ಹವಾಮಾನ ವೈಪರಿತ್ಯದಿಂದಾಗಿ 42 ಜನರನ್ನು ಹೊತ್ತ ವಿಮಾನವೊಂದು ಸರೋವರದಲ್ಲಿ ಪತನವಾಗಿರುವ ಘಟನೆ ಭಾನುವಾರ ಬೆಳಗ್ಗೆ ಪೂರ್ವ ಆಫ್ರಿಕಾದ ತಾಂಜಾನಿಯಾದಲ್ಲಿ ನಡೆದಿದೆ.
ತಾಂಜಾನಿಯಾದ ಬುಕೋಬಾದಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ವಿಮಾನ ಹವಾಮಾನ ವೈಪರಿತ್ಯದಿಂದಾಗಿ ಕೇವಲ 100 ಮೀ. ದೂರದಲ್ಲಿದ್ದ ವಿಕ್ಟೋರಿಯಾ ಸರೋವರಕ್ಕೆ ಅಪ್ಪಳಿಸಿದೆ ಎಂದು ವರದಿಗಳು ತಿಳಿಸಿವೆ.
39 ಪ್ರಯಾಣಿಕರು, ಇಬ್ಬರು ಪೈಲಟ್‌ಗಳು ಮತ್ತು ಇಬ್ಬರು ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ಒಟ್ಟು 43 ಜನರನ್ನು ಹೊತ್ತಿದ್ದ ವಿಮಾನ ದಾರ್ ಎಸ್ ಸಲಾಮ್‌ನಿಂದ ಹೊರಟಿತ್ತು. 26 ಜನರನ್ನು ಈಗಾಗಲೇ ರಕ್ಷಿಸಲಾಗಿದ್ದು, ಉಳಿದವರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






