ನಿಟ್ಟೂರು : ಬಸ್-ಬೈಕ್ ಡಿಕ್ಕಿ; ಸವಾರ ಸಾವು!

ಉಡುಪಿ : ಬೈಕ್ ಮತ್ತು ಬಸ್ ನಡುವೆ ಭೀಕರ ಅಪಘಾತ ನಡೆದಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಿಟ್ಟೂರು ಪೆಟ್ರೋಲ್ ಬಂಕ್ ಎದುರು 20/04/2024 ರಂದು ಸಂಜೆ ಸಂಭವಿಸಿದೆ. 

ಮೃತ ವ್ಯಕ್ತಿಯನ್ನು ಬಾದಾಮಿ ಮೂಲದ ಬಸಪ್ಪ(45) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಅಜಾಗರೂಕತೆಯಿಂದ ಬೈಕನ್ನು ನಡು ರಸ್ತೆಯಲ್ಲಿ ಚಲಾಯಿಸಿದ್ದು, ಈ ಸಂದರ್ಭದಲ್ಲಿ ಬೈಕಿನ ಹ್ಯಾಂಡಲ್ ಬಲಬದಿಯಲ್ಲಿ ಸಾಗುತ್ತಿದ್ದ ಬಸ್ಸಿಗೆ ತಾಗಿದ್ದು ನಿಯಂತ್ರಣ ಕಳೆದುಕೊಂಡು ಬೈಕಿನಿಂದ ಬಿದ್ದ ಪರಿಣಾಮ ಬಸ್ಸಿನ ಹಿಂಬದಿ ಚಕ್ರ ಸವಾರನ ಮೇಲೆ ಚಲಿಸಿದ್ದರಿಂದ ಗಂಭೀರ ಗಾಯಗೊಂಡ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಡುಪಿ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.

 
 
 
 
 
 
 
 
 
 
 

Leave a Reply