ಕರಾವಳಿ ಎಕ್ಸ್‌ಪ್ರೆಸ್‌-ಕರಾವಳಿಯ ನಾಡಿಮಿಡಿತ~ ರಾಘವೇಂದ್ರ ಪ್ರಭು, ಕವಾ೯ಲು

ಬದಲಾಗುವುದು ಈ ದೇಶ ನೀ ಬದಲಾದರೆ, ಸರಿಯಾಗುವುದು ಸಮಾಜ ನೀ ಮೊದಲಾದರೆ “ ಎಂಬ ಮಾತಿನಂತೆ ಬದಲಾಗುತ್ತಿರುವ ಈ ಸನ್ನಿವೇಶದಲ್ಲಿ ನಾವು ಬದಲಾಗದಿದ್ದರೆ ಬದಲಾವಣಿಯು ನಮ್ಮನ್ನು ಬದಲಾಯಿಸುತ್ತದೆ ಹೀಗಾಗಿ ಬದಲಾವಣೆಯು ನಿರಂತರವಾಗಿದೆ.

ಮಾಧ್ಯಮದಲ್ಲಿ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆಯಾದರೂ ಕ್ಷಣ ಕ್ಷಣದ ಸುದ್ದಿಗಳಿಗೆ ಹೆಚ್ಚಿನ ಜನರು ಆಸಕ್ತಿ ವ್ಯಕ್ತಪಡಿಸಿದರ ಪರಿಣಾಮ ಇಂದು ಇ-ಮಾಧ್ಯಮ ಅಥವಾ ವೆಬ್ ಸೈಟ್ ಮಾಧ್ಯಮಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ.

ಈಗಿನ ಪರಿಸ್ಥಿತಿಯಲ್ಲಿ ಅದರ ಅವಶ್ಯಕತೆ ಕೂಡ ಇದೆ. ಈ ನಿಟ್ಟಿನಲ್ಲಿ ಜನಾರ್ದನ‌ ಕೊಡವೂರು ಇವರ ಸಾರಥ್ಯದಲ್ಲಿ ಪ್ರಾರಂಭವಾದ ಕರಾವಳಿ Express ಇ-ಪೇಪರ್ 27 ನೇ ಜುಲೈ 2021 ಕ್ಕೆ ಈ ಇ-ಪೇಪರ್ ಗೆ ಒಂದು ವರ್ಷ ಸಲ್ಲುತ್ತದೆ. ಈ ನಿಟ್ಟಿನಲ್ಲಿ ಶ್ರೀಯುತ ಜನಾಧ೯ನ್ ಕೊಡವೂರು ಮತ್ತು ಅವರ ತಂಡಕ್ಕೆ ವಿಶೇಷ ಅಭಿನಂದನೆಗಳು.

ಕೇವಲ ಕ್ಷಣ- ಕ್ಷಣದ ಸುದ್ದಿಯಲ್ಲದೆ ವಿವಿಧ ರೀತಿಯ ಅಂಕಣಗಳು, ಲೇಖನಗಳು ಕೂಡ ಉತ್ತಮವಾಗಿ ಮೂಡಿ ಬರುತ್ತಿದೆ. ವಿವಿಧ ಬಗೆಯ ಅಡುಗೆ ತಯಾರಿ, ರಾಜಕೀಯ, ಧಾಮಿ೯ಕ ಸಂಬಂಧಿಸಿದ ಬರಹಗಳು ಓದುಗರ ಮನಸ್ಸನ್ನು ಆಕಷಿ೯ಸುವಲ್ಲಿ ಸಫಲವಾಗಿದೆ. ಹೀಗಾಗಿ ಇ-ಪತ್ರಿಕೆಯ ಕರಾವಳಿ ಜನತೆಯ ನಾಡಿ ಮಿಡಿತವಾಗಿ ಎಂದರೆ ತಪ್ಪಾಗಲಾರದು

ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ಮೂಡಿ ಬರಲಿ ಅತ್ಯಂತ ಯಶಸ್ಸಿನೊಂದಿಗೆ ಮುಂದುವರೆಯಲ್ಲಿ ಎಂಬ ಶುಭ ಹಾರೈಕೆಗಳು. wish you all the Best

ರಾಘವೇಂದ್ರ ಪ್ರಭು, ಕವಾ೯ಲು, ಪತ್ರಿಕೆಯ ಬರಹಗಾರ/ಅಭಿಮಾನಿ

 
 
 
 
 
 
 
 
 
 
 

Leave a Reply