Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

ಲ| ವಿ. ಜಿ. ಶೆಟ್ಟಿಯವರಿಂದ ಸಮಾಜಮುಖಿ ಕಾರ್ಯಗಳಿಗೆ ಆರ್ಥಿಕ ನೆರವು

ಉದ್ಯಮಿ, ಮಾಜಿ ಲಯನ್ ಗವರ್ನರ್ ಲ| ವಿ. ಜಿ. ಶೆಟ್ಟಿಯವರು ಉಡುಪಿ ಮಿಡ್‌ಟೌನ್ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಯಕ್ಷಗಾನ ಕಲಾರಂಗ, ಇನ್ನಂಜೆ ಶಾಲಾ ಮಕ್ಕಳ ಯುನಿಫಾರ್ಮ್ ಮತ್ತು ಇನ್ನಂಜೆ ಆಂಗ್ಲಮಾಧ್ಯಮ ಶಾಲಾ ಅಭಿವೃದ್ಧಿ ಕಾರ್ಯಗಳಿಗೆ ಅನುಕ್ರಮವಾಗಿ ರೂ. 2,00,000/-, ರೂ. 62,000/- ಮತ್ತು ರೂ. 50,000/- ಸಹಾಯಧನದ ಚೆಕ್ ವಿತರಿಸಿದರು.

ಯಕ್ಷಗಾನ ಕಲಾರಂಗದ ಪರವಾಗಿ ಚೆಕ್ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಎಮ್. ಗಂಗಾಧರ ರಾವ್ ನಮ್ಮ ಸಂಸ್ಥೆಯ ಉಪಾಧ್ಯಕ್ಷರೂ ಹೆಮ್ಮೆಯ ಕಾರ್ಯಕರ್ತರಾದ ವಿ. ಜಿ. ಶೆಟ್ಟಿಯಂಥವರಿoದ ಸಂಸ್ಥೆ ಸಮಾಜಪರ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಸಂಸ್ಥೆ ಮಾಡುತ್ತಿರುವ ಕಾರ್ಯಕ್ರಮಗಳ ಕಿರು ಪರಿಚಯ ಮಾಡಿದರು.

ಈ ಸಂದರ್ಭದಲ್ಲಿ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಪ್ರೊ. ನಾರಾಯಣ ಎಮ್. ಹೆಗಡೆ, ಎ. ನಟರಾಜ ಉಪಾಧ್ಯಾಯರು ಉಪಸ್ಥಿತರಿದ್ದರು. ವಿ. ಜಿ. ಶೆಟ್ಟಿಯವರು ಕಳೆದ ಕೆಲವು ವರ್ಷಗಳಿಂದ ಯಕ್ಷಗಾನ ಕಲಾರಂಗ ಮತ್ತು ತಾನು ಕಲಿತ ಶಾಲೆಗೆ ನಿರಂತರ ಸಹಾಯಧನ ನೀಡುತ್ತಾ ಬಂದಿರುತ್ತಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!