚಂದ್ರ ಕೋಟ್ಯಾನ್, ಪ್ರಕಾಶ್ ಶೆಟ್ಟಿ, ಅಭಿಜಿತ್, ಅಭಿಷೇಕ್, ಸುರೇಶ್, ಹರ್ಷಿತ್, ಧನುಷ್, ರಿಹಾನ್, ರಾಕೇಶ್ ಸುವರ್ಣ, ಸತೀಶ್ ಕುಂದರ್, ವಾಸು ಸಾಲ್ಯಾನ್, ಸಂತೋಷ್ ಕುಂದರ್, ಉದಯ ಕುಮಾರ್, ರೋಯ್ ಮಸ್ಕರೇನಸ್, ಕಿರಣ್ ಕುಮಾರ್, ಡೆರಿನ್, ಗಂಗಾಧರ್, ಯುವರಾಜ್ ಸಾಲ್ಯಾನ್, ಧ್ಯಾನೇಶ್ ಹಾಗೂ ತನುಶ್ರೀ ಮತ್ತಿತರರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!