ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಗ್ರಹಣಶಾಂತಿ

ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಇದೇ ತಿಂಗಳ 8ನೇ ತಾರೀಕು ಮಂಗಳವಾರದಂದು ಚಂದ್ರಗ್ರಹಣದ ಪ್ರಯುಕ್ತ ಗ್ರಹಣ ಶಾಂತಿಯನ್ನು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜೀ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ತೀಕ ಪಕ್ಷದ ಹುಣ್ಣಿಮೆಯ ಮಂಗಳವಾರದಂದು ಭರಣಿ ನಕ್ಷತ್ರ ಮೇಷ ರಾಶಿಯಲ್ಲಿ ಚಂದ್ರನಿಗೆ ರಾಹು ಗ್ರಹಣವು ಸಂಭವಿಸಲಿದೆ .ಈ ಗ್ರಹಣವು ಮಧ್ಯಾಹ್ನ ಗಂಟೆ 2 :41ಕ್ಕೆಸ್ಪರ್ಶವಾಗಲಿದ್ದು 4ಗಂಟೆ 32ನಿಮಿಷಕ್ಕೆ ಮಧ್ಯಕಾಲ ವಾಗಲಿದೆ. ಸಂಜೆ 6ಗಂಟೆ 22 ನಿಮಿಷಕ್ಕೆ ಗ್ರಹಣ ಮೋಕ್ಷ ಕಾಲ ವಾಗಲಿದೆ.

ಈ ಗ್ರಹಣವು ಭರಣಿ ಪುಬ್ಬ ಪೂರ್ವಾಷಾಢ ಅಶ್ವಿನಿ ಕೃತ್ತಿಕಾ ನಕ್ಷತ್ರದ ಅವರಿಗೂ ಮೇಷ ವೃಷಭ ಕನ್ಯಾ ರಾಶಿಯವರಿಗೆ ಅನಿಷ್ಟಕರ. ಕ್ಷೇತ್ರದಲ್ಲಿ ಗ್ರಹಣ ಶಾಂತಿಯನ್ನು ಸಾಮೂಹಿಕವಾಗಿ ಆಯೋಜಿಸಲಾಗಿದ್ದು ತತ್ಸಂಬಂಧಿತ ರಾಶಿ ನಕ್ಷತ್ರದವರು ಗ್ರಹಣ ಶಾಂತಿ ಯಲ್ಲಿ ಪಾಲ್ಗೊಳ್ಳಬಹುದು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮಾ ನಾಗರಾಜ್ ತಿಳಿಸಿರುತ್ತಾರೆ .

Leave a Reply