ಕರಾವಳಿ ಎಕ್ಸ್‌ಪ್ರೆಸ್‌- ‘‌ಎಕ್ಸ್‌ಪ್ರೆಸ್‌ ಯುವರ್ ಸೆಲ್ಫ್’~ ರಾಘವೇಂದ್ರ ಜಿ.ಜಿ

‘Express Yourself,Not Impress Others’  ಇದು ಇಂಗ್ಲೀಷ್ ಲಿ ಇರೋ ಒಂದು ಗಾದೆ. ಅಂದ್ರೆ ನಮ್ಮ ತನವನ್ನು ನಾವು ತೋರ್ಪಡಿಸು, ಇತರರನ್ನು ಉತ್ತೇಜಿಸುವ ಮುನ್ನ ಎಂಬುದು. ಅಂದಹಾಗೆ ಸದಾ ಅವಕಾಶ  ಕೊಡುವವರಾದ ಶ್ರೀ ಕೊಡವೂರು ಜನಾರ್ದನ‌ ಸರ್ ಇವರ ಸಾರಥ್ಯದ ಕರಾವಳಿ Express ಇ-ಪೇಪರ್ 27 ನೇ ಜುಲೈ 2021 ಕ್ಕೆ ಈ ಇ-ಪೇಪರ್ ಗೆ ಒಂದು ವರ್ಷ ಸಲ್ಲುತ್ತದೆ. ಆದರೆ ಕೇವಲ ಒಂದು ವರ್ಷದಲ್ಲಿ ನಾಲ್ಕುವರೆ ಲಕ್ಷ ಓದುಗರನ್ನು ಸಂಪಾದಿಸಿದ್ದು ಈ ಪತ್ರಿಕೆಯ ಸಾರದ ಮಹತ್ವ ತಿಳಿಸುತ್ತದೆ.  

‘ಆಡುಮುಟ್ಟದ ಸೊಪ್ಪಿಲ್ಲ’ ಎನ್ನೋ ಮಾತಿದೆ ಅದೆ ತರ ಈ ಪೇಪರ್ ನಲ್ಲಿ ಬರುವ ವಾರ್ತಾ ಮಾಹಿತಿ, ಕಲೆ, ಸಾಹಿತ್ಯ, ಚಿತ್ರಕಲೆ, ಫೋಟೋಗ್ರಫಿ ಮತ್ತು ಸುತ್ತಮುತ್ತಲಿನ ವಿಚಾರ ಹಿಡಿದು ರಾಜ್ಯ, ದೇಶ, ವಿದೇಶಗಳ ಸುದ್ದಿಯನ್ನು ಬೆರಳ ತುದಿಗೆ ತಂದು ನಿಲ್ಲಿಸಿ, ಓದುಗರಿಗೆ ಉಣಬಡಿಸುತ್ತಾ, ನನ್ನಂತಹಾ ಎಷ್ಟೋ ಬರೆಯುವ ಕೈಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹ ನೀಡಿ, ನಮ್ಮ ಬರವಣಿಗೆ ಶೈಲಿಯಲ್ಲಿ ಲೋಪವಿದ್ದರೂ ತಿದ್ದೀ ತೀಡಿ ಮತ್ತೆ ಮತ್ತೆ ಅವಕಾಶ ಕಲ್ಪಿಸಿ ಜನಮನ ತಲುಪುವಲ್ಲಿ ನೆರವಾಗುತ್ತಿದೆ. 

ಅಂದಿನ ಕಾಲಕ್ಕೆ ಹಾರ್ಡ್ ಕಾಪಿ ಪೇಪರ್ ವಿತ್ ಬೆಳಿಗ್ಗೆ ಚಾ ಅಥವಾ ಕಾಫಿ ಅನ್ನೋ ಮಾತಿತ್ತು, ಆದರೆ ಈ ಕಾಲಘಟ್ಟದಲ್ಲಿ ಇ-ಪೇಪರ್ ಮೊಬೈಲ್ ನಲ್ಲಿ ನೋಡುತ್ತಾ ಕುಳಿತು, ಒಂದು ಗ್ಲಾಸ್ ಚಹಾ ಅಥವಾ ಕಾಫಿ ಸವಿದರೆ ಸಮಾಧಾನವೆನಿಸುತ್ತದೆ. ಹಾಗೆಯೇ ಆ ಲಿಂಕ್ ಗಳನ್ನು ನಾವು ಬರೆದ ಲೇಖನ ಎಂದು ಕಾಪಿಮಾಡಿ ನಮ್ಮ ಪರ್ಸನಲ್ ಫೌಲ್ಡರ್ ನಲ್ಲಿ ಇಟ್ಟುಕೊಂಡಲ್ಲಿ ನಮಗೆ ಬೇಕಾದಾಗ ಬೇಕಾದಲ್ಲಿ ಸಿಗುತ್ತದೆ.

ಹೀಗೆ ಕರಾವಳಿ ಎಕ್ಸ್‌ಪ್ರೆಸ್‌ ಇನ್ನೂ ‘ಸೂಪರ್’ ಎಕ್ಸ್‌ಪ್ರೆಸ್‌ ಆಗಿ ಈ ಇ-ಪೇಪರ್ ನಲ್ಲಿ ಎಲ್ಲರ ಮನದಮಾತು ‘ಎಕ್ಸ್‌ಪ್ರೆಸ್‌’ (ಹಂಚಿಕೊಳ್ಳಲು) ಮಾಡಲು ಇನ್ನೂ ಹೆಚ್ಚು ಹೆಚ್ಚು ಅವಕಾಶ ಕೊಡುವಂತಾಗಲಿ ಎಂಬುವುದೇ ನಮ್ಮ ಅಂಬೋಣ.

 
 
 
 
 
 
 
 
 
 
 

Leave a Reply