ಸರ್ವರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಗತ್ಯತೆ ಇದೆ – ಆನಂದ್ ಸಿ ಕುಂದರ್

ಕೋಟ: ಸರ್ವರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಗತ್ಯತೆ ಇದೆ ಈ ದಿಸೆಯಲ್ಲಿ ಆರೋಗ್ಯ ಶಿಬಿರಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದ್ದಾರೆ.

ಕೋಟ ಮಣೂರು ಪಡುಕರೆ ಸಂಯುಕ್ತ ಪ್ರೌಢಶಾಲೆ ಇಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಭಾರತ ಸರಕಾರ ಪ್ರಾಯೋಜಿತ ನಶಾ ಮುಕ್ತ ಭಾರತ ಯೋಜನೆಯಡಿ ನಶಾ ಮುಕ್ತ ಜಿಲ್ಲಾ ಘಟಕ ,ಕೋಟ ಗ್ರಾಮಪಂಚಾಯತ್ ,ಸಂಯುಕ್ತ ಪ್ರೌಢಶಾಲೆ ಮಣೂರು,ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಮಾಹೆ ಮಣಿಪಾಲ,ಡಿಪಾರ್ಟೆ್ಮಂಡ್ ಆಫ್ ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ ಮಣಿಪಾಲ,ದಂತ ವೈದ್ಯಕೀಯ ಮಹಾವಿದ್ಯಾಲಯ ಮಣಿಪಾಲ ,ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರ ಕೋಟ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಂತ ತಪಾಸಣಾ ಮತ್ತು ಮಾಹಿತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಪ್ರಸ್ತುತ ವಿದ್ಯಾಮಾನದಲ್ಲಿ ನಾನಾ ರೀತಿಯ ರೋಗರುಜಿನಗಳು ವ್ಯಾಪಕವಾಗಿ ತಾಂಡವ ಆಡುತ್ತಿದೆ ಇದಕ್ಕೆ ಕಾರಣ ನಾವುಗಳೆ ನಮ್ಮ ದೇಹಸ್ಥಿತಿಯ ಮೇಲೆ ನಮ್ಮಗೆ ಹಿಡಿತ ಹಾಗೂ ಕಾಳಜಿ ಇಲ್ಲದಿರುವುದೇ ಇದಕ್ಕೆ ಮೂಲವಾಗಿದೆ.ಆ ಮೂಲಕ ಪ್ರತಿ ಭಾಗದಲ್ಲಿ ಆಯೋಜನೆಗೊಳ್ಳುವ ಶಿಬಿರಗಳ ಪ್ರಯೋಜನ ಪಡೆದು ಸಮೃದ್ಧ ಆರೋಗ್ಯ ಸುಸ್ಥಿರ ಸಮಾಜಕ್ಕೆ ಕರೆ ಇತ್ತರು.
ಮುಖ್ಯ ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕ ನಿರಂಜನ್ ನಾಯಕ್ ಉದ್ಘಾಟಿಸಿದರು.
ಮುಖ್ಯ ಅಭ್ಯಾಗತರಾಗಿ ಕೋಟ ಗ್ರಾ.ಪಂ ಅಧ್ಯಕ್ಷ ಅಜಿತ್ ದೇವಾಡಿಗ,ಶಾಲಾ ಎಸ್‌ಡಿಎಂ ಸಿ ಅಧ್ಯಕ್ಷ ಎಂ ಜಯರಾಮ್ ಶೆಟ್ಟಿ,ಮಣಿಪಾಲ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಬಿನಿಲ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗ ಮಾಹೆ ಮಣಿಪಾಲ ಸಹಾಯಕ ನಿರ್ದೇಶಕರು ಪ್ರೋ.ರೋಶನ್ ಜತ್ತನ್, ಮಣಿಪಾಲ ಪಬ್ಲಿಕ್ ಹೆಲ್ತ್ ಡೆಂಟಿಸ್ಟಿç ವಿಭಾಗದ ಮುಖ್ಯಸ್ಥ ಡಾ.ರಾಮಪ್ರಸಾದ ವಿ.ಪಿ,ದಂತವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ದೀಪಕ್ ಸಿಂಗಲ್,ಮಣಿಪಾಲ ದಂತವೈದ್ಯಕೀಯ ಮಹಾವಿದ್ಯಾಲ ವೈದ್ಯರಾದ ಅಸೋಸಿಯೇಟಡಿನ್ ವಿಭಾಗದ ಡಾ.ವಿದ್ಯಾಸರಸ್ವತಿ ,ಕೋಟ ಗ್ರಾಮಪಂಚಾಯತ್ ಲೆಕ್ಕಪರಿಶೋಧಕಿ ಪೂರ್ಣಿಮಾ ಅಧಿಕಾರಿ ಮತ್ತಿತರರು ಉಪಸ್ಥಿತರಿದ್ದರು.ನಿರ್ದೇಶಕರು ಪ್ರದಾನ ತನಿಖಾಧಿಕಾರಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗ ಮಾಹೆ ಮಣಿಪಾಲ ಡಾ.ಗೀತಾ ಮಯ್ಯ ಸ್ವಾಗತಿಸಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿ ಕ್ಷೇಮಾವೃದ್ಧಿ ವಿಭಾಗ ಮಾಹೆ ಮಣಿಪಾಲ ಡಾ.ರಾಯನ್ ಮಥ್ಯಾಯಸ್ ನಿರೂಪಿಸಿ ವಂದಿಸಿದರು

ಕೋಟ ಮಣೂರು ಪಡುಕರೆ ಸಂಯುಕ್ತ ಪ್ರೌಢಶಾಲೆ ಇಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಭಾರತ ಸರಕಾರ ಪ್ರಾಯೋಜಿತ ನಶಾ ಮುಕ್ತ ಭಾರತ ಯೋಜನೆಯಡಿ ನಶಾ ಮುಕ್ತ ಜಿಲ್ಲಾ ಘಟಕ ,ಕೋಟ ಗ್ರಾಮಪಂಚಾಯತ್ ,ಸಂಯುಕ್ತ ಪ್ರೌಢಶಾಲೆ ಮಣೂರು,ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಮಾಹೆ ಮಣಿಪಾಲ,ಡಿಪಾರ್ಟೆ್ಮಂಡ್ ಆಫ್ ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ ಮಣಿಪಾಲ,ದಂತ ವೈದ್ಯಕೀಯ ಮಹಾವಿದ್ಯಾಲಯ ಮಣಿಪಾಲ ,ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರ ಕೋಟ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಂತ ತಪಾಸಣಾ ಮತ್ತು ಮಾಹಿತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಮಾತನಾಡಿದರು. ಕೋಟ ಗ್ರಾ.ಪಂ ಅಧ್ಯಕ್ಷ ಅಜಿತ್ ದೇವಾಡಿಗ,ಶಾಲಾ ಎಸ್‌ಡಿಎಂ ಸಿ ಅಧ್ಯಕ್ಷ ಎಂ ಜಯರಾಮ್ ಶೆಟ್ಟಿ,ಮಣಿಪಾಲ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಬಿನಿಲ್ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply