ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಎರಡು ಲಲಿತ ಸಹಸ್ರ ಕದಳಿಯಾಗ ಸಂಪನ್ನ

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಲಲಿತ ಪಂಚಮಿಯ ಪರ್ವಕಾಲದಲ್ಲಿ 2ಲಲಿತ ಸಹಸ್ರ ಕದಳೀಯಾಗ ಸಂಪನ್ನ ಗೊಂಡಿತು ಬಹು ಅಪರೂಪ ವು ಬಹು ಫಲಪ್ರದವೂ ಆದ ಈ ಯಾಗವು ಗೋವಿಂದ ಉಪಾಧ್ಯಾಯ ಮತ್ತು ಶಾರದಾ ಉಪಾಧ್ಯಾಯ ದಂಪತಿಗಳು ಬಾಪ್ತು ಹಾಗೂ ಮತ್ತೊಂದು ಯಾಗ ಸುರೇಖಾ ಭಟ್ ಮತ್ತು ಮನೆಯವರ ಬಾಪ್ತು ಸೇವಾ ರೂಪದಲ್ಲಿ ಸಮರ್ಪಿತಗೊಂಡಿತು .

ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರವಾದ ಮೇರು ಶ್ರೀ ಚಕ್ರವನ್ನು ಹೊಂದಿ ಶ್ರೀಚಕ್ರ ಪೀಠ ಸುರಪೂಜಿತೆ ಎನಿಸಿದ ಶ್ರೀ ದುರ್ಗಾ ಆದಿಶಕ್ತಿ ದೇವಿಯ ಸನ್ನಿಧಾನದಲ್ಲಿ ಮಾತೆ ರಾಜರಾಜೇಶ್ವರಿಯ ವಿಶೇಷ ಅನುಗ್ರಹಕ್ಕಾಗಿ
ಸಹಸ್ರ ಸಹಸ್ರ ಸಂಖ್ಯೆಯ ಕದಳಿಹಣ್ಣನ್ನು ತ್ರಿಮದುರಯುಕ್ತವಾಗಿ ಹೋಮಿಸಿ ವಿಧವಿಧದ ಕುಸುಮಗಳಿಂದ ಸಹಸ್ರನಾಮರ್ಚನೆಯಿಂದ ಅರ್ಜಿಸಿ ಲಲಿತಾ ಸಹಸ್ರನಾಮವನ್ನು ಸ್ತುತಿಸಿ ವಿಶೇಷವಾಗಿ ಹೋಮಿಸಿ ಪೂಜೆ ನಡೆಸಲಾಯಿತು.
ಈಹದಲ್ಲಿ ಭೋಗ ಪರದಲ್ಲಿ ಮೋಕ್ಷ ಎರಡನ್ನು ಕರುಣಿಸುವಂತಹ ಈ ಮಹಾನ್ ಯಾಗ ಕ್ಷೇತ್ರದ ಧರ್ಮದ ಶ್ರೀ ಶ್ರೀಯುತ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ
ಸಂಪನ್ನ ಗೊ೦ಡಿತು. ಯಾಗದ ಅಂಗವಾಗಿ ಬ್ರಾಹ್ಮಣ ಸುಹಾಸಿನಿ ಕನ್ನಿಕರಾದನೆ ನೆರವೇರಿತು.

 
 
 
 
 
 
 
 
 
 
 

Leave a Reply