​ಪಿಪಿಸಿ : ಡಾ. ವಸಂತ ಶೆಟ್ಟಿ ಸಂಸ್ಮರಣ ಉಪನ್ಯಾಸ

ಪೂರ್ಣಪ್ರಜ್ಞ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ಡಾ. ವಸಂತ ಶೆಟ್ಟಿ ಸಂಸ್ಮರಣ ಉಪನ್ಯಾಸ ಎಪ್ರಿಲ್ 18 ರಂದು ನಡೆಯಿತು. ಡಾ.ಬಿ ವಸಂತ ಶೆಟ್ಟಿಯವರ ಸಹಪಾಠಿ ಹಾಗೂ MGM ಕಾಲೇಜಿನ ನಿವೃತ್ತ ಇತಿಹಾಸ ವಿಭಾಗದ ಮುಖ್ಯಸ್ಥೆಯಾದ ಡಾ ಮಾಲತಿ ಕೆ ಮೂರ್ತಿಯವರು ತುಳುನಾಡಿನ ಶಿಕ್ಷಣ, ಭಾಷೆಯ ಮೇಲೆ ಪಾಶ್ಚಿಮಾತ್ಯರ ಪ್ರಭಾವದ ಕುರಿತಾಗಿ ಉಪನ್ಯಾಸ ನೀಡಿದರು. ಡಾ.ಬಿ ವಸಂತ ಶೆಟ್ಟಿ ಅವರ ಇತಿಹಾಸದ ಆಸಕ್ತಿ, ಹಾಗೂ ಇತಿಹಾಸದ ಅಧ್ಯಯನದ ಕುರಿತು ಇಂದಿನ ಯುವ ಸಮುದಾಯ ಯಾವ ರೀತಿ ಜಾಗೃತರಾಗಬೇಕು ಎನ್ನುವ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಹಾಗೂ ಪಾಡ್ದನಗಳ ಕುರಿತಾಗಿ ಪಾಶ್ಚಿಮಾತ್ಯರ ಅಧ್ಯಯನದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಷ್ಣುಮೂರ್ತಿ ಪ್ರಭು ಇವರು ತುಳುನಾಡಿನ ರಾಜಕೀಯದಲ್ಲಿ ಪಾಶ್ಚಿಮಾತ್ಯರ ಪ್ರಭಾವದ ಕುರಿತಾಗಿ ಒಂದೆರಡು ಮಾತುಗಳನ್ನಾಡಿದರು. ಇನೋರ್ವ ಮುಖ್ಯ ಅತಿಥಿಗಳಾದ ಮಾಹೆ ಸಾಂಸ್ಕೃತಿಕ ಕೇಂದ್ರದ ಆಡಳಿತಾಧಿಕಾರಿಯಾದ ಡಾ.ಬಿ ಜಗದೀಶ್ ಶೆಟ್ಟಿಯವರು ಈ ಕಾರ್ಯಕ್ರಮದಲ್ಲಿ ಡಾ.ಬಿ ವಸಂತ ಶೆಟ್ಟಿಯವರ ಸಂಸ್ಮರಣಾ ಕಾರ್ಯಕ್ರಮದ ಕುರಿತಾಗಿ ಪ್ರಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಕ್ಷೇಮ ಪಾಲನಾ ಅಧಿಕಾರಿಗಳು ಮತ್ತು ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ರಮೇಶ್ ಟಿ. ಎಸ್ ವಹಿಸಿದ್ದರು. ಇವರು ವಿದ್ಯಾರ್ಥಿಗಳಿಗೆ ಇತಿಹಾಸ ಅಧ್ಯಯನದ ಮಹತ್ವದ ಕುರಿತಾಗಿ ವಿವರಿಸಿದರು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ನಿತ್ಯಾನಂದ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀ ಮಹೇಶ್ ಶೆಟ್ಟಿ ಮತ್ತು ಕಾಲೇಜಿನ ಉಪನ್ಯಾಸಕರುಗಳು ಉಪಸ್ಥಿತರಿದ್ದರು.

ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀ ಮಹೇಶ್ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿ, ಉಪನ್ಯಾಸಕಿ ಈ ಶ್ರೀಮತಿ ಶಿಲ್ಪಲತಾ ವಂದಿಸಿದರು. ವಿದ್ಯಾರ್ಥಿ ಶ್ರೀರಕ್ಷಾ ಪ್ರಾರ್ಥಿಸಿ, ಚೇತನಾ ಪೈ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply