ಹಿಂದೂ ಸಮಾಜ ಜಾಗೃತವಾದರೆ ಯಾವುದೇ ಜೆಹಾದ್‌​ ನಡೆಯಲು ಸಾಧ್ಯವಿಲ್ಲ​~ ಜಗದೀಶ ಕಾರಂತ

ಉಡುಪಿ:  ಭಾರತದ ಇಸ್ಲಾಮೀಕರಣಕ್ಕೆ ಜಗತ್ತಿನ ಎಲ್ಲ ಮುಸ್ಲಿಂ ರಾಷ್ಟ್ರ ಮತೀಯ ಶಕ್ತಿಗಳೂ ಒಟ್ಟುಗೂಡಿವೆ. ಕೇರಳ ಕರಾವಳಿಯನ್ನು ಸುಟ್ಟ ಮತಾಂಧರು ಕರ್ನಾಟಕದ ಕರಾವಳಿಗೆ ಜೆಹಾದ್‌ ಮೂಲಕ ಕಾಲಿಟ್ಟದ್ದಾರೆ ಎಂದು ಹಿಂದೂ ಜಾಗರಣ​ ​ವೇದಿಕೆಯ​ ​ಕ್ಷೇತ್ರೀಯ ಸಂಘಟ​ನಾ ಕಾರ್ಯದರ್ಶಿ ಜಗದೀಶ ಕಾರಂತ ಕಳವಳ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲೆಯ ವತಿಯಿಂದ ವಿಜಯ ದಶಮಿ ಪ್ರಯುಕ್ತ ಅಂಬಲಪಾಡಿ ದೇವಸ್ಥಾನದ ಬಳಿ ನಡೆದ ದುರ್ಗಾ ದೌಡ್‌ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. ಹಿಂದೂ ಸಮಾಜ ಜಾಗೃತವಾದರೆ ಯಾವುದೇ ಜೆಹಾದ್‌​ ನಡೆಯಲು ಸಾಧ್ಯವಿಲ್ಲ​. ​ ಲವ್‌ ಜೆಹಾ​​ದ್‌ ಸಹಿತ ಲ್ಯಾಂಡ್‌, ಇಕನಾಮಿಕ್‌, ಹೆಲ್ತ್‌, ಪಾಪ್ಟುಲೇಶನ್‌ ಇತ್ಯಾದಿ ಮೂಲಕ ಜೆಹಾದ್‌ ನಡೆ ಯುತ್ತಿವೆ. 
‘ಪ್ರೀತಿ, ಪ್ರೇಮವನ್ನು ಅಸ್ವವಾಗಿ ಬಳಸಲಾಗುತ್ತಿದೆ. ನೆಲವನ್ನು ಕಸಿದುಕೊಳ್ಳುವ ಯುದ್ಧನೀತಿ ಅದಾಗಿದೆ. ಇದಕ್ಕೆಲ್ಲ ತಡೆಹಾಕುವುದು ಅನಿವಾರ್ಯ. ಧರ್ಮದ ರಕ್ಷಣೆ ಸಮಾಜದ ಸುರಕ್ಷೆಗೆ ಹಿಂದೂ ಸಮಾಜ ಎದ್ದು ನಿಲ್ಲಬೇಕು ಎಂದರು. ಸಮಾಜ ಸೇವಕ ವಿಶು. ಶೆಟ್ಟಿಅಂಬಲಪಾಡಿ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದರು.
ಒಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್‌ ರವಿರಾಜ್‌ ಶೆಟ್ಟಿ ಕಡಬ, ರಾಜ್ಯ ಪ್ರಮುಖ್‌ ಅರವಿಂದ ಕೋಟೇಶ್ವರ, ಪ್ರಾಂತ ಉಪಾಧ್ಯಕ್ಷ ಕಿಶೋರ್‌ ಕುಮಾರ್‌ ಮಂಗಳೂರು, ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ, ವಿಭಾಗ ಕಾರ್ಯದರ್ಶಿ ಚಿನ್ನಯ ಕುಮಾರ್‌ ಈಶ್ವರ ಮಂಗಲ, ಜಿಲ್ಲಾಧ್ಯಕ್ಷ ಪ್ರಶಾಂತ್‌ ನಾಯಕ್‌, ಜಿಲ್ಲಾ ಪ್ರಧಾನ ಕಾರ್ಯಜರ್ಶಿ ಮಹೇಶ್‌ ಬೈಲೂರು ಉಪಸ್ಥಿತರಿದ್ದರು. 
 ದುರ್ಗಾ ದೌಡ್‌ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಿಂದ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇಗುಲದವರೆಗೆ “ದುರ್ಗಾ ದೌಡ್‌’ ಹಿಂದೂ ಶಕ್ತಿಸಂಚಲನ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಂಧನ ಇಲಾಖೆಯ ಸಚಿವ ಸುನಿಲ್‌ ಕುಮಾರ್‌, ಶಾಸಕ ಕೆ. ರಘುಪತಿ ಭಟ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ಹೆಗ್ಡೆ ಭಾಗವಹಿಸಿದ್ದರು. 
ಹಿಂಜಾವೇ ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಕುಕ್ಕೆಹಳ್ಳಿ ಸ್ವಾಗತಿಸಿದರು. ಎನ್‌.ಆರ್‌. ದಾಮೋದರ ಶರ್ಮಾ ಬಾರ್ಕೂರು ನಿರೂಪಿಸಿದರು. ರಮೇಶ್‌ ಕಲ್ಲೊಟ್ಟೆ ವಂದಿಸಿದರು.​​


 
 
 
 
 
 
 
 
 
 
 

Leave a Reply