ಸಹಕಾರಿ ಬ್ಯಾಂಕ್ ಗಳು ಇನ್ನು ಆರ್ ಬಿಐ ನ ಸುಪರ್ದಿಗೆ

ನೂತನ ಬ್ಯಾಂಕಿಂಗ್ ನಿಯಂತ್ರಣ ಮಸೂದೆಗೆ ಸಂಸತ್ ಅಂಗೀಕಾರ

ಹೊಸದಿಲ್ಲಿ: ಆರ್ ಬಿಐ ಐ ನ ಸುಪರ್ದಿಗೆ ಸಹಕಾರಿ ಬ್ಯಾಂಕ್ ಗಳನ್ನು ತರಲು ಹಾಗೂ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯನ್ನು ತಿದ್ದುಪಡಿ ಮಾಡಲು ಸಂಸತ್ತು ಮಂಗಳವಾರ ಅನುಮೋದನೆ ನೀಡಿದೆ. ಈಗಾಗಲೇ ಜೂನ್ 26ರಂದು ಹೊರಡಿಸಲಾಗಿದ್ದ ಸುಗ್ರೀವಾಜ್ಞೆಯ ಮೇರೆಗೆ ಬ್ಯಾಂಕಿಂಗ್ ನಿಯಂತ್ರಣ ತಿದ್ದುಪಡಿ ಮಸೂದೆ 2020 ಅನ್ನು ಇಂದು ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ಪಿ.ಎಂ.ಸಿ ಬ್ಯಾಂಕ್ ಹಗರಣದ ಕಾರಣಕ್ಕೆ ಈ ಕಾಯ್ದೆಯನ್ನು ರೂಪಿಸಲಾಗಿದ್ದೂ ಬಂಡವಾಳಕ್ಕೆ ಅವಕಾಶ ಒದಗಿಸಲು , ಆಡಳಿತ ಸುಧಾರಣೆ ಹಾಗೂ ಆರ್ ಬಿಐ ಮೂಲಕ ಸದೃಢ ಬ್ಯಾಂಕಿಂಗ್ ವ್ಯವಸ್ಥೆಯನ್ನು ಖಾತ್ರಿ ಗೊಳಿಸುವ ನಿಟ್ಟಿನಲ್ಲಿ ಸಹಕಾರಿ ಬ್ಯಾಂಕ್ ಗಳನ್ನು ಬಲಪಡಿಸುತ್ತದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ರಾಜ್ಯಸಭೆಯಲ್ಲಿ ಈ ನೂತನ ಯೋಜನೆಯ ಕುರಿತ ಸಂಕ್ಷಿಪ್ತ ಚರ್ಚೆಯಲ್ಲಿ ಹೀಗೆ ಉತ್ತರಿಸಿದರು.ಈ ತಿದ್ದುಪಡಿಯು ಬ್ಯಾಂಕಿಂಗ್ ಚಟುವಟಿಕೆಗಳಲ್ಲಿ ತೊಡಗಿರುವ ಸಹಕಾರಿ ಸಂಘಗಳಿಗೆ ಮಾತ್ರ ಎಂದು ಸ್ಪಷ್ಟಪಡಿಸಿದ್ದು, ಠೇವಣಿದಾರನ ಹಿತಾಸಕ್ತಿಯನ್ನು ಸಂಪೂರ್ಣವಾಗಿ ರಕ್ಷಿಸಲು ಈ ಹೊಸ ತಿದ್ದುಪಡಿಗಳನ್ನು ತರಲಾಗಿದೆ ಎಂದಿದ್ದಾರೆ.

Leave a Reply