ಕಾಳು ಮೆಣಸು ಕೊಯ್ಯುತ್ತಿದ್ದಾಗ ವಿದ್ಯುತ್ ಶಾಕ್‌; ಯುವಕ ಸ್ಥಳದಲ್ಲೇ ಸಾವು

ಕಾಳು ಮೆಣಸು ಕೊಯ್ಯುತ್ತಿದ್ದಾಗ ವಿದ್ಯುತ್ ಶಾಕ್‌ ಒಳಗಾಗಿ ಯುವಕನೊಬ್ಬ ಸ್ಥಳದಲ್ಲೇ ದಾರುಣ ಸಾವಿಗೀಡಾದ ಘಟನೆ ಬೇಲೂರು ತಾಲ್ಲೂಕಿನ ದೊಡ್ಡಸಾಲವರ ಗ್ರಾಮದಲ್ಲಿ ನಡೆದಿದೆ. 

ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ನಿವಾಸಿ ಸಮೀರ್ (32) ಮೃತ ವ್ಯಕ್ತಿ.‌ ಹುಕ್ಕುಂ ಚಂದ್ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಮೀರ್ ಕಾಳು ಮೆಣಸು ಕೊಯ್ಯುತ್ತಿದ್ದಾಗ ಅವಘಡ ಸಂಭವಿಸಿದೆ. ಇವರು ಕಬ್ಬಿಣದ ಏಣಿ ಬಳಸಿ ಕಾಳು ಮೆಣಸು ಕೊಯ್ಯುತ್ತಿದ್ದರು. ಈ ವೇಳೆ, ವಿದ್ಯುತ್ ತಂತಿ ತಗುಲಿದ್ದು ಶಾಕ್ ಆದ ಯುವಕ ಸ್ಥಳದಲ್ಲೇ ಕರಟಿ ಹೋಗಿದ್ದಾನೆ. 

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಎಸ್ಟೇಟ್ ಮಾಲಕನ ನಿರ್ಲಕ್ಷ್ಯದ ಬಗ್ಗೆ ಕೇಸು ದಾಖಲಿಸಿದ್ದಾರೆ. ‌

 
 
 
 
 
 
 
 

Leave a Reply