ಕುಕ್ಕೆ: ಕೆಎಸ್ಆರ್ಟಿ‌ಸಿ ಬಸ್ ಮೇಲೆ‌ ಕಾಡಾನೆ ದಾಳಿ!

ಪುತ್ತೂರಿನಿಂದ ಬೆಂಗಳೂರು ತೆರಳುತ್ತಿದ್ದ ಕೆಎಸ್ಆರ್ಟಿ‌ಸಿ ಬಸ್ ಮೇಲೆ‌ ಕುಕ್ಕೆ ಸುಬ್ರಹ್ಮಣ್ಯ ಬಳಿ ತಡರಾತ್ರಿ ಕಾಡಾನೆ ದಾಳಿ ನಡೆಸಿದ್ದು ಕೆಲಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.‌  

ಪುತ್ತೂರಿನಿಂದ ಕಾಣಿಯೂರು- ಸುಬ್ರಹ್ಮಣ್ಯ – ಗುಂಡ್ಯ ಮೂಲಕ ಬೆಂಗಳೂರು ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್ಸಿಗೆ ಕಾಡಾನೆ ಅಡ್ಡ ಸಿಕ್ಕಿದೆ. ಸುಬ್ರಹ್ಮಣ್ಯ ಬಳಿಯ ಕೆಂಜಾಳ ಸಮೀಪದ ಅನಿಲ ಎಂಬಲ್ಲಿ ರಸ್ತೆ ಮಧ್ಯೆ ನಿಂತಿದ್ದ ಆನೆಯನ್ನು ನೋಡಿ ಬಸ್ಸಿನ ಚಾಲಕ ತಪ್ಪಿಸಲು ಯತ್ನ ಮಾಡಿದ್ದಾರೆ. ಈ ವೇಳೆ, ಕಾಡಾನೆ ಬಸ್ಸಿನ ಎಡಬದಿಗೆ ದಂತ ಮತ್ತು ಸೊಂಡಿಲಿನಿಂದ ತಿವಿದು ಹಾನಿಗೊಳಿಸಿದೆ, ಕೂಡಲೇ ಬಸ್ ಮುಂದಕ್ಕೆ ಚಲಿಸಿದ್ದು ಅಪಾಯದಿಂದ ಪಾರಾಗಿದೆ. ಆತಂಕಗೊಂಡಿದ್ದ ಪ್ರಯಾಣಿಕರು ಅಪಾಯದಿಂದ ಪಾರಾದ ಬಗ್ಗೆ ನಿಟ್ಟುಸಿರು ಬಿಟ್ಟಿದ್ದಾರೆ.

ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪಾರಾಗಿದ್ದು, ದುರಂತ ತಪ್ಪಿದೆ ಎನ್ನುವ ಮಾತು ಕೇಳಿಬಂದಿದೆ. ಕೂಡಲೇ ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಬಸ್ಸಿಗೆ ದೊಡ್ಡ ಮಟ್ಟದ ಹಾನಿಯಾಗಿಲ್ಲವೆಂದು ಕಂಡುಬಂದಿದ್ದರಿಂದ ನಸುಕಿನ ವೇಳೆಗೆ ಬಸ್ ಬೆಂಗಳೂರಿನತ್ತ ತೆರಳಿದೆ

 
 
 
 
 
 
 
 
 

Leave a Reply