ಮಂದಿರ ನಿರ್ಮಾಣೋತ್ತರ ಪ್ರಥಮ ಶ್ರೀ ರಾಮನವಮೀ

ಈ ವರ್ಷದ ರಾಮನವಮಿಗೆ ವಿಶೇಷ ಮಹತ್ವವಿದೆ . ಶತಶತಮಾನಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಭವ್ಯ ನಿರ್ಮಾಣದ ಬಳಿಕ ಬರುತ್ತಿರುವ ಮೊದಲ ರಾಮನವಮಿಯಾಗಿದೆ . ಆದ್ದರಿಂದ ಪ್ರತೀ ಊರಲ್ಲಿ ರಾಮನವಮೀ ಉತ್ಸವವನ್ನು ವಿಶೇಷವಾಗಿ ಆಚರಿಸುವಂತೆ ರಾಮಜನ್ಮಭೂಮಿತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ತರಾಗಿರುವ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ.

ಈ ಕುರಿತಾಗಿ ಎಪ್ರಿಲ್ 5 ರಂದು ಅಯೋಧ್ಯೆಯಲ್ಲಿ ನಡೆದ ಟ್ರಸ್ಟ್ ನ ಸಭೆಯಲ್ಲೂ ಶ್ರೀಗಳು ಸೇರಿದಂತೆ ಎಲ್ಲ ಸದಸ್ಯರು ವಿವರವಾಗಿ ಚರ್ಚಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆಗೆ ತೊಂದರೆಯಾಗದಂತೆ ಪ್ರತೀ ಊರಲ್ಲಿರುವ ದೇವಸ್ಥಾನ ಭಜನಾ ಮಂದಿರ ಸಮುದಾಯ ಭವನಗಳಲ್ಲಿ ಭಜನೆ , ರಾಮತಾರಕ ಮಂತ್ರ ಜಪ ಯಜ್ಞ ಸಾಲುದೀಪ ಬೆಳಗುವುದು,ಮಕ್ಕಳಿಗಾಗಿ ರಾಮವೇಷ ಸ್ಪರ್ಧೆ , ರಾಮಾಯಣ ಆಧಾರಿತ ರಸಪ್ರಶ್ನೆ , ಭಕ್ತರಿಗೆ ಪಾನಕ‌ ಕೋಸುಂಬರಿ ಮೊದಲಾದವುಗಳ ವಿತರಣೆ ಇತ್ಯಾದಿಗಳನ್ನು ಸಾಮೂಹಿಕವಾಗಿ ಆಚರಿಸಬೇಕು . ಬಹಿರಂಗ ವೇದಿಕೆಯ ಕಾರ್ಯಕ್ರಮಗಳು ಬೇಕಿಲ್ಲ . ಅದೇ ರೀತಿ ಸಮಾಜದಲ್ಲಿರುವ ಅಶಕ್ತರಿಗಾಗಿ ಸೇವಾ ಕಾರ್ಯಗಳನ್ನೂ ಸಂಯೋಜಿಸಬೇಕು . ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚ, ಬಡ ರೋಗಿಗಳ ಚಿಕಿತ್ಸಾ ವೆಚ್ಚ , ಮನೆ ಇಲ್ಲದವರಿಗೆ ಮನೆ ನಿರ್ಮಾಣಕ್ಕೆ ಸಹಾಯ ,ಊರು ಹಳ್ಳಿಗಳಲ್ಲಿ ಶ್ರಮದಾನಗಳ ಮೂಲಕ ಸ್ವಚ್ಛತಾ ಕಾರ್ಯ , ಕೆರೆಗಳ ಶುದ್ಧೀಕರಣ , ಸುಡು ಬೇಸಿಗೆಯ ದಿನಗಳಾದ್ದರಿಂದ ಪ್ರಾಣಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವುದು ,ಗೋಶಾಲೆಗಳಿಗೆ ನೆರವು, ಅನಾಥರಿಗೆ ಊಟೋಪಹಾರ ವಿತರಣೆ ಹೀಗೆ ಇಷ್ಟು ಮಾತ್ರವಲ್ಲದೇ ಸಮಾಜೋಪಯೋಗಿಯಾದ ಇನ್ನೂ ಹಲವು ಸೇವಾ ಕಾರ್ಯಗಳಿವೆ . ಊರ ಮಂದಿ ಸೇರಿಕೊಂಡು ಇಂಥಹ ಸೇವಾ ಕಾರ್ಯಗಳನ್ನು ನಡೆಸುವುದೂ ಶ್ರೀರಾಮನ ದೊಡ್ಡ ಸೇವೆಯಾಗುತ್ತದೆ ಎಂದು ಶ್ರೀಗಳು ಕರೆ ನೀಡಿದ್ದಾರೆ.

 
 
 
 
 
 
 
 
 
 
 

Leave a Reply