ಕರ್ನಾಟಕ ರಾಜ್ಯ ಬಜೆಟ್ನಲ್ಲಿ ಕೃಷಿ ಮತ್ತು ಹೈನುಗಾರಿಕೆ ಗೆ ಹೆಚ್ಚಿನ ಕಾರ್ಯಕ್ರಮ ಮತ್ತು ಅನುದಾನ

ಗ್ರಾಮೀಣ ಭಾಗದ ಜನರ ಆರ್ಥಿಕ ಸ್ಥಿತಿಗೆ ಅನುಕೂಲವಾಗುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಬಜೆಟ್ನಲ್ಲಿ ಕೃಷಿ ಮತ್ತು ಹೈನುಗಾರಿಕೆ ಗೆ ಹೆಚ್ಚಿನ ಕಾರ್ಯಕ್ರಮ ಮತ್ತು ಅನುದಾನಗಳನ್ನು ನೀಡಲಾಗಿದೆ.

ಗೋ ಸಂತತಿಯ ರಕ್ಷಣೆ ಮತ್ತು ಅಭಿವೃದ್ಧಿಗಾಗಿ “ಪುಣ್ಯಕೋಟಿ ದತ್ತು ಯೋಜನೆ”ಯು ಮೂಲಕ ಗೋಪ್ರೇಮಿ ಸಾರ್ವಜನಿಕರಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ ವಾರ್ಷಿಕ 11,000 ರೂಪಾಯಿಗಳಿಗೆ ಗೋವನ್ನು ದತ್ತು ತೆಗೆದುಕೊಳ್ಳುವ ಯೋಜನೆ ಸಂರಕ್ಷಣೆಗೆ ಪ್ರೋತ್ಸಾಹ ನೀಡುತ್ತದೆ.

ಗೋ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟಕ್ಕಾಗಿ ಹೆಚ್ಚಿನ ಒತ್ತನ್ನು ನೀಡಲಾಗಿದ್ದು,”ಗೋಮಾತಾ ಸಹಕಾರ ಸಂಘಗಳ ಸ್ಥಾಪನೆ”, ಗೋ ಉತ್ಪನ್ನಗಳ ತಾಂತ್ರಿಕತೆ ಮತ್ತು ಪ್ರಮಾಣೀಕರಣಗಳ ಅಭಿವೃದ್ಧಿಗೆ ಪಶು ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ಕೋಶಗಳ ಸ್ಥಾಪನೆ ಒಂದು ಮಹತ್ವದ ಹೆಜ್ಜೆಯಾಗಿದೆ.

ಹೈನುಗಾರರಿಗೆ ಪ್ರತ್ಯೇಕವಾಗಿ ಸಾಲ ಸೌಲಭ್ಯಗಳನ್ನು ನೀಡಲು “ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್” ಸ್ಥಾಪನೆಗೆ ರಾಜ್ಯ ಸರಕಾರವು 100 ಕೋಟಿಗಳ ಷೇರು ಬಂಡವಾಳವನ್ನು ನೀಡಿ ಪ್ರೋತ್ಸಾಹಿಸುತ್ತಿರುವುದು ಹೈನುಗಾರಿಕೆಗೆ ಆರ್ಥಿಕ ಚೈತನ್ಯವನ್ನು ನೀಡಿದಂತಾಗುತ್ತದೆ.

ರಾಜ್ಯದಲ್ಲಿ ಗೋ ಸಂಪತ್ತಿನ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಈಗ ಇರುವ 31 ಗೋಶಾಲೆಗಳನ್ನು ನೂರು ಗೋಶಾಲೆಗಳಿಗೆ ವಿಸ್ತರಿಸುವುದು ಮತ್ತು ಅದಕ್ಕಾಗಿ 50 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ನೀಡುತ್ತಿರುವುದು ಆಶಾದಾಯಕ ಬೆಳವಣಿಗೆ.

 
 
 
 
 
 
 
 
 
 
 

Leave a Reply