ಮತದಾನ ಮಾಡಲು ಥೈಲ್ಯಾಂಡ್ ನಿಂದ ಬಂದ ಸುಶಾಂತ್ ಕೆರೆಮಠ 

ನಮ್ಮ ರಾಷ್ಟ್ರದ ಉನ್ನತಿಗೆ, ನಮ್ಮ ದೇಶದ ಅಸ್ಮಿತೆಗೆ, ನಮ್ಮ ಪ್ರಜಾಪ್ರಭುತ್ವದ ಉಳಿವಿಗೆ ಮತದಾನ ಅನ್ನುವುದು ಸರ್ವಶ್ರೇಷ್ಠ ವರದಾನ. ದೇಶದ ಭವಿಷ್ಯದ ಅಳಿವು ಉಳಿವು ಮತದಾರನ ಮತದಲ್ಲಿ ಎಂಬುದು ಸರ್ವಸಮ್ಮತ. ನಮ್ಮ ದೇಶದ ಅರ್ಹ ದೇಶವಾಸಿಗಳು ತಿಳುವಳಿಕೆ ಪೂರ್ವಕ ಮತದಾನ ಮಾಡಿ ಅರ್ಹ ನಾಯಕನನ್ನು ಗೆಲ್ಲಿಸಿದರೆ ಮಾತ್ರ ದೇಶದ ಅಭಿವೃದ್ಧಿಯೊಂದಿಗೆ ಜನಹಿತ ಕಾಯಲು ಸಾಧ್ಯ. ಹಾಗಾಗಿ ಮತದಾನ ಪ್ರತಿಯೊಬ್ಬರ ಹಕ್ಕು ಮಾತ್ರವಲ್ಲ, ಅದು ಪ್ರತಿಯೋರ್ವರ ಕರ್ತವ್ಯ ಕೂಡಾ ಅಹುದು.

ಹಾಗೆಂದೇ ಈಗಿನ ಯುವ ಜನತೆ ಮತದಾನದ ಮಹತ್ವವನ್ನು ಅರಿತು ದೇಶ‌ ಹಿತಕ್ಕೋಸ್ಕರ ಮತದಾನದಲ್ಲಿ ಕಾಯಾ ವಾಚಾ ಮನಸಾ ತಮ್ಮನ್ನು‌ ತಾವು ಹೆಚ್ಚು ಹೆಚ್ಚು ತೊಡಗಿಸಿಕೊಂಡಿದ್ದಾರೆ. ಆ ಮೂಲಕ ತಾವೂ ಕೂಡಾ ದೇಶ ಕಟ್ಟುವ ಕಾಯಕದಲ್ಲಿ‌ ಕೈಜೋಡಿಸಿದೆವೆಂದು ಸಂಭ್ರಮಿಸುತ್ತಿದ್ದಾರೆ. ಶಾಲಾ ಕಾಲೇಜು ದಿನಗಳಲ್ಲಿ ನಿತ್ಯ ನಿರಂತರ ದೇಶ ಕಟ್ಟುವ ಕಾಯಕದಲ್ಲಿ ಅಳಿಲು ಸೇವೆ ಸಲ್ಲಿಸುತ್ತಾ ಬಂದಿದ್ದ ಮೂಡುಬೆಟ್ಟು ಕೊಡವೂರಿನ ಯುವಕ ಸುಶಾಂತ್ ಕೆರೆಮಠ ತನ್ನ ವೃತ್ತಿ ಜೀವನಕ್ಕಾಗಿ ದೂರದ ದೇಶ ಥೈಲ್ಯಾಂಡ್ ಗೆ ತೆರಳಿದ್ದರೂ ಮತದಾನಕ್ಕೋಸ್ಕರ ಬಿಡುವು ಮಾಡಿಕೊಂಡು ತನ್ನ ದೇಶಕ್ಕೆ ವಾಪಾಸಾಗಿದ್ದಾನೆ, ತನ್ನ ಮತಗಟ್ಟೆಯಲ್ಲಿ ತನ್ನ ಹಕ್ಕಿನ ಮತ ಚಲಾಯಿಸಿ ಕರ್ತವ್ಯ ಮೆರೆದಿದ್ದಾನೆ, ಈಗಿನ ಯುವ ಜನತೆಗೆ ಮಾದರಿಯಾಗಿದ್ದಾನೆ.

ಇಂದು ಮತದಾನ ಮುಗಿಸಿ ಇದೇ ಬರುವ ಎಪ್ರಿಲ್ 28 ರಂದು ತನ್ನ ವೃತ್ತಿ ಮುಂದುವರೆಸಲು ಕರ್ಮ ಭೂಮಿ ಥೈಲ್ಯಾಂಡ್ ಸೇರಲಿದ್ದಾನೆ. ಮತದಾನಕ್ಕಿಂತ ಶ್ರೇಷ್ಠ ಇನ್ನೊಂದಿಲ್ಲ, ನಾವೆಲ್ಲ ಅರಿತು ಮತದಾನ ಮಾಡೋಣ, ದೇಶದ ಅಭಿವೃದ್ಧಿಗೆ ಸಹಕರಿಸೋಣ.

 
 
 
 
 
 
 
 
 
 
 

Leave a Reply