ಸುಗ್ಗಿ ಸುಧಾಕರ ಶೆಟ್ಟಿ ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ.

ಇಂಟರ್ ನ್ಯಾಷನಲ್ ಕೌನ್ಸಿಲ್ ಏಷ್ಯಾ ವೇದಿಕ್ ಕಲ್ಚರಲ್ ಫೌಂಡೇಶನ್ ವತಿಯಿಂದ ಇಂದು ತಮಿಳನಾಡಿನ ಹೊಸೂರ್ ನಗರದಲ್ಲಿ ನಡೆದ ಏಷ್ಯಾ ವೇದಿಕ್ ಕಲ್ಚರಲ್ ರಿಚರ್ಸ್ ವಿಶ್ವವಿದ್ಯಾಲಯದ ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಕರ್ಜೆ ಸುಗ್ಗಿ ಸುಧಾಕರ ಶೆಟ್ಟಿ ಅವರಿಗೆ ಸಮಾಜ ಸೇವಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು. ಸಿ.ಮಾರ್ಗರೇಟ್ ಅಮೂಲ್ ಹೈಕೋರ್ಟ್ ನ್ಯಾಯ ವಾದಿಗಳು ಮತ್ತು ಏಷ್ಯಾ ವೇದಿಕೆ ಅಕಾಡೆಮಿಯ ಸಂಸ್ಥಾಪಕರು ಹಾಗೂ ತಮಿಳುನಾಡಿನ ಮಾಜಿ ಶಾಸಕರಾದ ಡಾ. ಕೆ. ಎ. ಮನೋಹರನ್ ಇವರಿಂದ ಶನಿವಾರ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು.

ಸುಗ್ಗಿ ಸುಧಾಕರ ಶೆಟ್ಟಿಯವರು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಲುವಳ್ಳಿ ಎಂಬಾ ಕುಗ್ರಾಮದಲ್ಲಿ ಅಕ್ಟೋಬರ್ 16 1966 ಜನಿಸಿದರು.ಅವರದು ಬಡ ಕುಟುಂಬ ತಂದೆ ಕೃಷ್ಣಯ್ಯ ಶೆಟ್ಟಿ ,ತಾಯಿ ಗಿರಿಜ ಶೆಡ್ತಿ.ಇವರದ್ದು ಕೃಷಿ ಕುಟುಂಬ. ಕೃಷಿಯೇ ಇವರ ಜೀವನಾಧಾರವಾಗಿತ್ತು.ಸುಧಾಕರ ಶೆಟ್ಟಿಯವರು ಪ್ರಾಥಮಿಕ ಶಾಲೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲುವಳ್ಳಿಯಲ್ಲಿ ಮುಗಿಸಿ,8 ನೇ ತರಗತಿಯನ್ನು ಶಾರದ ಹೈಸ್ಕೂಲ್ ಮುಂಡ್ಕಿನಜೆಡ್ಡಿನಲ್ಲಿ ಮಾಡಿದರು ಬಡತನದಿಂದ ವಿಧ್ಯಾಭ್ಯಾಸವನ್ನು ಮುಂದುವರಿಸಲಾಗದೆ ಶಾಲೆಯನ್ನು ಅರ್ಧಕ್ಕೆ ಬಿಟ್ಟು ಉದ್ಯೋಗ ಹುಡುಕಿಕೊಂಡು ಹೋಗಿದ್ದು ಬೆಳಗಾವಿಗೆ. ಹೋಟೆಲ್ ಮೂಲಕವೇ ವೃತ್ತಿ ಜೀವನ ಪ್ರಾರಂಭಿಸಿದರು.

ಸುಮಾರು ವರ್ಷಗಳ ಕಾಲ ಅದೇ ಹೊಟೇಲ್ ನಲ್ಲಿ ಉದ್ಯೋಗ ಮಾಡಿ ನಂತರ ಹುಬ್ಬಳ್ಳಿಯಲ್ಲಿ ಶ್ರೀ ಹೊಟೇಲ್ ಪ್ರಾರಂಭಿಸಿದರು. ಹುಬ್ಬಳ್ಳಿ ಭಾಗದಲ್ಲಿ ಹೊಟೇಲ್ ನಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿ, ರೇಣುಕಾ, ಸುಗ್ಗಿ ಹೀಗೆ ಹೊಟೇಲ್ ಗಳ ಸಂಖ್ಯೆ ಜಾಸ್ತಿಯಾಗಲು ಶುರುವಾಗಿತ್ತು. ಸುಗ್ಗಿ ಹೊಟೇಲ್ ಮೂಲಕ ಸುಗ್ಗಿ ಸುಧಾಕರ ಶೆಟ್ಟಿಯವರ ಹೆಸರು ಹುಬ್ಬಳ್ಳಿ ಧಾರವಾಡಗಳಲ್ಲಿ ಜನಮನ್ನಣೆಗೆ ಬರಲು ಶುರುವಾಗಿತು.ಹುಬ್ಬಳ್ಳಿ ಧಾರವಾಡದಲ್ಲಿ ಉದ್ಯೋಗ ಹುಡುಕಿಕೊಂಡು ಬರುವ ನೂರಾರು ಜನರಿಗೆ ತಮ್ಮ ಹೊಟೇಲ್ ನಲ್ಲಿ ಉದ್ಯೋಗ ನೀಡಿದರು.

ಅದೆಷ್ಟು ಹೊಟೇಲ್ ಮಾಲೀಕರಿಗೆ, ಕಾರ್ಮಿಕರಿಗೆ ಸಮಸ್ಯೆ ಬಂದಾಗ ಮುಂದೆ ಹೋಗಿ ಅವರ ಕಷ್ಟ ಕಾರ್ಪಣ್ಯಗಳಿಗೆ ನೆರವಾಗುತ್ತಿದ್ದರು. ದಿನಗಳು ಕಳೆದಂತೆ ಸುಗ್ಗಿ ಸುಧಾಕರ ಶೆಟ್ಟಿಯವರು ಯಶಸ್ವಿಯಾಗಿ ಉದ್ಯಮಿಯಾಗಿ,ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನ ಸೇವಕರಾದರು.ತಾವು ದುಡಿದ ಬಹುಪಾಲು ಹಣವನ್ನು ಸಮಾಜಕ್ಕೆ ವಿನಿಯೋಗಿಸಿದರು.

ಸುಗ್ಗಿ ಸುಧಾಕರ ಶೆಟ್ಟಿಯವರ ಅದೆಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ.ಆಯ್ದ ಕೆಲವೊಂದು ಕೆಲಸ ಕಾರ್ಯಗಳು

1.ತನ್ನ ಹುಟ್ಟೂರು ಕರ್ಜೆಯಲ್ಲಿ ಪಾಳು ಬಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ಸುಮಾರು ಎರಡುವರೆ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿ ಜೀರ್ಣೋದ್ಧಾರಗೊಳಿಸಿದರು.ಧಾರ್ಮಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು. ಕರ್ಜೆ ಅಲ್ಲದೇ ನೂರಾರು ದೇವಾಲಯಗಳ ಜೀರ್ಣೋದ್ಧಾರಕ್ಕೆ,ಅನ್ನ ಸಂತರ್ಪಣೆಗೆ ಲಕ್ಷಾಂತರ ರೂಪಾಯಿ ದೇಣಿಗೆಯನ್ನು ನೀಡಿದರು.ಎಂದೂ ಕೂಡ ಪ್ರಚಾರದ ಹಿಂದೆ ಹೋದವರಲ್ಲ,ಪ್ರೇರಣೆಗಾಗಿ ದಾನವನ್ನು ಮಾಡಿದರು,ಅಮೃತ ಶಿಲೆಯ ಕೆತ್ತನೆಗಾಗಿ ದಾನ ಧರ್ಮವನ್ನು ಮಾಡಿದವರಲ್ಲ.2.ಕರ್ಜೆ ಪರಿಸರದಲ್ಲಿ ವಿದ್ಯಾರ್ಥಿಗಳ ಶಿಕ್ಷಣದ ಮಹತ್ವವನ್ನು ಅರಿತು ಕರ್ಜೆಗೆ ಸರಕಾರಿ ಕಾಲೇಜ್ ಅನ್ನು ತರುವಲ್ಲಿ ಕಾರಣಿಭೂತರು

3.ಕರ್ಜೆ ಸರಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಸುಂದರವಾದ ಕ್ರೀಡಾಂಗಣ ನಿರ್ಮಾಣದ ಕಾರಣಿಕರ್ತರು.

4.ಕರೋನಾ ಲಾಕ್ ಡೌನ್ ಸಮಯದಲ್ಲಿ ಒಂದು ಕೋಟಿ ಖರ್ಚು ಮಾಡಿ ತಿಂಗಳ ಕಾಲ ಸ್ವತಃ ತಾನೇ ಮುಂಚೂಣೆಯಲ್ಲಿ ನಿಂತು ಸಾವಿರಾರು ಜನರಿಗೆ ಕಿಟ್ ಗಳನ್ನು ನೀಡಿದರು

5.ಕರೋನಾ ಸಮಯದಲ್ಲಿ ದೂರದ ಬೆಂಗಳೂರು, ಹುಬ್ಬಳ್ಳಿ ಧಾರವಾಡ ಗಳಲ್ಲಿ ಉದ್ಯೋಗ ಮಾಡಿಕೊಂಡವರಿಗೆ ಉಚಿತ ಬಸ್ ವ್ಯವಸ್ಥೆಯನ್ನು ಮಾಡಿದರು.

6. ನೆರೆ ಪ್ರವಾಹ ಸಮಯದಲ್ಲಿ ನೂರಾರು ಜನರಿಗೆ ದಿನ ಬಳಕೆಯ ದಿನಸಿ ಸಾಮಾನುಗಳನ್ನು ನೀಡಿ ಮಾನವಿಯತೆ ಮರೆದರು

7.ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಬಡ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ಸಹಾಯವನ್ನು ಮಾಡಿದರು

8. ಸಂಘ ಸಂಸ್ಥೆಗಳ ಕಾರ್ಯಕ್ರಮ, ಕಂಬಳ,ಕ್ರೀಡೆ,ಯಕ್ಷಗಾನ, ಹೀಗೆ ಎಲ್ಲಾ ಸಾಮಾಜಿಕ ,ಶೈಕ್ಷಣಿಕ ಕಾರ್ಯಕ್ರಮಗಳಿಗೆ ನೆರವುವನ್ನು ನೀಡಿದ್ದಾರೆ

9.ಎಲ್ಲಾ ಸಮಾಜ ಬಂಧವರ ಸಭಾ ಭವನ ನಿರ್ಮಾಣಕ್ಕೆ ಧನ ಸಹಾಯವನ್ನು ನೀಡಿದವರು

10.ದಿವ್ಯಾಂಗ ವಿಕಲಚೇತನ ಮಕ್ಕಳಿಗೆ ನೆಡೆದಾಡಲು ಉಚಿತ ತ್ರಿಚಕ್ರ ವಾಹನವನ್ನು ನೀಡಿದರು

ಹೀಗೆ ಸಾಕಷ್ಟು ಸಮಾಜಮುಖಿ ಸೇವೆಯನ್ನು ಮಾಡುತ್ತ ಜನಮನ್ನಣೆಗೆ ಗಳಿಸಿದರು.ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಪ್ರಸುತ್ತ ಪ್ರತಿಷ್ಠಿತ ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಹಲವಾರು ಸಂಘ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ  ನೂರಾರು ಸನ್ಮಾನ, ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಸಮಾಜ ಸೇವೆಯೇ ಜನಾರ್ದನ ಸೇವೆಯನ್ನು ನಂಬಿ ಬದುಕಿದವರು, ಸೌಮ್ಯ ಸ್ವಭಾವದ, ಸರಳ ವ್ಯಕ್ತಿತ್ವದ ವ್ಯಕ್ತಿ, ಎಲ್ಲಾರನ್ನು ಸಮಾನ ಭಾವದಿಂದ ನೋಡುವ ಮನಸ್ಸು, ಬಡವ ಶ್ರೀಮಂತ ಎಂಬಾ ಭೇಧ ಭಾವವಿಲ್ಲದೇ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ ವ್ಯಕ್ತಿತ್ವ, ಯಾವುದೇ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಳ್ಳದೇ, ರಾಜಕೀಯೇತರ ಕೆಲಸಗಳಲ್ಲಿ ಗುರುತಿಕೊಂಡು ಒಬ್ಬ ಯಶಸ್ವಿ ಉದ್ಯಮಿಯಾಗಿ, ನಿಸ್ವಾರ್ಥ ಸಮಾಜಸೇವಕರಾಗಿ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅಪರೂಪದ ವ್ಯಕ್ತಿ ಸುಗ್ಗಿ ಸುಧಾಕರ ಶೆಟ್ಟಿಯವರು

 
 
 
 
 
 
 
 
 
 
 

Leave a Reply