ಶಿರೂರು ಮೂಲ ಮಠದಲ್ಲಿ ಶಾಕಲ ಋಕ್ಸಂಹಿತಾ ಯಾಗ

ಶೀರೂರು ಮೂಲಮಠ ಶ್ರೀರಾಮ, ವಾಮನವಿಠ್ಠಲ, ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಚೈತ್ರ ಶುಕ್ಲ ಪಾಡ್ಯದಿಂದ ದಶಮಿಯವರೆಗೆ ಶ್ರೀರಾಮೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಈ ಪರ್ವಕಾಲದಲ್ಲಿ ಶಾಕಲ ಋಕ್ಸಂಹಿತಾ ಯಾಗವು ಶೀರೂರು ಮಠಾಧೀಶ ಶ್ರೀ ಶ್ರೀ ವೇದವರ್ಧನ ತೀರ್ಥರ ಅನುಗ್ರಹದೊಂದಿಗೆ ಶ್ರೀ ಗಿರಿರಾಜ ತಂತ್ರಿಗಳ ನೇತ್ರತ್ವದಲ್ಲಿ ಆರಂಭಗೊಂಡಿದೆ.ಚೈತ್ರ ಶುದ್ಧ ದಶಮಿಯಂದು ಪೂರ್ಣಾಹುತಿಯೊಂದಿಗೆ ಸಮಾಪನಗೊಳ್ಳುವ ಸಂಹಿತಾಯಾಗದ ಶುಭಸಂದರ್ಭದಲ್ಲಿ ಕೃಷ್ಣಾಪುರ ಮಠಾಧೀಶ ಶ್ರೀ ಶ್ರೀ ವಿದ್ಯಾಸಾಗರ ತೀರ್ಥರು,ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥರು, ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥರು, ಚಿತ್ರಾಪುರ ಶ್ರೀವಿದ್ಯೇಂದ್ರತೀರ್ಥರು ಚಿತ್ತೈಸಿ ಅನುಗ್ರಹ ಸಂದೇಶ ನೀಡಲಿದ್ದಾರೆ‌ ಎಂದು ಶ್ರೀ ಮಠದ ದಿವಾನ ಡಾ| ಉದಯಕುಮಾರ ಸರಳತ್ತಾಯ ತಿಳಿಸಿದ್ದಾರೆ. 

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಜನೆ,ಸಂಗೀತ ವಾದನಗೋಷ್ಟಿಗಳು ಪ್ರಸಿದ್ದ ಕಲಾವಿದರಿಂದ ಪ್ರತಿದಿನ ನಡೆಯಲಿದೆ.ಶ್ರೀ ಮಠದ ಪಾರುಪತ್ಯೆದಾರ ಕಡೆಕಾರು ಶ್ರೀಶ ಭಟ್ ,ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಹಾಗೂ ಶ್ರೀ ಮಠದ ಭಕ್ತರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply