ಜ.22 : ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ್ಣಗುಡ್ಡೆಯಲ್ಲಿ ರಾಮನಾಮ ತಾರಕಮ್

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿಇದೇ ಜನವರಿ ತಿಂಗಳ 22ರ ಸೋಮವಾರದಂದು ಅಯೋಧ್ಯೆಯಲ್ಲಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆಯ ಸಂಭ್ರಮಾಚರಣೆಯ ಪರ್ವಕಾಲದಲ್ಲಿ ಬೆಳಗ್ಗೆ ಕ್ಷೇತ್ರದಲ್ಲಿ ರಾಮನಾಮ ತಾರಕ ಮಂತ್ರ ಹೋಮವು ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಗಳ ನೇತೃತ್ವದಲ್ಲಿ ನೆರವೇರಲಿರುವುದು.

 ಸಂಜೆ ಗಂಟೆ 4 ರಿಂದ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಹೆಸರಾಂತ ಕಲಾವಿದರ ಕೂಡುವಿಕೆಯೊಂದಿಗೆ ವಿವಿಧ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳು ಡಾಕ್ಟರ್ ಅರವಿಂದ ಹೆಬ್ಬಾರ್ ಅವರ ನೇತೃತ್ವದಲ್ಲಿ ನೆರವೇರಲಿದೆ.

 ಸಂಜೆ ಗಂಟೆ ನಾಲ್ಕರಿಂದ ಶ್ರೀಮತಿ ಚಂದ್ರಕಲಾ ಶರ್ಮಾ ಕೊರಂಗ್ರಪಾಡಿ ಅವರಿಂದ ರಾಮನಾಮ ಸಂಕೀರ್ತನೆ.

 ಸಂಜೆ ಗಂಟೆ 5 ರಿಂದ ಕೆಮ್ಮಣ್ಣು ಸಿಸ್ಟರ್ಸ್ ಕುಮಾರಿ ಸುಮೇದ ಹಾಗೂ ಕುಮಾರಿ ಶರಣ್ಯ ಅವರಿಂದ ರಾಮದುನ್ ಸಂಗೀತ ಕಾರ್ಯಕ್ರಮ.

 ಸಂಜೆ ಗಂಟೆ ಆರರಿಂದ ಧಾರ್ಮಿಕ ಸಭೆ ನಡೆಯಲಿದ್ದು ಶ್ರೀ ಮದಚ್ಚುತ ಪ್ರೇಕ್ಷಾಚಾರ್ಯ ಮಹಾಸಂಸ್ಥಾನ ಭೀಮನ ಕಟ್ಟೆಯ ಮಠದಿಪತಿಗಳಾದ ಶ್ರೀ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿ ದೀಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

 ಉಡುಪಿಯ ಶಾಸಕರಾದ ಶ್ರೀಯುತ ಯಶ್ ಪಾಲ ಸುವರ್ಣ ಅವರು ಮುಖ್ಯ ಅತಿಥಿ ಯಾಗಿ ಭಾಗವಹಿಸಲಿದ್ದಾರೆ.

 ಸಂಜೆ ಗಂಟೆ 6:30 ರಿಂದ ಅಲ್ಲಿ ನೋಡಲು ರಾಮ… ಸಂಗೀತ ರೂಪಕ ಖ್ಯಾತ ಕಲಾವಿದ ವಿನಯ್ ವಾರಣಾಸಿ ಬೆಂಗಳೂರು ಅವರಿಂದ ನೆರವೇರಲಿದ್ದು ಕುಮಾರಿ ಅರ್ಚನಾ ಹಾಗೂ ಸಮನ್ವಿ ಹಾಡುಗಾರಿಕೆಯಲ್ಲಿ ವೈಯಲಿನ್ನಲ್ಲಿ ಶ್ರುತಿ ಸಿಬಿ, ಮೈಸೂರು ಹಾಗೂ ಮೃದಂಗದಲ್ಲಿ ನಿಕ್ಷಿತ್, ತಬಲಾದಲ್ಲಿ ಮಾಧವ ಆಚಾರ್ಯ ಸಹಕರಿಸಲಿದ್ದಾರೆ. ಗಂಟೆ ಎಂಟಕ್ಕೆ ರಾತ್ರಿಯ ಪೂಜೆ ಹಾಗೂ ರಾತ್ರಿ 8:15 ರಿಂದ ಬೆಂಗಳೂರಿನ ಕಾಲ ಸ್ನೇಹಿ ಹಾಗೂ ನರ್ತನ ಯೋಗ ನೃತ್ಯ ಸಂಸ್ಥೆಯ ಶ್ರೀ ಯೋಗೇಶ್ ಕುಮಾರ್ ಮತ್ತು ಶ್ರೀಮತಿ ಸ್ನೇಹನಾರಾಯಣ್ ಅವರಿಂದ ರಾಮಕಥಾ ಸುಧಾ ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ರಾತ್ರಿ ಮಹಾ ಅನ್ನ ಸಂತರ್ಪಣೆ ನೆರವೇರಲಿದೆ.

 ಹಣತೆ ಬೆಳಕಿನ ಅಡಿಯಲ್ಲಿ ನೆರವೇರಲಿರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಎಲ್ಲಾ ಭಕ್ತರುಗಳು ಪಾಲ್ಗೊಳ್ಳುವಂತೆ  ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಆಮಂತ್ರಿಸಿದ್ದಾರೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply