|ನಮಸ್ತೆ “ಕರಾವಳಿ ಎಕ್ಸ್‌ಪ್ರೆಸ್‌”|~ ಕುಂಡಂತಾಯ

“ಕರಾವಳಿ ಎಕ್ಸ್‌ಪ್ರೆಸ್‌” ನೋಡುವ, ಓದುವ ‘ಇ- ಪೇಪರ್’. ಒಂದು ವರ್ಷದಲ್ಲಿ ನಾಲ್ಕೂವರೆ ಲಕ್ಷ ಓದುಗರನ್ನು ತಲುಪಿದೆ ಎಂಬುದು ಸಂತೋಷದ ವಿಷಯ. ಹಾಗಿದ್ದರೆ ಈ ಸಾಧನೆಗೆ ಏನು ಕಾರಣ ? ಸಹಜವಾಗಿ ಮೂಡುವ ಪ್ರಶ್ನೆ. ಹೌದು ಈ ಪ್ರಶ್ನೆಗೆ ಅಷ್ಟೇ ಸುಲಭದ ಉತ್ತರವಿದೆ, ಅದೇ ಅಗತ್ಯದ , ಮುಖ್ಯ ಸುದ್ದಿಗಳನ್ನು ಸಕಾಲದಲ್ಲಿ ಬಿತ್ತರಿಸುವ ಕ್ಷಿಪ್ರ ನಿರ್ವಹಣೆ.

ಸುದೀರ್ಘವಾಗಿ ಬರೆಯದೆ ತತ್ ಕ್ಷಣಕ್ಕೆ ಎಷ್ಟು ಮಾಹಿತಿ ಬೇಕೋ ಅಷ್ಟನ್ನು ಮಾತ್ರ ಕೊಡುವ ಚಾಕಚಕ್ಯತೆ ಕರಾವಳಿ ಎಕ್ಸ್‌ಪ್ರೆಸ್‌ ನ ನಿರ್ವಹಣಾ ವಿಧಾನ . ಮೊಬೈಲ್ ಕೈಯಲ್ಲಿ ಇರುವಾಗ ನಾವು ಎಲ್ಲೆ ಇದ್ದರೂ ಸಂಭವಿಸುವ ಘಟನೆಗಳ ಒಂದು “ಪ್ಲ್ಯಾಶ್” ಓದುವ ಅವಕಾಶವಾಗುವುದು . ಬಹುಶಃ ಈ ಕಾಲಘಟ್ಟದಲ್ಲಿ ಇದಕ್ಕಿಂತ ಹೆಚ್ಚಿನ ಮಾಹಿತಿ ಕೂಡಲೇ ಅಗತ್ಯವಿಲ್ಲ.

ಇಂತಹ ಅವಸರದ ಬದುಕಿಗೆ ಹೇಳಿಮಾಡಿಸಿದಂತಿದೆ ‘ಕರಾವಳಿ ಎಕ್ಸ್‌ಪ್ರೆಸ್‌’ ಘಟನೆಗಳಿಗೆ ,ಅಪಘಾತಗಳಿಗೆ , ರಾಜಕೀಯ ಸುದ್ದಿಗಳಿಗೆ ಪ್ರಾಶಸ್ತ್ಯ ಕೊಡುವ ಶೈಲಿಯೂ ಅನುಕರಣೀಯ .ರೋಚಕವಾದ ಸುದ್ದಿಗಳಿಗೆ ಹೆಚ್ವಿನ ಮಹತ್ವ ನೀಡದ ‘ಇ- ಪೇಪರ್’ ಕಾರ್ಯನೀತಿ ನಿಚ್ಚಳ .
ಧಾರ್ಮಿಕ , ಸಾಂಸ್ಕೃತಿಕ , ಜನಪದಕ್ಕೆ ಸಂಬಂಧಿಸಿರುವ ಸಣ್ಣ ಪುಟ್ಟ ವಿವರಣೆಯ ಬರೆಹಗಳೂ ಒಂದು ಆಕರ್ಷಣೆಯಾಗಿ ‘ಕರಾವಳಿ ಎಕ್ಸ್‌ಪ್ರೆಸ್‌’ ಮಾನ್ಯತೆಯನ್ನು ಪಡೆದಿದೆ.

ಇವತ್ತಿನ ಬದಲಾದ ಮನೋಧರ್ಮದಂತೆ ಕೃಷಿ , ಆಚರಣೆಗಳ ವಿವರಣೆಗಳನ್ನು ಕೊಡುತ್ತಿರುವುದು ಒಂದು ಹೆಗ್ಗಳಿಕೆ. ಹೀಗೆ ಸುಂದರವಾಗಿ ಬೆಳಗ್ಗಿನ ‘ಸವಿಮಾತಿನ ಸಂದೇಶ’ದೊಂದಿಗೆ ಕರಾವಳಿ ಎಕ್ಸ್‌ಪ್ರೆಸ್‌ ಮುಂದೆಯೂ ನಿರಂತರ ತೆರೆದುಕೊಳ್ಳಲಿ. ಶುಭವಾಗಲಿ‌.
 

 
 
 
 
 
 
 
 
 
 
 

Leave a Reply