ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಮ್  ಕುರಿತಾಗಿ ಮಾಹಿತಿಯನ್ನುನೀಡಬೇಕು ಹಾಗೂ ಆಂಟ್ಯಿ ರ‍್ಯಾಗಿಂಗ್ ಸ್ಕ್ವಾಡ್ ‌ಗಳನ್ನು ಸ್ಥಾಪಿಸಬೇಕು~ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್‌ಚಂದ್ರ

“ಸಾಮಾನ್ಯ ಕಾನೂನಿನ ಅರಿವು ವಿದ್ಯಾರ್ಥಿಗಳಿಗೆ ಅತ್ಯಗತ್ಯ 1982ರಲ್ಲಿಯೇ ಈ ಕುರಿತಾಗಿ ಕಾಯಿದೆಯನ್ನು ರೂಪಿಸಲಾಗಿದೆ. 2019ರಲ್ಲಿ ಕಾಯಿದೆಯಲ್ಲಿ ಮಹತ್ತರವಾದ ತಿದ್ದುಪಡಿಗಳಾಗಿವೆ. ಕಾಲೇಜುಗಳಲ್ಲಿ ವಿದ್ಯಾರ್ಥಿ ಗಳಿಗೆ ಸೈಬರ್ ಕ್ರೈಮ್  ಕುರಿತಾಗಿ ಮಾಹಿತಿಯನ್ನು ನೀಡಬೇಕು ಹಾಗೂ ಆಂಟ್ಯಿ ರ‍್ಯಾಗಿಂಗ್ ಸ್ಕ್ವಾಡ್ ‌ಗಳನ್ನು ಸ್ಥಾಪಿಸಬೇಕು ಎಂದು ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್‌ಚಂದ್ರರವರು ಹೇಳಿದರು.
ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಆಂಟ್ಯಿ ರ‍್ಯಾಗಿಂಗ್ – ಆಂಟ್ಯಿ ಡ್ರಗ್ಸ್ – ಸೈಬರ್ ಕ್ರೈಮ್  ಕುರಿತಾದ ಅರಿವು ಕಾರ್ಯಕ್ರಮ ನಡೆಯಿತು. ಉಡುಪಿ ವೃತ್ತ ನಿರೀಕ್ಷಕರಾದ ಮಂಜುನಾಥ್ ರವರು ಮಾತನಾಡಿ, ಇಂದಿನ ಯುವ ಜನಾಂಗದವರು ಮಾನಸಿಕವಾಗಿ ದುರ್ಬಲ ರಾಗುತ್ತಿದ್ದಾರೆ. ಸತತ ಅವಮಾನವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ.
ಅವಮಾನಗಳನ್ನು ಸಹಿಸಿದಾಗ ಮಾತ್ರ ಜೀವನದಲ್ಲಿ ಗಟ್ಟಿಗೊಳ್ಳಲು ಸಾಧ್ಯ. ನಮ್ಮ ಉತ್ತಮ ಜೀವನಕ್ಕೆ ಮಹಾತ್ಮರ ಜೀವನ ಗಾಥೆಗಳೇ ಪ್ರೇರಣೆ. ಕಷ್ಟ – ಅವಮಾನಗಳೇ ಜೀವನದ ಮೆಟ್ಟಿಲು. ನಾವು ಜನರಿಗೆ ಸುಲಭವಾಗಿ ಸಿಗುವ ಹೂ ಹಣ್ಣು ಆಗಬಾರದು. ಕಷ್ಟಪಟ್ಟು ಕೀಳಬೇಕಾದ ಹೂ ಹಣ್ಣುಗಳಾಗಬೇಕು. ಯಾವುದೇ ಕಾರಣಕ್ಕೂ ದುರಭ್ಯಾಸವನ್ನು ಅಂಟಿಸಿಕೊಳ್ಳದೆ ಉತ್ತಮ ನಾಗರಿಕರಾಗಿ ಸುಭದ್ರ ದೇಶವನ್ನು ಕಟ್ಟುವಲ್ಲಿ ಮುಂದಾಗಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ. ಸುಕನ್ಯಾ ಮೇರಿ ಜೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಎನ್.ಎಸ್. ಎಸ್ ಯೋಜನಾಧಿಕಾರಿ  ರಮಾನಂದ್ ರಾವ್ ಕಾರ್ಯಕ್ರಮವನ್ನು ಆಯೋಜಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮನೀಶ್ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು. ಯೋಜನಾಧಿಕಾರಿ ಶ್ರೀಲತಾ ಆಚಾರ್ಯ ಸಹಕರಿಸಿದರು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಾಮಕೃಷ್ಣ ಉಡುಪ ವಂದಿಸಿದರು.
 
 
 
 
 
 
 
 
 
 
 

Leave a Reply