ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ಬೀಚ್ ಕ್ಲೀನಿಂಗ್ ಮತ್ತು ಸ್ವಚ್ಛತಾ ನಡಿಗೆ ಕಾರ್ಯಕ್ರಮ

ದೇಶಕಂಡ ಮಹಾನ್ ನಾಯಕ ಸ್ವಾತಂತ್ರ ಹೋರಾಟಗಾರ ಶಾಂತಿದೂತ ಮಹಾತ್ಮ ಗಾಂಧೀಜಿ ಅವರ 153ನೇ ಜಯಂತಿ ಪ್ರಯುಕ್ತ ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ Rotaract Club Bramavara ಇವರ ಸಹಯೋಗದೊಂದಿಗೆ “ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ಬೀಚ್ ಕ್ಲೀನಿಂಗ್ ಮತ್ತು ಸ್ವಚ್ಛತಾ ನಡಿಗೆ ಕಾರ್ಯಕ್ರಮ ನಡೆಯಿತು.

ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ, ಉಪಾಧ್ಯಕ್ಷರಾದ ಶ್ರೀ ವಾಸು ಪೂಜಾರಿ, ಸದಸ್ಯರಾದ ಶ್ರೀಮತಿ ವಿದ್ಯಾ, ಶ್ರೀಮತಿ ಪೂಜಾ, ಶ್ರೀ ಸತೀಶ್ ಕುಂದರ್, ಶ್ರೀ ಪ್ರಮೋದ್ ಹಂದೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಜಯರಾಮ ಶೆಟ್ಟಿ, ಕಾರ್ಯದರ್ಶಿ ಶ್ರೀ ಶೇಖರ್ ಮರವಂತೆ, Rotaract club ಬ್ರಹ್ಮಾವರದ ಸದಸ್ಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರಮಾದೇವಿ, ಸಾರ್ವಜನಿಕರು ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

 
 
 
 
 
 
 

Leave a Reply