ಕಂಗಣಬೆಟ್ಟು ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಲ್ಲಿ ನವೀಕೃತ ಗರ್ಭಗುಡಿ ಮತ್ತು ಸುತ್ತು ಪೌಳಿ ಸಮರ್ಪಣಾ ಪೂರ್ವಕ ಸಪರಿವಾರ ಶ್ರೀ ಬ್ರಹ್ಮ ಶ್ರೀ ವೀರಭದ್ರ ದೇವರುಗಳ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮ ಕುಂಭಾಬಿಷೇಕ

ಉಡುಪಿ: ಕಂಗಣಬೆಟ್ಟು ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಲ್ಲಿ ನವೀಕೃತ ಗರ್ಭಗುಡಿ ಮತ್ತು ಸುತ್ತು ಪೌಳಿ ಸಮರ್ಪಣಾ ಪೂರ್ವಕ ಸಪರಿವಾರ ಶ್ರೀ ಬ್ರಹ್ಮ ಶ್ರೀ ವೀರಭದ್ರ ದೇವರುಗಳ ಪುನಃ ಪ್ರತಿಷ್ಠೆಹಾಗೂ ಬ್ರಹ್ಮ ಕುಂಭಾಬಿಷೇಕ ಫೆಬ್ರವರಿ 14ರಿಂದ 21 ರ ವರೆಗೆ ನಡೆಯಲಿದೆ ಎಂದು ದೈವಸ್ಥಾನದ ಅಧ್ಯಕ್ಷರಾದ ಟಿ ರಾಘವೇಂದ್ರ ರಾವ್ ಕೊಡವೂರು ಹೇಳಿದರು.

ಅವರು ಮಂಗಳವಾರ ಉಡುಪಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫೆಬ್ರವರಿ 14ರಂದು ಶ್ರೀ ಕ್ಷೇತ್ರದ ಬ್ರಹ್ಮ ದೇವರ ಲಿಂಗದ ಪ್ರತಿಷ್ಠೆಗಾಗಿ ತೋನ್ಸೆ ಪಾರ್ ನಿಂದ ಕರಸೇವಕರು ಮತ್ತು ಕಮಿಟಿಯ ಸದಸ್ಯರು ಸೇರಿ ಉತ್ಕನನ ನಡೆಸಿ ಪ್ರಕೃತಿಯಿಂದಲೇ ನಿರ್ಮಿತವಾದ ಲಿಂಗದ ಆಕಾರದ ಶಿಲೆಯನ್ನು ಮಲ್ಪೆ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಿಂದ ಶ್ರೀ ಕ್ಷೇತ್ರಕ್ಕೆ ಮಧ್ಯಾಹ್ನ 2 ರಿಂದ ಭ್ಯವ್ಯ ಮೆರವಣಿಗೆ ಮೂಲಕ ತರಲಾಗುವುದು. ಅಂದು ಮಧ್ಯಾಹ್ನ 2.30ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಿಂದ ಭವ್ಯ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.

 

ಸಂಜೆ 6.30ಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಉಗ್ರಾಣ ಮಹೂರ್ತ ಮಾಡಲಿದ್ದು, ಭದ್ರತಾ ಕೊಠಡಿಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ, ತುಳುನಾಡ ಪ್ರಾಚೀನ ಸ್ವತ್ತುಗಳ ಪ್ರದರ್ಶನಾಲಯವನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದಾರೆ.

ಸಂಜೆ 7 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

 

ಫೆಬ್ರವರಿ 15ರಂದು ಸಂಜೆ 4 ಗಂಟೆಗೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಸಭಾಕಾರ್ಯಕ್ರಮದಲ್ಲಿ ಅದಮಾರು ಮಠದ ಶ್ರೀ ವಿಶ್ವಪ್ರೀಯ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.

ಫೆಬ್ರವರಿ 16ರಂದು ಬೆಳಿಗ್ಗೆ 8 ಗಂಟೆಯಿಂದ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು, ಸಂಜೆ 4.30 ರಿಂದ ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.

ಫೆಬ್ರವರಿ 17ರಂದು ಬೆಳಿಗ್ಗೆ 6 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಭಕ್ತಿ ಸಿಂಚನ ಭಜನಾ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ 5 ಗಂಟೆಗೆ ನಂದಿಗೋಣ ಹಾಗೂ ರಕ್ತೇಶ್ವರಿ ದೇವರ ದರ್ಶನ ಸೇವೆ ನಡೆಯಲಿದೆ.

ಫೆಬ್ರವರಿ 18ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬೆಳಿಗ್ಗೆ 6 ಗಂಟೆಗೆ ಆರಂಭವಾಗಲಿದ್ದು, ಅಂದು ಸಂಜೆ 4.30 ರಿಂದ ತೀರ್ಥಹಳ್ಳಿ ಬಾಳೆಗಾರು ಮಠದ ಶ್ರೀ ರಘುಭೂಣ ತೀರ್ಥರು, ಸೋದೆ ಮಠದ ಶ್ರೀ ವಿಶ್ವ ವಲ್ಲಭ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಮಠದ ಕಿರಿಯ ಸ್ವಾಮೀಜಿ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಅವರು ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಲಿದ್ದಾರೆ.

ಫೆಬ್ರವರಿ 19ರಂದು ಬೆಳಿಗ್ಗೆ 4ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಸಂಜೆ 6 ಗಂಟೆಯಿಂದ ಭಜನಾ ಕಾರ್ಯಕ್ರಮಗಳು ನಡೆಯಲಿವೆ. ಫೆಬ್ರವರಿ 20ರಂದು ಶನಿವಾರ ಬ್ರಹ್ಮ ಕುಂಭಾಭಿಷೇಕ ಮತ್ತು ನೇಮತ್ಸೋವ ನಡೆಯಲಿದ್ದು, ಸಂಜೆ ಸಭಾ ಕಾರ್ಯಕ್ರಮಗಳು ಜರುಗಲಿದೆ.

ಫೆಬ್ರವರಿ 21 ರಂದು ರಾತ್ರಿ 7 ಗಂಟೆಗೆ ಕಲ್ಕುಡ ಹಾಗೂ ಬೊಬ್ಬರ್ಯ ದೈವಗಳಿಗೆ ನೇಮೊತ್ಸವ ನಡೆಯಲಿದ್ದು, ಫೆಬ್ರವರಿ 26ರಂದು ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಂಭ್ರಮದ ಸ್ಮರಣ ಸಂಚಿಕೆ ಹಾಗೂ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ, ದೈವಸ್ಥಾನದ ಕಾರ್ಯದರ್ಶಿ ದಿನೇಶ್ ಶೆಟ್ಟಿಗಾರ್, ಕೋಶಾಧಿಕಾರಿ ರಮೇಶ್ ಸಿ ಬಂಗೇರಾ, ಗೌರವಾಧ್ಯಕ್ಷರುಗಳಾದ ಸಂತೋಷ್ ಶೆಟ್ಟಿ, ಪ್ರಶಾಂತ್ ಎಸ್ ಆಚಾರ್ಯ, ವಿವಿಧ ಸಮಿತಿಯ ದಿನೇಶ್ ಶೆಟ್ಟಿಗಾರ್, ಮತ್ತು ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply