Udupi: 15.10.2020~ ಇಂದು ರಾಷ್ಟ್ರೀಯ ಅಂಚೆ ಸಪ್ತಾಹದಲ್ಲಿ ಟಪ್ಪಾಲು ದಿನದ ಆಚರಣೆ. ಮೇಲ್ಸ್ ಡೇ. ನಮ್ಮ ಅಂಚೆ ಇಲಾಖೆ ಮೊದಲು ಗುರುತಿಸಿಕೊಂಡದ್ದು ಮನೆ ಮನೆಗೂ ವಿತರಿಸುವ ಟಪ್ಪಾಲಿನಿಂದಾಗಿ. ಅಂಚೆ ಎಂಬ ಶಬ್ದ ಕೇಳಿದಾಗ ಅಂಚೆ ಅಣ್ಣ ಮತ್ತು ಅಂಚೆ ಪಾಲಕ ಇವರಿಬ್ಬರ ಹೆಸರೇ ಜನರ ಮನದಲ್ಲಿ ಜಾಸ್ತಿ ಬಳಕೆ ಯಲ್ಲಿದ್ದದ್ದು.
ಆದರೆ ಇದೀಗ ಶತಮಾನಗಳ ಇತಿಹಾಸವುಳ್ಳ ನಮ್ಮ ಭಾರತೀಯ ಅಂಚೆ ಇಲಾಖೆ ಕೇವಲ ಅಂಚೆ ಬಟವಾಡೆಗೆ ಮಾತ್ರ ಸೀಮಿತವಾಗಿಲ್ಲ. ಅಂಚೆ ಅಣ್ಣ ಇದೀಗ ಕೋವಿಡ್ ವೀರ, ಮೈಕ್ರೋ ಎಟಿಎಮ್ ಧೀರ. ಕೋವಿಡ್ 19 ರ ಈ ಸಂದಿಗ್ಧ ಸಮಯದಲ್ಲಿ ಅಂಚೆ ಇಲಾಖೆಯ ಸೇವೆ ವಿಶ್ವದಾದ್ಯಂತ ಜನರ ಪ್ರಶಂಸೆಗೆ ಪಾತ್ರವಾಗಿದೆ. ಈ ದಿನ ಗಳಲ್ಲಿ ಲಾಕ್ ಡೌನ್, ಸೀಲ್ ಡೌನ್ ಮುಂತಾದ ಅನಿಶ್ಚಿತ ಸಮಯಗಳಲ್ಲಿ ಮನೆ ಮನೆಗೆ ತಲುಪಿ ಔಷಧ ಇಲ್ಲವೇ ಅಗತ್ಯ ವಸ್ತುಗಳನ್ನು ತಲುಪಿ ಸುವ, ಮನೆ ಬಾಗಿಲಿಗೆ ಹಣ ಸಂದಾಯದ ವ್ಯವಸ್ಥೆ ಮಾಡಿದ, ರಾಖಿಪೋಸ್ಟ್, ಗುರು ವಂದನಾ ಪೋಸ್ಟ್ ಮುಂತಾದ ಹೊಸತನಗಳ ಹರಿಕಾರನಾದ ನಮ್ಮ ಇಲಾಖೆಯ ಕೆಲಸ ಶ್ಲಾಘನೀಯ.
ಐಪಿಪಿಬಿ ಮುಖಾಂತರ, ಎಯಿಪಿಎಸ್ ಮುಖಾಂತರ ಮೈಕ್ರೋ ಎಟಿಮ್ ಅಂದೆನಿಸಿಕೊಂಡ ಅಂಚೆ ಅಣ್ಣ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ತಲುಪಿಸಿದರೆ ಅಂಚೆ ಮಿತ್ರ ಸೇವೆಯ ಮೂಲಕ ಇಲಾಖೆಯ ಹೆಚ್ಚಿನ ಸೇವೆಯನ್ನು ಜನರಿದ್ದಲೇ ತರಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿದ್ಯುನ್ಮಾನದ ಯುಗದ ಮಧ್ಯೆ ಟಪ್ಪಾಲು ವಿಷಯದಲ್ಲಿ ನಮ್ಮ ಇಲಾಖೆ ಹಿಂದಿನ ಛಾಪು ಕಳೆದುಕೊಂಡಿದ್ದರೂ ಆಧುನಿಕ ಯುಗಕ್ಕೆ ಸರಸಾಟಿಯಾಗಿ ಹತ್ತು ಹಲವು ಹೊಸ ತನಗಳನ್ನು ಮೈಗೂಡಿಸಿಕೊಂಡು ಮತ್ತೆ ಮೇಲೆದ್ದು ನಿಂತಿದೆ.
ಇಂದಿಗೂ ಸಂಸ್ಥೆಯ ನೋಟೀಸುಗಳು, ನಿಯತಕಾಲಿಕಗಳು, ಬಿಲ್ಲುಗಳು, ವಾರ್ಷಿಕ ವರದಿಗಳು, ಪುಸ್ತಕ ಗಳು, ಮ್ಯಾಗ ಜಿನ್ ಗಳು ಹೀಗೆ ಹತ್ತು ಹಲವು ಪತ್ರ ಮಾಧ್ಯಮಗಳು ನಮ್ಮ ಇಲಾಖೆಯಿಂದಲೇ ಬಟವಾಡೆಯಾಗುತ್ತಿವೆ. ತ್ವರಿತ ಅಂಚೆ, ನೋಂದಾಯಿತ ಅಂಚೆ ಪಾರ್ಸೆಲ್ ಗಳು ಕೂಡಾ ಗಣನೀಯ ಮಟ್ಟದಲ್ಲಿ ನಮ್ಮ ಇಲಾಖೆಯ ಮೂಲಕವೇ ವಿಶ್ವದಾದ್ಯಂತ ರವಾನೆಯಾಗುತ್ತಿವೆ. ಎಷ್ಟೆಂದರೂ ಒಂದಷ್ಟು ಮೊಬೈಲ್, ಗಣಕ ಯಂತ್ರ, ಮಿಂಚಂ ಚೆಯ ಭರಾಟೆಯಲ್ಲಿ ಅಧಿಕ ಸಮಯದ ದಾಖಲೀಕರಣದ ಮಾನ ಇರುವುದು ಪತ್ರ ಮಾಧ್ಯಮಕ್ಕೆ ತಾನೇ.
ಭಾವನೆಗಳ ಹರಿಕಾರ, ಮನೆಮನಗಳ ತಲುಪುವ ಕೋವಿಡ್ ಯುದ್ದ ವೀರ, ಆತ್ಭಾಂಧವ ಅಂಚೆ ಅಣ್ಣನಿಗೆ, ಸಂದಿಗ್ಧ ಸಮಯದಲ್ಲೂ ಜನರಿಗೆ ಸೇವೆ ನೀಡಿದ, ನೀಡುತ್ತಿರುವ ಅಂಚೆ ಇಲಾಖೆಯ ಎಲ್ಲ ಸಹೋದ್ಯೋಗಿಗಳಿಗೆ, ಗ್ರಾಹಕರಿಗೆ ಟಪ್ಪಾಲು ದಿನದ ಶುಭಾಶಯಗಳು..
.