ನವೀನ್ ಕೆ.ಶೆಟ್ಟಿಬೆಟ್ಟು​ರವರ “ಅನಾವರಣ​”​ ​ಕೃತಿ ಲೋಕಾರ್ಪಣೆ 

ಉಡುಪಿ :- ಇತ್ತೀಚೆಗಿನ ದಿನಗಳಲ್ಲಿ ಬರೆಯುವ ಮನೋಭಾವನೆ ಕಡಿಮೆಯಾಗುತ್ತಿದೆ ಇದು ಸರಿಯಲ್ಲ ಬರೆಯುವಿಕೆ ಮತ್ತು ಓದುವಿಕೆಯು ಮನುಷ್ಯನನ್ನು ಒತ್ತಡಗಳಿಂದ ದೂರ ಮಾಡಬಲ್ಲದು ಎಂದು ಬಡಗಬೆಟ್ಟು ಕ್ರೆ.ಕೋ. ಸೋಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.

ಅವರು ಜೇಸಿಐ ಪಕ೯ಳ ದ ಆಶ್ರಯದಲ್ಲಿ ಮಾ.5ರಂದು ವಿಘನೇಶ್ವರ ಸಭಾ ಭವನದಲ್ಲಿ  ನಡೆದ ಯುವ ಬರಹಗಾರ ಬಡಗಬೆಟ್ಟು ಕ್ರೆ.ಕೋ. ಸೋಸೈಟಿ ಶಾಖಾ ವ್ಯವಸ್ಥಾಪಕ ನವೀನ್ ಕೆ. ಶೆಟ್ಟಿಬೆಟ್ಟು ಬರೆದ ಅನಾವರಣ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.​ ಮೊಬೈಲ್ ಸಾಮಾಜಿಕ ಜಾಲತಾಣದ ಪರಿಣಾಮವಾಗಿ ಪುಸ್ತಕಗಳು ಹೊರಬರುತ್ತಿರುವುದು ಕಡಿಮೆಯಾಗಿದೆ ಈ ಸಂದಭ೯ದಲ್ಲಿ ಯುವ ಜನಾಂಗದವರು ಸಾಹಿತ್ಯ ಕೃಷಿ ಮಾಡುತ್ತಿರುವುದು ಅಭಿನಂದನಾಹ೯ ಎಂದರು.

ಸಕಾ೯ರಿ ಪ್ರ.ದ ಕಾಲೇಜು ಮಂಗಳೂರು ರಥಬೀದಿ ಪ್ರಾಧ್ಯಾಪಕ ಡಾII ನವೀನ್ ಕೊಣಾಜೆ ಮಾತನಾಡಿ ಕಾಲೇಜುಗಳಲ್ಲಿ ವಿದ್ಯಾಥಿ೯ಗಳಲ್ಲಿ ಅಡಗಿರುವ ಸಾಹಿತ್ಯ ಪ್ರೀತಿಗೆ ಗೋಡೆ ಪತ್ರಿಕೆಗಳು ಉತ್ತಮ ವೇದಿಕೆಗಳಾಗಿವೆ ಇದನ್ನು ಬಳಸಿಕೊಂಡು ಕೃತಿಕಾರರು ಒಳ್ಳೆಯ ಕೃತಿ ತರಲು ಪ್ರೇರಣೆ ಯಾಗಿದೆ. ಅದೇ ರೀತಿ ಅದ್ಯಾಪಕರ ಮಾಗ೯ದಶ೯ನ ಕೂಡ ಅಗತ್ಯವಾಗಿದೆ. ಎಂದರು.


ವಕೀಲ, ಸಾಹಿತಿ ಸುಹಾನ್ ಸಾಸ್ತಾನ ಕೃತಿಯು ಪ್ರಸ್ತುತ ಸಮಾಜಕ್ಕೆ ಹತ್ತಿರವಾದ ಅಂಶಗಳ ಬಗ್ಗೆ ಬೆಳಕು ಚೆಲ್ಲಿದೆ. ನಮ್ಮ ಗೆಳೆಯರ ಬಳಗವು ಬೇರೆ ಬೇರೆ ಕಡೆ ಪ್ರವಾಸಕ್ಕೆ ತೆರಳುವ ಸಂದಭ೯ ಅಲ್ಲಿ ನೋಡಿದ ಸನ್ನಿವೇಶಗಳ ಬಗ್ಗೆ ಕೂಡ ಕೃತಿ ತಿಳಿಸಿದೆ.ಮುಂದಿನ ದಿನಗಳಲ್ಲಿ ಯುವ ಜನಾಂಗಕ್ಕೆ ಕವನ ರಚನಾ ಕಮ್ಮಟ ಕಾಯ೯ಕ್ರಮ ನಡೆಸಲಾಗುವುದು ಎಂದರು.

ಅಧ್ಯಕ್ಷತೆಯನ್ನು ಘಟಕಾಧ್ಯಕ್ಷ ಮನೋಜ್ ಪ್ರಭು, ವಹಿಸಿ ಶುಭ ಹಾರೈಸಿದರು.ರಂಗಕಮಿ೯ ಬಾಸುಮ ಕೊಡಗು ಕೃತಿ ಪರಿಚಯ ಮಾಡಿದರು.​ ​ವೇದಿಕೆಯಲ್ಲಿ ಮೊಗವೀರ ಯುವ ಸಂಘ ಹಿರಿಯಡಕ ಅಧ್ಯಕ್ಷ ವಿಜಯ ಮೆಂಡನ್, ಕಾಯ೯ದಶಿ೯ ಉಷಾ ಜೆ ಕಲ್ಮಾಡಿ, ದೀಪಿಕಾ, ಇಂಚರ ಮುಂತಾದವರಿದ್ದರು.
ಈ ಸಂದಭ೯ ಸೆಲ್ಯೂಟ್ ದ ಸೈಲೆಂಟ್ ವಕ೯ರ್ ಪುರಸ್ಕಾರವನ್ನು ಮೆಸ್ಕಾಂ ಲೈನ್ ಮ್ಯಾನ್ ರಾಜೇಶ್ ಅಮೀನ್ ರವರಿಗೆ ನೀಡಲಾಯಿತು.​ ​ಕೃತಿಕಾರ ನವೀನ್ ಕೆ ಶೆಟ್ಟಿ ಬೆಟ್ಟು ವಂದಿಸಿದರು​. ​ರಾಘವೇಂದ್ರ ಕವಾ೯ಲು ನಿರೂಪಿಸಿದರು.​​
 
 
 
 
 
 
 
 
 
 
 

Leave a Reply