ಜು. 12: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರ -ಲಲಿತಾ ಮಹಾತ್ರಿಪುರ ಸುಂದರಿ ಮಹಾಯಾಗ

ದೊಡ್ಡಣಗುಡ್ಡೆ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಜುಲೈ 12 ಬುಧವಾರ ಲಲಿತಾ ಮಹಾತ್ರಿಪುರ ಸುಂದರಿ ಮಹಾಯಾಗ ಸಂಪನ್ನಗೊಳ್ಳಲಿದೆ.

ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇ| ಕೃಷ್ಣಮೂರ್ತಿ ತಂತ್ರಿ ನೇತೃತ್ವದಲ್ಲಿ ಯಾಗ ನಡೆಯಲಿದೆ.

ದಕ್ಷಿಣ ಭಾರತದಲ್ಲಿಯೇ ಅತೀ ಎತ್ತರದ ಮೇರು ಶ್ರೀಚಕ್ರ ಹೊಂದಿ, ಐಚ್ಛಿಕ ಫಲಪ್ರದ ಕ್ಷೇತ್ರವಾಗಿ ಬೆಳಗುತ್ತಿರುವ ಶ್ರೀಕ್ಷೇತ್ರದಲ್ಲಿ ಅಂದು ಬೆಳಿಗ್ಗೆ 10ರಿಂದ ಪುಣ್ಯಪ್ರದವಾದ ಈ ಯಾಗ ಆರಂಭಗೊಳ್ಳಲಿದೆ.

ಸಹಸ್ರ ಸಹಸ್ರ ಸಂಖ್ಯೆಯ ಕದಳಿಹಣ್ಣು (ಬಾಳೆಹಣ್ಣು)ನ್ನು ತ್ರಿಮಧುರ (ಜೇನು ತುಪ್ಪ ಸಕ್ಕರೆ)ಯುಕ್ತವಾಗಿ ಹೋಮಿಸಿ, ಲಲಿತಾ ಸಹಸ್ರನಾಮದಿಂದ ಅರ್ಚಿಸಿ ವಿಶೇಷ ನೈವೇದ್ಯಗಳನ್ನು ಸಮರ್ಪಿಸಿ ಲೋಕಮಾತೆ ತ್ರಿಪುರಾಂಬಿಕೆಯನ್ನು ಪ್ರಸನ್ನೀಕರಿಸುವ ಈ ಮಹಾನ್ ಯಾಗ ಪ್ರಯುಕ್ತ ಬ್ರಾಹ್ಮಣ ಸುವಾಸಿನಿ ಆರಾಧನೆ, ಕನ್ನಿಕರಾಧನೆ, ದಂಪತಿ ಪೂಜೆ, ಆಚಾರ್ಯ ಪೂಜೆ, ಕುಮಾರ- ಕುಮಾರಿಕಾ ಪೂಜೆ, ಆಚಾರ್ಯ ಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply