ಉಡುಪಿಯ ಶ್ರೀ ಅನಂತೇಶ್ವರನ ಸೇವೆ ಶೀಘ್ರ ಫಲಪ್ರದ: ಪುತ್ತಿಗೆ ಶ್ರೀ 

ಉಡುಪಿ: ಐತಿಹಾಸಿಕ ಶ್ರೀ ಅನಂತೇಶ್ವರ ದೇವರ ವರ್ಷಾವಧಿ ಮಹಾರಥೋತ್ಸವದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಸಂಕೀರ್ತನ ಸೇವೆಯಲ್ಲಿ ಭಾಗವಹಿಸಿದ್ದ ಸಂಘಟನೆಗಳನ್ನು ಉದ್ದೇಶಿಸಿ ಆಡಳಿತ ಮೊಕ್ತೇಸರರಾದ ಪುತ್ತಿಗೆ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.

 

ಅನಂತೇಶ್ವರ ದೇವರ ಸೇವೆ ಶೀಘ್ರಫಲಪ್ರದ , ಶ್ರೀ ದೇವರ ಅನುಗ್ರಹದಿಂದ ವಿಶ್ವವನ್ನು ಆಕ್ರಮಿಸಿದ ಮಹಾಮಾರಿ ಪರಿಹಾರವಾಗಿ ಸಮಾಜದಲ್ಲಿ ಎಲ್ಲೆಡೆ ಆರೋಗ್ಯಪೂರ್ಣ ಐಕಮತ್ಯ ಮೂಡುವಂತಾಗಲಿ ಎಂದು ಹಾರೈಸಿದರು.     

ಉಡುಪಿಯ ಸುತ್ತಮುತ್ತಲ ಬೈಲೂರು, ಪುತ್ತೂರು, ಕನ್ನರ್ಪಾಡಿ, ಅಂಬಲಪಾಡಿ, ಕುಂಜಾರು, ಕೊರಂಗ್ರಪಾಡಿ, ಬೆಳಪು, ಕರಂಬಳ್ಳಿ,ಕೊಡವೂರು ಅಲೆವೂರು ಹಾಗೂ ರಘುಪ್ರವೀರ ತಂಡದ 11 ಸಂಘಟನೆಗಳು ಪಾಲ್ಗೊಂಡಿದ್ದವು.

ಶ್ರೀದೇವರ ಸಮ್ಮುಖದಲ್ಲಿ ದೀಪ ಬೆಳಗುವುದರ ಮೂಲಕ ಶ್ರೀಪಾದರು ಸಂಕೀರ್ತನ ಸಂಭ್ರಮಕ್ಕೆ ಚಾಲನೆ ನೀಡಿದರು. ವಿಪ್ರ ಸಂಘಟನೆಗಳ ಸಂಕೀರ್ತನ ತಂಡಗಳು ರಥಬೀದಿಯ ಪರಿಕ್ರಮದಲ್ಲಿ ವಿವಿಧ ಪ್ರಕಾರಗಳ ಕುಣಿತ ಭಜನೆ ನಡೆಸಿದರು. ಶ್ರೀ ಅನಂತೇಶ್ವರ ದೇವರ ರಥೋತ್ಸವದ ಮೆರವಣಿಗೆಯಲ್ಲಿ ಹರಿದಾಸರ ಕೀರ್ತನೆಗಳನ್ನು ಹಾಡುತ್ತ ನರ್ತಿಸುತ್ತ ಈ ತಂಡಗಳು ಪಾಲ್ಗೊಂಡಿದ್ದು ಉತ್ಸವಕ್ಕೆ ವಿಶೇಷ ಮೆರುಗು ತಂದಿತು.

ಆಡಳಿತ ಮಂಡಳಿಯ ಶ್ರೀ ನಾಗರಾಜ ಆಚಾರ್ಯ ಸ್ವಾಗತಿಸಿದರು. ಶ್ರೀವಿಷ್ಣುಮೂರ್ತಿ ಉಪಾಧ್ಯಾಯ ರಮೇಶ್ ಭಟ್ ಕೆ ಮತ್ತು ಮಹಿತೋಷ ಆಚಾರ್ಯ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

 
 
 
 
 
 
 
 
 
 
 

Leave a Reply