ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಯಾಗಶಾಲೆಗೆ ಶಿಲಾನ್ಯಾಸ

ಉಡುಪಿ : ಸಂಪೂರ್ಣ ಜೀರ್ಣೋದ್ದಾರ ಗೊಳ್ಳುತ್ತಿರುವ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಯಾಗಶಾಲೆಗೆ ಪೇಜಾವರ ಶ್ರೀ  ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಶಿಲಾನ್ಯಾಸ ನೆರವೇರಿಸಿದರು.

 ಆಶೀರ್ವಚನ ನೀಡಿ ಮಾತನಾಡಿದ ಸ್ವಾಮೀಜಿ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನಕ್ಕೂ ಉಡುಪಿಯ ಶ್ರೀಕೃಷ್ಣಮಠಕ್ಕೆ ಇರುವ ಅವಿನಾಭಾವ ಸಂಬಂಧವನ್ನು ನೆನಪಿಸಿಕೊಂಡು ಜೀರ್ಣೋದ್ದಾರ ಸಂಪೂರ್ಣಗೊಂಡು ಎಲ್ಲಾ ಕೆಲಸಗಳು ಶೀಘ್ರವಾಗಿ ವೈಭವಯುತವಾಗಿ ನಡೆಯಲಿ ಎಂದು ಹರಸಿದರು.

ಉಡುಪಿ ಶಾಸಕ ಮತ್ತು ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ದೇವಸ್ಥಾನಕ್ಕೆ ಆಗಮಿಸುವ ದಾರಿ, ಮತ್ತು ಪಾರ್ಕಿಂಗ್ ಸುವ್ಯವಸ್ಥಿತಗೊಳಿಸಲು ಸೂಕ್ತ ಮಾಸ್ಟರ್ ಪ್ಲಾನ್ ರಚಿಸುವಂತೆ ಸಲಹೆ ಸೂಚನೆ ನೀಡಿದರು.ಆ ಮೂಲಕ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಮತ್ತಷ್ಟು ಸುವ್ಯವಸ್ಥೆ ಗೊಳಿಸುವಂತೆ ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ಕೆ ಸದಾಶಿವ ಪ್ರಭು, ಶುಭಂಶನೆಗೈದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ ಹೆಗ್ಡೆ, ಸ್ವಾಗತಿಸಿ ವ್ಯವಸ್ಥಾಪನ ಮಂಡಳಿ ಅಧ್ಯಕ್ಷ ಡಾ. ರವಿರಾಜ ವಿ. ಆಚಾರ್ಯ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮತ್ತು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿ ಕೆ.ಸತೀಶ್ ಕುಲಾಲ್ ವಂದಿಸಿದರು. ಹಲವಾರು ಭಕ್ತಾಭಿಮಾನಿಗಳು ಜೀರ್ಣೋದ್ದಾರಕ್ಕೆ ಕಾಣಿಕೆ ನೀಡಿದರು.

 
 
 
 
 
 
 
 
 
 
 

Leave a Reply