ಬನ್ನಿ ಪ್ರಜಾಪ್ರಭುತ್ವದ ಮಹಾನ್ ಹಬ್ಬದಲ್ಲಿ ಭಾಗವಹಿಸೋಣ

ಪ್ರಜಾಪ್ರಭುತ್ವದ ಹಬ್ಬ ಮತ್ತೆ ಬಂದಿದೆ .ಕಾರಣ ಹೇಳದೆ ಮತದಾನ ಮಾಡಬೇಕು.ನಾವೆಲ್ಲರೂ ನಮ್ಮ ವ್ಯವಸ್ಥೆಯ ಬಗ್ಗೆ ಮಾತನಾಡುತ್ತೇವೆ ಆದರೆ ನಮ್ಮ ದೊಡ್ಡ ಕತ೯ವ್ಯವಾದ ಮತದಾನ ಮಾಡುದನ್ನು ಮರೆತು ಬಿಡುತ್ತೇವೆ ಇದು” ಸರಿಯಲ್ಲ.

ರಾಜಕೀಯ ಇoದು ಸೇವೆಯ ಬದಲು ಉದ್ಯಮವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ

ಬರೀ ಆರೋಪ ಪ್ರತ್ಯಾರೋಪಗಳಲ್ಲೇ ಕಾಲದೂಡುವ ಜನಪ್ರತಿನಿಧಿಗಳು ನೈಜ ಪ್ರಜಾಪ್ರಭುತ್ವ ಆಶಯದ ವಿರೋಧಿಗಳು. ಅವರ ಕಪಟ ನಾಟಕಗಳನ್ನು ಗಮನಿಸುತ್ತಿರುವ ಪ್ರಜೆಗಳಿಗೆ ಬೇಸರದ ಜತೆಗೆ ಪ್ರಜಾಪ್ರಭುತ್ವದ ಕುರಿತು ಭ್ರಮನಿರಸನ ಹೊಂದಲು ಶುರಾಗುತ್ತದೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಸರಕಾರ ಎನ್ನುವುದು ಬರೀ ಘೋಷಣೆ ಮಾತ್ರ.ಸರಕಾರಗಳ ಕುರಿತಾದ ಭ್ರಮನಿರಸನ ಮತ ಚಲಾಯಿಸುವ ಆಸಕ್ತಿಯನ್ನು ಕುಂದಿಸಿದೆ.  

ಆದರೆ ನಮ್ಮ ಇರುವಿಕೆಯನ್ನು ಸಾಬೀತುಪಡಿಸಲು ಮತದಾನ ಮಾಡುವುದು ಒಂದು ವಿಧಾನ. ಸಾಂವಿಧಾನಿಕ ಸೌಲಭ್ಯ

ಭಾರತೀಯರಿಗೆ ಮತದಾನ ಸಾಂವಿಧಾನಿಕವಾಗಿ ದೊರೆತ ಅವಕಾಶ. ನಮ್ಮನ್ನಾಳುವ ಮಂದಿಯನ್ನು ನಾವೇ ಚುನಾಯಿಸಿಕೊಳ್ಳುವ ಬಹು ಅಮೂಲ್ಯ ಅವಕಾಶವನ್ನು ಪ್ರಜಾಪ್ರಭುತ್ವದ ನೀಡಿದೆ. ಮತದಾನವನ್ನು ಹಕ್ಕುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ನಮ್ಮ ಹಕ್ಕನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ನಮ್ಮ ಹಕ್ಕಿಗೆ ಚ್ಯುತಿ ಬಂದರೆ ಅದನ್ನು ಪ್ರಶ್ನಿಸುವ ಅವಕಾಶ ಇದೆ. ಇಷ್ಟೆಲ್ಲ ಅನುಕೂಲವನ್ನು ಸಂವಿಧಾನ ನೀಡಿದರೂ ನಾವು ರಾಜಕೀಯ ವ್ಯವಸ್ಥೆಯ ಮೇಲೆ ಭ್ರಮೆನಿರಸನ ಹೊಂದಿ ಮತದಾನದಿಂದ ದೂರ ಉಳಿಯುವುದು ಸಾಧುವಲ್ಲ.

ವಿಶ್ವದ ಬಹಳಷ್ಟು ರಾಷ್ಟ್ರಗಳಲ್ಲಿ ಮತದಾನದ ಮುಕ್ತ ಹಕ್ಕು ನೀಡಲಾಗಿಲ್ಲ. ಕೆಲವು ಕಮ್ಯುನಿಷ್ಟ್ ಪ್ರಭುತ್ವ ಹೊಂದಿದ ರಾಷ್ಟ್ರಗಳಲ್ಲಿ ನಿರ್ಬಂಧಿತ ಪ್ರಜಾಪ್ರಭುತ್ವವಿದೆ. ಹಲವು ರಾಷ್ಟ್ರಗಳಲ್ಲಿ ಈಗಲೂ ವಂಶಾಡಳಿತ ಜಾರಿಯಲ್ಲಿದೆ. ಭಾರತ, ಅಮೆರಿಕ ಮೊದಲಾದ ಹಲವು ರಾಷ್ಟ್ರಗಳಲ್ಲಿ ಆಳುವವರನ್ನು ಚುನಾಯಿಸುವ ಅಧಿಕಾರವನ್ನು ಜನರಿಗೆ ನೀಡಲಾಗಿದೆ. ಅಭಿವೃದ್ಧಿ ಕಾರ್ಯಗಳು, ಜನಪ್ರತಿನಿಧಿಗಳ ಸಂಬಳ, ಭತ್ಯೆ, ಮೊದಲಾದ ಎಲ್ಲ ಖರ್ಚನ್ನು ಪ್ರಜೆಗಳು ಪಾವತಿಸಿದ ತೆರಿಗೆಯಿಂದ ಭರಿಸಲಾಗುತ್ತದೆ. 

ಸರಕಾರ ಮಾಡುವ ಖರ್ಚು ಅಧಿಕವಾದ ಪಕ್ಷದಲ್ಲಿ ಸಕಾ೯ರ ತನ್ನ ಖಚ೯ನ್ನು ಸರಿತೂಗಿ ಸಲು ಸಾಲ ಮಾಡುತ್ತದೆ. ಅದರ ಹೊರೆ ಕೂಡ ನಮ್ಮೆಲ್ಲರ ಮೇಲಿದೆ.

  ನಮ್ಮ ಹಣದಿಂದ ಆಡಳಿತ ನಡೆಯುತ್ತಿರುವಾಗ ನಾವು ಮತದಾನದಿಂದ ದೂರ ಉಳಿಯುವುದು ಸರಿಯೇ?

ಬೆಂಗಳೂರು ನಮ್ಮ ರಾಜಧಾನಿ ಅಲ್ಲಿ ಕೂಡ ಶೇ.56 ಮಾತ್ರ ಮತದಾನ ವಾಗುತ್ತಿದೆ. ಅಂದರೆ ಅಧ೯ದಷ್ಟು ಜನ ಮತದಾನ ಮಾಡದಿರುವುದು ಎಷ್ಟು ಸರಿ.

ಎಷ್ಟೋ ಜನರು ಕೇವಲ ಮತದಾನ ಮಾಡಲು ವಿದೇಶದಿಂದ ಭಾರತಕ್ಕೆ ಬಂದು ತನ್ನ ಮತದಾನ ಮಾಡಿ ಇಲ್ಲಿಂದ ತೆರಳುತ್ತಾರೆ. ಅಂತಹ ಜನರಿಂದ ಮತದಾನ ಮಾಡದವರು ನೋಡಿ ಕಲಿಯಬೇಕು ಅಲ್ಲವೇ ?

 ಸಂವಿಧಾನದ ದೊಡ್ಡ ಕೊಡುಗೆ* *ಈ ಮತದಾನ:-

 ಸಂವಿಧಾನಾತ್ಮಕವಾಗಿ ನಮ್ಮ ಧ್ವನಿಯನ್ನು ಅಭಿವ್ಯಕ್ತಗೊಳಿಸುವ ಅವಕಾಶವನ್ನು ಈ ನೆಲ ನಮಗೆ ದಯಪಾಲಿಸಿದೆ. ಭಾರತದಲ್ಲಿ ಮಲ್ಟಿ ಪೊಲಿಟಿಕಲ್‌ ಸಿಸ್ಟಮ್‌ (ಎರಡಕ್ಕಿಂತ ಹೆಚ್ಚು ಪಕ್ಷಗಳನ್ನು ಹೊಂದುವ ಅವಕಾಶ) ಚಾಲ್ತಿಯಲ್ಲಿದೆ. ಅಮೆರಿಕ, ಯುಕೆ ರಾಷ್ಟ್ರಗಳಲ್ಲಿ ಎರಡೇ ಪಕ್ಷಗಳಿಗೆ ಅವಕಾಶ ಇದೆ. ಆದರೆ ನಮ್ಮಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಉದ್ದೇಶದಿಂದ ಪ್ರಾದೇಶಿಕ ಪಕ್ಷಗಳನ್ನು ಹುಟ್ಟುಹಾಕಲು ಸಂವಿಧಾನವು ಅವಕಾಶ ಕಲ್ಪಿಸಿದೆ. ಈಗಿರುವ ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಇಲ್ಲವೇ? ಇಂತಹ ಸಂದರ್ಭದಲ್ಲಿ ನಿಮಗೂ ಹೊಸಪಕ್ಷವನ್ನು ಸ್ಥಾಪಿಸುವ ಅವಕಾಶವನ್ನು ಹೊಂದಿದವರಾಗಿದ್ದೀರಿ. 

ನೀವು ರಾಜಕೀಯದ ಭಾಗವಾಗಲು ಇಷ್ಟಪಡುತ್ತಿಲ್ಲ ಎಂದರೂ ನೀವು ಮತದಾನದಿಂದ ದೂರ ಉಳಿಯಲು ಆಗುವುದಿಲ್ಲ. ನಿಮ್ಮ ಹುಟ್ಟಿನೊಂದಿಗೆ ನೀವು ಸಂವಿಧಾನತ್ಮಕವಾದ ಉಳಿದೆಲ್ಲ ಹಕ್ಕುಗಳನ್ನು ಅನುಭವಿಸಿಯೂ ಮತದಾನದ ಹಕ್ಕನ್ನು ನಿರಾಕರಿಸಲು ಆಗದು. ನೀವೂ ಮತದಾನದಿಂದ ದೂರ ಉಳಿದು ಬಂಡಾಯ ಪ್ರದರ್ಶನ ಮಾಡಿದ್ದೇ ಆದಲ್ಲಿ, ನಿಮ್ಮಿಂದ ಕೈ ತಪ್ಪಿದ ಒಂದು ಮತದಿಂದ ಏನೂ ಬದಲಾವಣೆಗೆ ಸಾಧ್ಯವಾಗದು. ಮತಕೇಂದ್ರದಲ್ಲಿ ಒಂದು ಬಿಂದು ಶಾಹಿಯ ಉಳಿತಾಯ ಹೊರತುಪಡಿಸಿ ಯಾವುದೂ ಸಾಧಿಸಲು ಆಗುವುದಿಲ್ಲ. 

ಸಂತೋಷಪಡಿ:- 

ಮತದಾನವನ್ನು ಸಂಭ್ರಮಿಸಬೇಕು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಹಬ್ಬದ ರೀತಿಯಲ್ಲಿ ಎಲ್ಲರೂ ಸೇರಿ ನಮ್ಮನ್ನಾಳುವವರನ್ನು ಚುನಾಯಿಸಬೇಕು. ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳೋಣ, ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯೋಣ, ನಾವೆಲ್ಲರೂ ಸಂಭ್ರಮಿಸೋಣ.

ಒಟ್ಟಾಗಿ ಈ ಹಬ್ಬದಲ್ಲಿ ಭಾಗವಹಿಸಿ ದೇಶದ ಅಭಿವೃದ್ಧಿಯಲ್ಲಿ ಕೊಡುಗೆ ನೀಡೋಣ ನನ್ನ ಮತ ದೇಶಕ್ಕಾಗಿ.

ರಾಘವೇಂದ್ರ ಪ್ರಭು, ಕವಾ೯ಲು

ಸಂ.ಕಾಯ೯ದಶಿ೯ ಕಸಾಪ ಉಡುಪಿ

 
 
 
 
 
 
 
 
 
 
 

Leave a Reply