‘ಚುನಾವಣಾ ಪರ್ವ ದೇಶದ ಗರ್ವ’ ಸಂದೇಶ ಸಾರುವ ಜಾಗೃತಿ ಜಾಥ

ಜಿಲ್ಲಾಡಳಿತ ಮತ್ತುಸ್ವೀಪ್ ಸಮಿತಿ ಜಿಲ್ಲಾ‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ ಡಾ ಜಿ ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಉಡುಪಿ ಇವರ ಜೊತೆಗೂಡಿ ಸಾರ್ವತ್ರಿಕ ಚುನಾವಣೆಯಲ್ಲಿ ನೈತಿಕ ಮತದಾರರಾಗಿ ತಮ್ಮ ಮತದಾನದ ಹಕ್ಕು ಚಲಾಯಿಸುವಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಚುನಾವಣಾ ಪರ್ವ ದೇಶದ ಗರ್ವ’ ಎಂಬ ಸಂದೇಶ ಸಾರುವ ಜಾಗೃತಿ ಜಾಥವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವೂ ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿ ಆದತಂಹ ಡಾ.ಕೆ ವಿದ್ಯಾಕುಮಾರಿ ಇವರು ಚಾಲನೆ ನೀಡಿದರು.

ಈ ಜಾಥದಲ್ಲಿ ಕಾಲೇಜನ ಪ್ರಾಂಶುಪಾಲರು, ಕಾಲೇಜನ ಸಿಬ್ಬಂದಿಗಳು ಹಾಗೂ ಕಾಲೇಜನ 700 ವಿದ್ಯಾರ್ಥಿಗಳು ಹಾಗು ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳು ಜಾಗು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಾಳಾದ ಡಾ.ಐ.ಪಿ ಗಡಾದ ಇವರು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸೇರಿದ ಜಾಥದಲ್ಲಿ ಭಾಗವಹಿಸಿ ಮತದಾನ ಪ್ರತಿಜ್ಞಾ ವಿಧಿಯನ್ನು ನೆರೆದಿದ್ದ ಎಲ್ಲರಿಗೂ ಪ್ರತಿಜ್ಞೆ ಮಾಡಿಸಿದರು ಹಾಗು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಆದ ಡಾ.ಎಚ್ ಅಶೋಕ್ ಇವರು ಈ ಮತದಾನ ಪ್ರತಿಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರಿವು ಮೂಡಿಸಿದರು.

 
 
 
 
 
 
 
 
 
 
 

Leave a Reply