ಸಂಸ್ಕಾರಯುತ  ಕುಟುಂಬದಿಂದ ರಾಮರಾಜ್ಯ – ಶ್ರೀ ಶ್ರೀ ಶಕ್ತಿ ಶಾಂತಾನಂದ ಮಹರ್ಷಿ

ಕೊಡವೂರು ವಾರ್ಡಿನ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ನಿರ್ಮಾಣವಾದ ಬಬಿತ ಇವರ ಗ್ರಹ ಪ್ರವೇಶದಲ್ಲಿ ಮಾತನಾಡಿದ ಶ್ರೀ ಶ್ರೀ ಶಕ್ತಿ ಶಾಂತಾನಂದ ಮಹರ್ಷಿ, ನಮ್ಮ ಕುಟುಂಬದ ವ್ಯವಸ್ಥೆಯು ಪ್ರಭು ಶ್ರೀ ರಾಮಚಂದ್ರನಂತೆ ಇರಬೇಕು ತಂದೆ ತಾಯಿ ಹೇಳಿದಂತೆ ನಡೆಯಬೇಕು. ಅದೇ ರೀತಿ ಪ್ರಭು ಶ್ರೀ ಕೃಷ್ಣ ಪರಮಾತ್ಮನಂತೆ ಇರಬೇಕು, ಎಲ್ಲರನ್ನೂ ಒಳ್ಳೆಯ ರೀತಿಯಲ್ಲಿ ತಗೊಂಡು ಹೋದರೆ ಮಾತ್ರ ಕುಟುಂಬದಲ್ಲಿ ಸಂಸ್ಕಾರಯುತ ವಾದ ಕುಟುಂಬದಲ್ಲಿ ಬಂದರೆ ಮಾತ್ರ ನಾವು ಗುರು ಹಿರಿಯರಿಗೆ ಗೌರವ ಕೊಡಲು ಸಾಧ್ಯ ಈ ಮುಖಾಂತರ ಒಂದು ಕುಟುಂಬ ಬಲಿಷ್ಠವಾಗುತ್ತದೆ ಕುಟುಂಬ ಬಲಿಷ್ಟವಾದರೆ ಸಮಾಜ ಬಲಿಷ್ಟವಾಗುತ್ತದೆ ಈ ಮುಖಾಂತರ ದೇಶ ಬಲಿಷ್ಠವಾಗಿ ರಾಮರಾಜ್ಯ ನಿರ್ಮಾಣವಾಗಲು ಸಾಧ್ಯ ಎಂದು ಕುಟುಂಬ ಪ್ರಭೋಧನ್ ಕಾರ್ಯಕ್ರಮದಲ್ಲಿ ತಿಳಿಸಿದರು.
ಈ ಸಂಧರ್ಭದಲ್ಲಿ ದಾನಿಗಳಾದ ಅರುಣೋದಯ ಯುವಕ ಸಂಘ (ರಿ.) ಬಾಚನಬೈಲು, ಕೊಡವೂರು ಇವರ ವತಿಯಿಂದ  ಮೇಘಿ. ಸಂತೆಕಟ್ಟೆ ಇವರಿಗೆ ವೀಲ್ ಚೇರ್ ವಿತರಣೆಯನ್ನು, ದಾನಿಗಳಾದ ಶೇಕರ್ ಕೊಡವೂರು ಇವರ ವತಿಯಿಂದ  ಅಪ್ಪಿ ಕೊಡವೂರು, ಕಲ್ಯಾಣಿ ದೇವಾಡಿಗ ಉಡುಪಿ. ದಾಸಣ್ಣ ಲಕ್ಷ್ಮೀ ನಗರ ಇವರಿಗೆ  ಔಷಧಿಗೆ ಧನ ಸಹಾಯ ಮಾಡಲಾಯಿತು. ಮತ್ತು ಶ್ರೀಮತಿ ಆಶಾ ಅರುಣ್ ಮೆಂಡನ್ ಕೊಪ್ಪಲ್ ತೋಟ  ಹಾಗೂ ಶ್ರೀ ಕೃಷ್ಣ ವೃದ್ಧರ ಅಶ್ರಯಾಧಮ ಕೊಡವೂರು ಇವರುಗಳ ಹುಟ್ಟುಹಬ್ಬದ ನಿಮಿತ್ತ  ಅಂಗವಿಕಲರಿಗೆ, ದಿವ್ಯಾಂಗರಿಗೆ, ದುಡಿಯಲು ಸಾಧ್ಯವಿಲ್ಲದವರಿಗೆ  ಅಕ್ಕಿ ವಿತರಣೆ ಮಾಡಲಾಯಿತು.
ಈ ಸಂಧರ್ಬದಲ್ಲಿ ಶ್ರೀ ಶ್ರೀ ಶ್ರೀ ಶಕ್ತಿ ಶಂತಾನದ ಮಹರ್ಷಿ. ಅಧ್ಯಕ್ಷರು ದಿಗ್ವಿಜಯ ರಥಯಾತ್ರೆ / ಶ್ರೀ ರಾಮದಾಸ ಆಶ್ರಯ ಬೆಂಗಳೂರು. ಶ್ರೀ ಪ್ರಕಾಶ್ ಅಮ್ಮಣ್ಣಯ್ಯ. ಜ್ಯೋತಿಷ್ಯರು ಕಾಪು. ಸುಂದರ್ ಜಲಶಾಂತಿ ಕೊಡವೂರು. ಅಜಿತ್ ಕುಮಾರ್ ಕೊಡವೂರು. ಅಧ್ಯಕ್ಷರು, ಹಿಂದೂ ಯುವ ಸೇನೆ. ಉಡುಪಿ.
ವಾರ್ಡ್ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್. ಅಧ್ಯಕ್ಷರು
ದಿವ್ಯಾಂಗ ರಕ್ಷಣಾ ಸಮಿತಿ,ಕೊಡವೂರು.
ಮೋಹನ್ ಕುಂದರ್,ಪ ನಾಗರಾಜ ಆಚಾರ್ಯ ಮತ್ತಿತರರು ಹಾಜರಿದ್ದರು.
 
 
 
 
 
 
 
 
 
 
 

Leave a Reply