ಶ್ರೀ ಕ್ಷೇತ್ರ ಭಗವತಿ ಕೆರ್ಗಾಲು : ದೃಢ ಸಂಪ್ರೋಕ್ಷಣ ಕಾರ್ಯಕ್ರಮ

ಬೈಂದೂರು ತಾಲೋಕಿನ ಕೆರ್ಗಾಲು ಶ್ರೀ ಭಗವತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜುಲೈ 11 ರಂದು ಶ್ರೀ ದೇವಿ ಹಾಗೂ ಪರಿವಾರ ದೇವರಿಗೆ “ದೃಢ ಸಂಪ್ರೋಕ್ಷಣ ಕಾರ್ಯಕ್ರಮ” ಜರಗಿತು.ಕಳೆದ ಮೇ ತಿಂಗಳಲ್ಲಿ ಮೂರು ದಿನ ಶ್ರೀ ದುರ್ಗಾಪರಮೇಶ್ವರಿ ,ಶ್ರೀ ವೀರಭದ್ರ ಸ್ವಾಮಿ ದೇವರು,ಹಾಗೂ ನಾಗದೇವರ ಸನ್ನಿಧಿಯಲ್ಲಿ ಮತ್ತು ವಿಷೇಶವಾಗಿ ಮಾಸ್ತಿ ಮೊದಲಾದ ಗಣಗಳ ಕಟ್ಟೆಯಲ್ಲಿ ಜರಗಿದ ಪ್ರತಿಷ್ಠಾ ಕಾರ್ಯದ ಅಂಗವಾಗಿ ದೇವರಿಗೆ ತಂತ್ರಿಗಳಾದ ಶ್ರೀ ಕೃಷ್ಣ ಸೋಮಯಾಜಿ ಕೋಟ ಇವರ ನೇತ್ರತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಯಥಾವತ್ತಾಗಿ ಜರಗಿದವು. ಹೋಮ – ಹವನ,
ಕಲಶಾಭಿಷೇಕ,ಅಲಂಕಾರ ಪೂಜೆ, ಮಹಾ ಮಂಗಳಾರತಿ,ಪ್ರಸಾದ ವಿತರಣೆ,ಆಶೀರ್ವಚನದ ಬಳಿಕ ಅನ್ನಸಂತರ್ಪಣೆ ಜರಗಿತು.ಶ್ರೀ ವೀರಭದ್ರ ದೇವರಿಗೆ ವಡೆ ನೈವೇದ್ಯ ಜೊತೆಗೆ ವಡೆ ಅಲಂಕಾರ ಎಲ್ಲರ ಗಮನಸೆಳೆಯಿತು.

ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀ ಭಗವತಿ ಬಿ.ಎಸ್. ಶ್ಯಾನುಭೋಗ್,ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶ್ರೀ ಸುಂದರ ಕೊಠಾರಿ,ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀ ನರಸಿಂಹ ಪೂಜಾರಿ ಪಡುಕೋಣೆ, ಕಾರ್ಯಾಧ್ಯಕ್ಷ ಶ್ರೀ ಸ್ಪೂರ್ತಿ ವಿಜಯಕುಮಾರ್ ಶೆಟ್ಟಿ ಖಂಬದಕೋಣೆ,ಪ್ರಧಾನ ಸಂಚಾಲಕ ಡಾ.ಬಾಲಚಂದ್ರ ಭಟ್,ಪ್ರಧಾನ ಕಾರ್ಯದರ್ಶಿ ಕೆ.ಪುಂಡಲೀಕ ನಾಯಕ್, ಕಾರ್ಯದರ್ಶಿ ಜನಾರ್ದನ ದೇವಾಡಿಗ,ಸದಸ್ಯರಾದ ಆನಂದ ಖಾರ್ವಿ,ರಮೇಶ್ ಪೈ.ಮತ್ತು ಊರಿನ ಪ್ರಮುಖರು,
ಭಕ್ತವೃಂದದವರು‌ ಉಪಸ್ಥಿತರಿದ್ದು ಕಾರ್ಯಕ್ರಮ ಚಂದಗಾಣಿಸಿದರು.

 
 
 
 
 
 
 
 
 
 
 

Leave a Reply