Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ಅಪರೂಪದ ದೃಶ್ಯ-ಶ್ರವಣ ಕಲಾಪ್ರಕಾರಗಳ ಮೇಳೈಕೆಯ ಕಾರ್ಯಕ್ರಮ

ಭಾನುವಾರ, ಜುಲೈ 17ರಂದು, ಬೆಳಿಗ್ಗೆ 10.30ರಿಂದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ‘ಗೀತಚಿತ್ರ’ ಎಂಬ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಚಿತ್ರಕಲೆಯ ಜುಗಲ್ ಬಂದಿ ಕಾರ್ಯಕ್ರಮ ನಡೆಯಲಿದೆ. ಇಸ್ರೋ ಸಂಸ್ಥೆಯಲ್ಲಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ, ವಿದುಷಿ ಶ್ರೀಮತಿ ಶುಭಲಕ್ಷ್ಮಿ ಕೃಷ್ಣಮೂರ್ತಿ ಅವರ ಗಾಯನಕ್ಕೆ, ಪ್ರಸ್ತುತ ಟಿಸಿಎಸ್ ಸಂಸ್ಥೆಯಲ್ಲಿ UXವಿಭಾಗದ ಮುಖ್ಯಸ್ಥರಾಗಿರುವ, ಖ್ಯಾತಕಲಾವಿದರಾದ ಶ್ರೀ ಶೇಷಗಿರಿ ಕೆ.ಎಂ. ಇವರು ಸಾಂದರ್ಭಿಕ ಚಿತ್ರಗಳನ್ನು ರಚಿಸಲಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದ SVBC ಚಾನಲ್ ನ ನಿರ್ದೇಶಕರೂ ಹಾಗೂ ಟಿಟಿಡಿ ಮಂಡಲಿಯ ನಿಕಟಪೂರ್ವ ಸದಸ್ಯರಾಗಿದ್ದ ಶ್ರೀ ಅನಂತ ಡಿ. ಪಿ. ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಲಾಸಕ್ತರು ಭಾಗವಹಿಸಲು ಕೋರಲಾಗಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!