ಹೊಳೆಹೊನ್ನೂರಲ್ಲಿ ಉತ್ತರಾದಿ ಮಠಾಧೀಶರ ಚಾತುರ್ಮಾಸ್ಯ

ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀಮದುತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ತಮ್ಮ 28ನೇ ಚಾತುರ್ಮಾಸ್ಯ ವ್ರತವನ್ನು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಕ್ಷೇತ್ರದಲ್ಲಿ ಕೈಗೊಳ್ಳಲಿದ್ದಾರೆ. 
ಈ ಹಿನ್ನೆಲೆಯಲ್ಲಿ ಶ್ರೀಪಾದಂಗಳವರು ಜು.11ರ ಮಂಗಳವಾರ ಸಂಜೆ 5 ಗಂಟೆಗೆ ಹೊಳೆಹೊನ್ನೂರು ಪುರಪ್ರವೇಶ ಮಾಡಲಿದ್ದಾರೆ. ಹೊಳೆಹೊನ್ನೂರು ಸರ್ಕಲ್‌ನಿಂದ ಶ್ರೀಮನ್ ಮೂಲಸೀತಾ ರಾಮಚಂದ್ರ ದೇವರು ಹಾಗೂ ಶ್ರೀಗಳನ್ನು ಪೂರ್ಣಕುಂಭದೊoದಿಗೆ ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಗುವುದು. ಬಳಿಕ ಶ್ರೀಪಾದರು ಬೃಂದಾವನದಲ್ಲಿ ಸನ್ನಿಹಿತರಾಗಿರುವ ತಮ್ಮ ಪರಂಪರೆಯ ಪೂರ್ವಗುರುಗಳಾದ ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದಂಗಳವರ ಮೂಲ ಬೃಂದಾವನದ ದರ್ಶನಾಶೀರ್ವಾದ ಪಡೆಯಲಿದ್ದಾರೆ. ಆನಂತರ ವಿದ್ವತ್ ಸಭಾ ಕಾರ್ಯಕ್ರಮವಿದೆ. ಜು.೧೨ರಂದು ಶ್ರೀ ಸತ್ಯಧರ್ಮ ತೀರ್ಥರ ಅನುಗ್ರಹದೊಂದಿಗೆ ಶ್ರೀ ಸತ್ಯಾತ್ಮ ತೀರ್ಥರು ಚಾತುರ್ಮಾಸ್ಯ ವ್ರತ ಸಂಕಲ್ಪ ಮಾಡಲಿದ್ದಾರೆ.
ಉತ್ತರಾದಿ ಮಠಾಧೀಶರ ಈ ಚಾತುರ್ಮಾಸ್ಯ ಕಾರ್ಯಕ್ರಮ ಜು.೧೨ರಿಂದ ಸೆ.೨೯ರವರೆಗೆ ಹೊಳೆಹೊನ್ನೂರಿನಲ್ಲಿ ನಡೆಯಲಿದೆ. ೮೦ ದಿನಗಳ ಈ ಅದ್ಧೂರಿಯ ಕಾರ್ಯಕ್ರಮದಲ್ಲಿ ನಾಡಿನ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರತಿದಿನ ಶ್ರೀಗಳಿಂದ ಸಂಸ್ಥಾನ ದೇವರ ಪೂಜೆ, ವಿವಿಧ ವಿದ್ವಾಂಸರಿoದ ಪ್ರವಚನ, ಹಬ್ಬ ಹರಿದಿನಗಳಂದು ವಿಶೇಷ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನಾ ಮಂಡಳಿಗಳಿoದ ಭಜನೆ, ಲೋಕಕಲ್ಯಾಣಾರ್ಥ ಹೋಮ ಹವನಾದಿಗಳು ನಡೆಯಲಿವೆ. ನಿತ್ಯವೂ ನಡೆಯುವ ವಿದ್ವತ್ ಸಭೆಯ ಕೊನೆಯಲ್ಲಿ ಶ್ರೀ ಸತ್ಯಾತ್ಮ ತೀರ್ಥರು ಅನುಗ್ರಹ ಸಂದೇಶ ನೀಡಲಿದ್ದಾರೆ.
ಚಾತುರ್ಮಾಸ್ಯ ಸಂಬoಧ ಮಾಹಿತಿಗಾಗಿ ಶ್ರೀನಿವಾಸಾಚಾರ್ಯ ನವರತ್ನ 9481064750, ಪುರುಷೋತ್ತಮಾಚಾರ್ಯ ನವರತ್ನ – 9483721572, ರಘೂತ್ತಮಾಚಾರ್ಯ ಸೊಂಡೂರ್ 8762406466 ಇವರನ್ನು ಸಂಪರ್ಕಿಸಲು ವ್ಯವಸ್ಥಾಪನಾ ಸಮಿತಿ ಮನವಿ ಮಾಡಿದೆ.
ಈ ಬಾರಿ ೮೦ ದಿನ ಚಾತುರ್ಮಾಸ್ಯ..!
ಈ ಸಂವತ್ಸರದಲ್ಲಿ ಶ್ರಾವಣ ಮಾಸ ಅಧಿಕ ಮಾಸ ಬಂದಿರುವುದರಿAದ ಚಾತುರ್ಮಾಸ್ಯದ ಅವಧಿಯೂ ವಿಸ್ತಾರವಾಗಿದೆ. ಸಾಮಾನ್ಯವಾಗಿ 52 ದಿನಗಳ ಕಾಲ ನಡೆಯುವ ಚಾತುಮಾಸ್ಯ ಅಧಿಕ ಮಾಸದ ಕಾರಣದಿಂದ 80 ದಿನಗಳ ಕಾಲ ನಡೆಯಲಿದೆ. ಅಧಿಕ ಮಾಸದಲ್ಲಿ ಮಾಡುವ ಧಾರ್ಮಿಕ ಕೆಲಸಗಳು ವಿಶೇಷ ಪುಣ್ಯ ನೀಡಲಿದೆ ಎಂಬ ನಂಬಿಕೆ ಇದೆ. ಹೀಗಾಗಿ ಅಧಿಕ ಮಾಸದ ಸಂದರ್ಭದಲ್ಲಿ ಶ್ರೀಗಳು ಈ ಭಾಗದಲ್ಲಿ ವ್ರತ ಕೈಗೊಂಡಿರುವುದು ಭಕ್ತರ ಸಂತಸವನ್ನು ಇಮ್ಮಡಿಗೊಳಿಸಿದೆ ಮತ್ತು ಗುರುಗಳ ಸೇವೆಗೆ ವಿಶೇಷ ಅವಕಾಶವೂ ದೊರಕಿದಂತಾಗಿದೆ.
ಶ್ರೀ ಸತ್ಯಧರ್ಮರ ಕುರಿತು..
ಹೊಳೆಹೊನ್ನೂರಿನಲ್ಲಿ ಉತ್ತರಾದಿ ಮಠದ ಪರಂಪರೆಯ ೨೮ನೇ ಯತಿಗಳಾದ ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದಂಗಳವರ ಮೂಲ ಬೃಂದಾವನವಿದೆ. ಶ್ರೀ ಸತ್ಯಧರ್ಮರು ಪುರಾಣ ರಾಜರೆನಿಸಿದ ಶ್ರೀಮದ್ ಭಾಗವತ, ರಾಮಾಯಣ, ಮಹಾಭಾರತಗಳಿಗೆ ಅತ್ಯದ್ಭುತವಾಗಿ ಅವರೂಪದ ಶೈಲಿಯಲ್ಲಿ ವ್ಯಾಖ್ಯಾನ ರಚಿಸಿ ವಿದ್ವತ್ ಪ್ರಪಂಚಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಹಾಗೂ ಅನೇಕ ರಸಭರಿತವಾದ ಸುಭಾಷಿತಗಳನ್ನು ರಚಿಸಿ ಜನಸಾಮಾನ್ಯರನ್ನೂ ಅನುಗ್ರಹಿಸಿದ್ದಾರೆ. ಅವರ ಬೃಂದಾವನದ ಎದುರು ಗಂಗಾಧರನ ಪ್ರಾದುರ್ಭಾವವಾಗಿದ್ದು ಅವರ ಮಹಿಮೆಗೆ ಸಾಕ್ಷಿಯಾಗಿದೆ. ಇಂದಿಗೂ ಗಂಗಾಧರನ ದರುಶನವನ್ನು ಪಡೆಯಬಹುದಾಗಿದೆ.
ಶ್ರೀ ಸತ್ಯಾತ್ಮ ತೀರ್ಥರ ಕುರಿತು..
ಶ್ರೀ ಸತ್ಯಪ್ರಮೋದ ತೀರ್ಥ ಶ್ರೀಪಾದಂಗಳವರಿoದ ಸನ್ಯಾಸಾಶ್ರಮ ಪಡೆದ ಶ್ರೀ ಸತ್ಯಾತ್ಮ ತೀರ್ಥರು ಉತ್ತರಾದಿ ಮಠದ 41ನೇ ಯತಿಗಳು. ಬಾಲಯತಿಗಳಾಗಿ ಸನ್ಯಾಸ ಸ್ವೀಕರಿಸಿದ ಶ್ರೀಗಳು ತಮ್ಮ ಅದ್ಭುತ ಪ್ರವಚನ, ಅಪರಿಮಿತ ಪಾಂಡಿತ್ಯ, ತಪಸ್ಸು ಮತ್ತು ಆಶ್ರಮ ಧರ್ಮದ ಪಾಲನೆಯ ವಿಷಯದಲ್ಲಿ ದೇಶ ವಿದೇಶಗಳಲ್ಲಿ ಖ್ಯಾತರಾಗಿದ್ದಾರೆ. ಕೋಟ್ಯಂತರ ಅನುಯಾಯಿಗಳನ್ನು ಹೊಂದಿದ್ದಾರೆ. 
ಶ್ರೀಗಳು ಕೇವಲ 22ನೇ ವಯಸ್ಸಿನಲ್ಲಿ ಸನ್ಯಾಸ ಪಡೆದು ವೈರಾಗ್ಯ ಶಿಖಾಮಣಿಗಳೆನಿಸಿದ್ದಾರೆ. ನಿತ್ಯ ಪೂಜೆ ಮತ್ತು ಪಾಠ, ಪ್ರವಚನವನ್ನು ಶ್ರೀಮಠದ ಆನೂಚಾನ ಪರಂಪರೆಯoತೆ ಮುಂದುವರೆಸಿದ್ದಾರೆ. ಶ್ರೀಮನ್ನಾö್ಯಯಸುಧಾ ಪಾಠ ಮತ್ತು ಮಂಗಳ ಮಹೋತ್ಸವಕ್ಕೆ ಹೊಸ ದಿಕ್ಕನ್ನೇ ನೀಡಿದ್ದಾರೆ. ಸಹಸ್ರಾರು ಯುವಕರು ಇವರ ಪ್ರವಚನಗಳಿಂದ ಪ್ರಭಾವಿತರಾಗಿ ಸನ್ಮಾರ್ಗದತ್ತ ಪರಿವರ್ತನೆಯಾಗಿದ್ದಾರೆ.
 
 
 
 
 
 
 
 
 
 
 

Leave a Reply