ಡಾ| ಮೋಹನ್ ಆಳ್ವ ಮಡಿಲಿಗೆ  ‘ವಿಶ್ವ ಪ್ರಭಾ’ ಪುರಸ್ಕಾರ

ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಂದ ಉದ್ಘಾಟನೆಗೊಂಡ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ), ಉಡುಪಿ ಸಾಹಿತ್ಯ, ಸಂಗೀತ, ಚಿತ್ರಕಲೆ, ಸಾಕ್ಷಾಚಿತ್ರ , ನಾಟಕ, ನೃತ್ಯ, ಲಲಿತ ಕಲೆಗಳು ಹೀಗೆ ಯುವಪೀಳಿಗೆಯ ಹೃದಯದಲ್ಲಿ ಸೌಂದರ್ಯ ಪ್ರಜ್ಞೆ ಮೂಡಿಸಿ ಅರಳಿಸಲು ಹಲವು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಲಾ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದೆ.

ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಸಂಸ್ಥೆಯು ಸೀಮಿತ ಅವಧಿಯಲ್ಲೇ ಸಾಮಾಜಿಕ ಜಾಲತಾಣ ಗಳಾದ ಯೂಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ಆಯೋಜಿಸಿದ್ದ ನವರಸ ಮಾಲಿಕೆ , ಕಥಾ ಸಪ್ತಾಹ, ಸಾಕ್ಷಾಚಿತ್ರಗಳು ಸುಮಾರು ಐದು ಲಕ್ಷಕ್ಕೂ ಅಧಿಕ ದೇಶ-ವಿದೇಶದ ವೀಕ್ಷಕರು ವೀಕ್ಷಿಸಿರುವುದು ಸಂಸ್ಥೆಯ ಹೆಮ್ಮೆಯ ವಿಷಯ.

ಇದರೊಂದಿಗೆ ಜಾನಪದ ಉತ್ಸವ ,ಏಕವ್ಯಕ್ತಿ ನಾಟಕ, ಬಡವರಿಗೆ ಸಹಾಯ ಹಸ್ತ, ಮಲಬಾರ್ ವಿಶ್ವರಂಗ ಪುರಸ್ಕಾರ, ಸಾಮಾಜಿಕ ಅರಿವು ಮೂಡಿಸುವ ಬೀದಿ ನಾಟಕ, ಪುಸ್ತಕ ಬಿಡುಗಡೆ ಇನ್ನಿತರ ಕಾರ್ಯಕ್ರಮಗಳನ್ನು ಉಡುಪಿ ಜಿಲ್ಲೆಯ ಸುತ್ತಮುತ್ತ ನಿರಂತರವಾಗಿ ನಡೆಸುತ್ತಾ ಬಂದಿದೆ.

ಈ ವರ್ಷ ಪ್ರಥಮ ಬಾರಿಗೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸಂಸ್ಥೆಯ ಸ್ಥಾಪಕರು ಹಾಗೂ ಗೌರವಾಧ್ಯ ಕ್ಷರಾದ ಉಡುಪಿ ವಿಶ್ವನಾಥ್ ಶೆಣಿೈ ಮತ್ತು ಅವರ ಪತ್ನಿಯ ಹೆಸರಿನಲ್ಲಿ ಕೊಡಮಾಡಲಾಗುವ ‘ವಿಶ್ವ ಪ್ರಭಾ’ ಪುರಸ್ಕಾರವನ್ನು ಕನ್ನಡ ನಾಡು-ನುಡಿ ಸಂಸ್ಕೃತಿಗೆ ಕೊಟ್ಟಂತಹ ಅಮೂಲ್ಯ ಸೇವೆಗಾಗಿ, ಮೂಡಬಿದ್ರೆಯ ಆಳ್ವಾಸ್ ಸಂಸ್ಥೆಯ ಮುಖ್ಯಸ್ಥರಾದ ಡಾ| ಮೋಹನ್ ಆಳ್ವ ಅವರಿಗೆ ನೀಡಲಾಗುವುದು.

ಈ ಪುರಸ್ಕಾರವು ಪ್ರಶಸ್ತಿ ಪತ್ರದೊಂದಿಗೆ ಫಲಕ ಹಾಗೂ 100000 ( ಒಂದು ಲಕ್ಷ) ಮೊತ್ತವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಏಪ್ರಿಲ್ 3 ಮತ್ತು 4 ರಂದು ಉಡುಪಿಯಲ್ಲಿ ನಡೆಯುವ ಪ್ರತಿಷ್ಠಾನದ ಉತ್ಸವದಲ್ಲಿ ನೀಡಲಾಗುವುದು ಎಂದು ‘ವಿಶ್ವ ಪ್ರಭಾ’ ಪುರಸ್ಕಾರದ ಸಮಿತಿಯ ಸಂಚಾಲಕರಾದ ಮರವಂತೆ ನಾಗರಾಜ್ ಹೆಬ್ಬಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿ ರುತ್ತಾರೆ.

ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷರಾದ ಹಾಗೂ ಪುರಸ್ಕಾರದ ಪ್ರಾಯೋಜಕರೂ ಆದ ವಿಶ್ವನಾಥ ಶೆಣೈ, ಅಧ್ಯಕ್ಷರಾದ ಪ್ರೊಫೆಸರ್ ಶಂಕರ್, ಉಪಾಧ್ಯಕ್ಷರಾದ ಸಂಧ್ಯಾ ಶೆಣೈ, ಪ್ರಧಾನ ಕಾರ್ಯ ದರ್ಶಿ ಗಿರೀಶ್ ತಂತ್ರಿ ಮತ್ತು ಸಂಚಾಲಕ ರವಿರಾಜ್ ಎಚ್.ಪಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply