Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ರೋಟರಿ ಸಂಸ್ಥೆ ಕಾರ್ಕಳ ವತಿಯಿಂದ ವನಮಹೋತ್ಸವ

ರೋಟರಿ ಸಂಸ್ಥೆ ಕಾರ್ಕಳ ಇವರ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ರೋಟರಿ ಬಾಲಭವನದ ಸಮೀಪ ಜಿ ಡಿ ದಿನೇಶ್ ವಲಯಾರಣ್ಯಾಧಿಕಾರಿ ಪ್ರಾದೇಶಿಕ ವಲಯ ಕಾರ್ಕಳ ಇವರು ಚಾಲನೆ ನೀಡಿದರು “ಜಾಗತಿಕ ತಾಪಮಾನ ಏರಿಕೆ ಈ ಸಂದರ್ಭದಲ್ಲಿ ವನಮಹೋತ್ಸವದ ಮೂಲಕ ಸಮತೋಲನ ಮಾಡಬಹುದು “ಎಂದು ಅವರು ನುಡಿದರು.

ರೋಟರಿಯ ಮಾಜಿ ಜಿಲ್ಲಾ ಗವರ್ನರ್ ರೊಟೇರಿಯನ್ ಭರತೇಶ್ ಅದಿರಾಜ್ ,ವಲಯ ಸೇನಾನಿ ರೊಟೇರಿಯನ್ ಸುವರ್ಣ ನಾಯಕ್ ,ನಿಕಟಪೂರ್ವ ಅಧ್ಯಕ್ಷರಾದ ರೊ. ಸುರೇಶ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು .ರೋಟರಿ ಸಂಸ್ಥೆಯ ಅಧ್ಯಕ್ಷರಾದ ರೊಟೇರಿಯನ್ ಮೋಹನ್ ಶೆಣೈ ವೈ ಸ್ವಾಗತಿಸಿದರು .ಕಾರ್ಯದರ್ಶಿ ಶಿವಕುಮಾರ್ ಧನ್ಯವಾದವನ್ನು ನೀಡಿದರು . ರೊಟೇರಿಯನ್ ರಮಿತ್ ಶೈಲೇಂದ್ರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!