ಕೃಷಿಕರ ಮತ್ತು ಕೃಷಿ ಕ್ಷೇತ್ರದ ಸುಧಾರಣೆಗೆ ​ಮಹತ್ವದ ಹೆಜ್ಜೆಗೆ ಸ್ವಾಗತ–ಕುಯಿಲಾಡಿ ​

‘ಕೃಷಿಕರ ಮತ್ತು ಕೃಷಿ ಕ್ಷೇತ್ರದ ಸುಧಾರಣೆಗೆ ಭಾರತೀಯ ಜನತಾ ಪಾರ್ಟಿ ನೇತೃತ್ವದ ಮೋದಿ ಸರ್ಕಾರದ  ಮಹತ್ವದ ಹೆಜ್ಜೆಗೆ ಸ್ವಾಗತ ಹಾಗೂ ಅಭಿನಂದನೆ ‘ – ಕುಯಿಲಾಡಿ

ರೈತರ ಕಲ್ಯಾಣಕ್ಕಾಗಿ ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿಜಿಯವರ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಅದು ದೇಶದ ಕೃಷಿ ಉತ್ಪನ್ನಕ್ಕಾಗಿ ಮಾರುಕಟ್ಟೆ ಸೃಷ್ಠಿಸುವುದೇ ಇರಬಹುದು ಅಥವಾ ಕನಿಷ್ಠ ಬೆಂಬಲ ದರ ಹೆಚ್ಚಿಸುವುದೇ ಇರಬಹುದು. ಕೊರೋನಾ ಬಿಕ್ಕಟ್ಟಿನ ವೇಳೆಯೂ ರೈತರ ಪರವಾಗಿ ಸರ್ಕಾರ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಗುರುವಾರ ಲೋಕಸಭೆಯಲ್ಲಿ ಮತ್ತು ಭಾನುವಾರ ರಾಜ್ಯಸಭೆಯಲ್ಲಿ ರೈತರ ಕುರಿತಾದ ಎರಡು ಮಸೂದೆಗಳಿಗೆೆ ಅನುಮೋದನೆ ದೊರೆತಿದೆ.

ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ:
• ಈ ನೂತನ ಮಸೂದೆ ಅನ್ವಯ ರೈತರಿಗೆ ಹಾಗೂ ವ್ಯಾಪಾರಿಗಳಿಗೆ ತಮಗಿಷ್ಟ ಬಂದ ಕಡೆ ಕೃಷಿ ಉತ್ಪನ್ನ ಮಾರಾಟ       ಹಾಗೂ ಖರೀದಿ ಮಾಡುವ ಸ್ವಾತಂತ್ರ್ಯವನ್ನು ನೀಡಲಾಗಿದೆ.
• ಪರ್ಯಾಯ ವ್ಯಾಪಾರ ವ್ಯವಸ್ಥೆ ಮೂಲಕ ಬೆಳೆಗಳ ನ್ಯಾಯಯುತ ದರ ನಿಗದಿಪಡಿಸಲು ನೆರವು ನೀಡಲಾಗಿದೆ.
• ಕೃಷಿ ಉತ್ಪನ್ನಗಳ ಪಾರದರ್ಶಕ, ತಡೆರಹಿತ ಅಂತರರಾಜ್ಯ ಹಾಗೂ ರಾಜ್ಯದೊಳಗಿನ ವ್ಯಾಪಾರಕ್ಕೆ ಉತ್ತೇಜನ           ನೀಡಲಾಗಿದೆ.
• ಉತ್ಪನ್ನದ ಅನ್‌ಲೈನ್ ವ್ಯಾಪಾರಕ್ಕೆ (ಇ-ಟ್ರೇಡಿಂಗ್) ಒತ್ತು ನೀಡಲು ಕಾನೂನಾತ್ಮಕ ಚೌಕಟ್ಟನ್ನು ಅಳವಡಿಸಲಾಗಿದೆ.
​  ​ರೈತರ (ಕಲ್ಯಾಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆ:
• ಈ ಮಸೂದೆ ಮೂಲಕ ಕೃಷಿ ಉದ್ಯಮ ಸಂಸ್ಥೆಗಳು, ಸಗಟು ವ್ಯಾಪಾರಿಗಳು, ರಪ್ತುದಾರರು​ ​, ಚಿಲ್ಲರೆ ವ್ಯಾಪಾರಿ ಗಳೊಂದಿಗೆ ವಹಿವಾಟು ನಡೆಸಲು ರೈತರಿಗೆ ಭದ್ರತೆ ಹಾಗೂ ಪ್ರೋತ್ಸಾಹ ನೀಡುವ ಕೃಷಿ ಒಪ್ಪಂದಗಳ ಕುರಿತು ​ರಾಷ್ಟ್ರೀಯ ಚೌಕಟ್ಟು ನಿರ್ಮಿಸುವ ಧ್ಯೇಯವನ್ನು ಹೊಂದಿದೆ.
• ನ್ಯಾಯಯುತ ದರ ಚೌಕಟ್ಟಿನೊಳಗೆ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಕೃಷಿ ಸೇವೆಗಳನ್ನು ಒದಗಿಸುವ ಗುರಿ ಹೊಂದಿದೆ.
ಮಸೂದೆ​ಯಿಂದ  ರೈತರಿಗೇನು ಲಾಭ:
• ಎರಡು ಮಸೂದೆಗಳು ದೇಶದ ಕೃಷಿ ವಲಯದಲ್ಲಿ ಕ್ರಾಂತಿ ತರಲಿವೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ. ಜೊತೆಗೆ ಕನಿಷ್ಠ ಬೆಂಬಲ ದರ ವ್ಯವಸ್ಥೆಯು ಮುಂದೆಯೂ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
• ಕೃಷಿ ವಲಯದಿಂದ ದೇಶಕ್ಕಿರುವ ನಿರೀಕ್ಷೆ ಹಾಗೂ ಅಗತ್ಯತೆ ಎರಡನ್ನೂ ಹೊಸ ಮಸೂದೆಗಳು ಪೂರೈಸಲಿವೆ.
• ಮಸೂದೆಯಿಂದ ಉತ್ತಮ ಬೆಳೆ ಬೆಳೆಯುವತ್ತ ರೈತನು ಪ್ರೇರಿತನಾಗುತ್ತಾನೆ. ಒಮ್ಮೆ ಹೆಚ್ಚುವರಿ ಇಳುವರಿ ಪಡೆದರೆ, ರೈತನ ಆದಾಯವೂ ಸಹಜವಾಗಿ ಹೆಚ್ಚುತ್ತದೆ.
• ವಿವಿಧ ರಾಜ್ಯಗಳ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಗಳ (ಎಪಿಎಂಸಿ ಕಾಯ್ದೆ) ಅನ್ವಯ ನೋಂದಣಿ ಮಾಡಿಕೊಂಡಿರುವ ಮಾರುಕಟ್ಟೆಗಳಿಗೆ ಹೊರತಾಗಿಯೂ ರೈತರು ಉತ್ಪನ್ನಗಳನ್ನು ಮಾರಾಟ ಮಾಡುವ ಸೌಲಭ್ಯ ನೀಡಲಾಗಿದೆ.
ಕೃಷಿ ರಫ್ತಿಗೂ ಮಸೂದೆ ಒತ್ತು: ದೇಶದ ಶೇ.86ರಷ್ಟು ಸಣ್ಣ ವರ್ಗದ ರೈತರಿದ್ದಾರೆ. ಒಮ್ಮೆ ಇವರಿಗೆ ಯಾವುದೇ ಕಾಯ್ದೆಯ ಮೂಲಕ ತಾವು ಬೆಳೆದ ಬೆಳೆಯ ನ್ಯಾಯಯುತ ದರದ ಬಗ್ಗೆ ಮುಂಚಿತವಾಗಿ ಮಾಹಿತಿ ದೊರೆತರೆ ಲಾಭದ ​ ​ಕೃಷಿಯಲ್ಲಿ ತೊಡಗಿಸಿಕೊಳ್ಳಲು ಅನುಕೂಲ.
• ಅಧುನಿಕ ತಂತ್ರಜ್ಞಾನ ಬಳಸಿ ಬೆಳೆ ಬೆಳೆಯಲು ಮಸೂದೆ ಸಹಕಾರಿ. ಅಲ್ಲದೆ ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ ದೊಡ್ಡ ವ್ಯಾಪಾರಿಗಳು ಹಾಗೂ ರಫುö್ತದಾರರನ್ನು ತಲುಪಲು ರೈತರಿಗೆ ಈ ಮಸೂದೆ ನೆರವಾಗಲಿದೆ.
• ಕೃಷಿ ವಲಯದಲ್ಲಿ ಸ್ವಾತಂತ್ರ್ಯ ತರುವಲ್ಲಿ, ಕೃಷಿ ವಲಯದ ಮೂಲ ಸೌಕರ್ಯ ಅಭಿವೃದ್ಧಿಗೆ, ಹೂಡಿಕೆ ಸೆಳೆಯುವಲ್ಲಿ ಮಸೂದೆ ಪರಿಣಾಮಕಾರಿ ಆಗಲಿದೆ.

ಈ ಮೂರು ಕಾನೂನುಗಳಿಗೆ ತಿದ್ದುಪಡಿಯನ್ನು ಸುಗ್ರೀವಾಜ್ಞೆಯ ಮೂಲಕ ಈ ಹಿಂದೆ 5 ಜೂನ್ 2020ರಂದು ಮಾಡಲಾಗಿದ್ದು ಈಗ ಎರಡೂ ಸದನಗಳ ಒಪ್ಪಿಗೆ ದೊರೆತಿರುವ ಸಂದರ್ಭದಲ್ಲಿ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ನೀತಿ ನಿಯಮಗಳಿಗೆ ವಿರುದ್ಧವಾಗಿ ಕಾನೂನನ್ನು ಕೈಗೆತ್ತಿಕೊಂಡು ಕೋಲಾಹಲ ಸೃಷ್ಟಿಸಿರು ವುದನ್ನು ಭಾರತೀಯ ಜನತಾ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ.

ಈ ಹಿಂದಿನ ಕಾನೂನುಗಳು ಇದ್ದಾಗಲು ರೈತರ ಶೋಷಣೆ ನಡೆಯುತ್ತಿದ್ದು ಅವರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ಮಧ್ಯವರ್ತಿಗಳಿಂದ ಶೋಷಣೆಗೆ ಒಳಗಾಗುತ್ತಿದ್ದರು. ಈ ತಿದ್ದುಪಡಿಗಳಿಗೆ ವಿರೋಧ ವ್ಯಕ್ತ ಪಡಿಸುತ್ತಿರುವ ಎಲ್ಲಾ ಪ್ರಮುಖ ಪಕ್ಷಗಳು ತಮ್ಮ ಚುನಾವಣೆಯ ಪ್ರಣಾಳಿಕೆಯಲ್ಲಿ ಕೃಷಿ ಮಾರುಕಟ್ಟೆ ಸುಧಾರಣೆಯನ್ನು ಒಂದು ಪ್ರಮುಖ ಅಂಶ ವಾಗಿ ಉಲ್ಲೇಖಿಸಿದ್ದರೂ ಕೇವಲ ರಾಜಕೀಯ ಕಾರಣಗಳಿಗಾಗಿ ಗೊಂದಲ ಸೃಷ್ಟಿಸುತ್ತೆವೆ. ಅಲ್ಲದೆ ಗಲಭೆ ಉಂಟು ಮಾಡುತ್ತಿ ರುವುದು ಸರ್ವತಾ ಖಂಡನೀಯ ಮತ್ತು ರಾಜಕೀಯವಾಗಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ಹತಾಶ ರಾಗಿರುವ ಸಂಕೇತ.

​ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ರೈತರಿಗೆ ತಮ್ಮ ಉತ್ಪನ್ನಗಳನ್ನು ಯಾವುದೇ ಮದ್ಯವರ್ತಿಗಳ ಹಾವಳಿಯಿಲ್ಲದೆ ದೇಶದ ಯಾವುದೇ ಭಾಗದಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಬಹುದಾಗಿದೆ. ಕನಿಷ್ಠ ಬೆಂಬಲ ಬೆಲೆ ಮುಂದುವರಿ ಯಲಿದ್ದು ರೈತರ ಆಹಾರ ತಯಾರಿಕಾ ಕೈಗಾರಿಕೆಗಳೊಂದಿಗೆ ನೇರ ಒಪ್ಪಂದ ಮಾಡಿ ತಮ್ಮ ಇಚ್ಚಿತ ಬೆಲೆಯನ್ನು ಪಡೆಯಬಹುದಾಗಿದೆ.

ಬೆಳೆ ಖರೀದಿಸುವ ಬಂಡವಾಳಿಶಾಹಿಗಳು ಅಗತ್ಯವಿರುವ ಯಂತ್ರೋಪಕರಣಗಳನ್ನು ರೈತರಿಗೆ ಒದಗಿಸಬೇಕು. ರೈತರಿಗೆ ಸೂಕ್ತ ತಾಂತ್ರಿಕ ಸಲಹೆ, ಬೆಳೆ ನಾಶವಾದಲ್ಲಿ ಪೂರ್ಣ, ಭಾಗಶಃ ನಷ್ಟ ಭರಿಸುವ ಜವಾಬ್ದಾರಿಯು ಬಂಡವಾಳಶಾಹಿಗಳ ಮೇಲೆ ಇರುತ್ತದೆ. ಎ.ಪಿ.ಎಂ.ಸಿ ಯಲ್ಲದೇ ಬೇರೆ ಕಡೆ ರೈತರ ವ್ಯಾಪಾರಕ್ಕೂ ಈ ಕಾಯಿದೆಯಿಂದ ರಕ್ಷಣೆ ಸಿಗುವುದಲ್ಲದೆ ರೈತರ ಉತ್ಪನ್ನಗಳಿಗೆ ನಿಶ್ಚಿತ ಲಾಭ ಸಿಗಲು ಕೇಂದ್ರ ಸರಕಾರ ಈ ರೈತ ಪರ ಕಾಯಿದೆ ಜಾರಿಗೆ ತಂದಿದೆ.

ರೈತರಿಗೆ ಮೋಸವೆಸಗುತ್ತಿದ್ದ ಮಧ್ಯವರ್ತಿಗಳು, ಖರೀದಿದಾರರ ಪರವಾಗಿದ್ದ ಪಕ್ಷಗಳು ಈ ರೈತ ಪರ ಕಾಯಿದೆಯನ್ನು ವಿರೋಧಿಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply